
ಅಫಜಲಪುರ ; ಜನಪ್ರಿಯ ಶಾಸಕ ಎಂ.ವೈ.ಪಾಟೀಲ ಅವರು ಭ್ರಷ್ಟ ಅನ್ನೋ ಆರೋಪ ಮಾಡಿರುವ ಜ್ಯಾತ್ಯಾತೀತ ಜನತಾದಳ ಮುಖಂಡ ಶಿವಕುಮಾರ್ ನಾಟೀಕಾರ ಹೇಳಿಕೆ ಖಂಡಿಸುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಮೇಶ್ ಪೂಜಾರಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಪಕ್ಷದ ಮುಖಂಡರು ಮಾತನಾಡಲಿ. ಆದರೆ, ವೈಯಕ್ತಿಕವಾಗಿ ಭ್ರಷ್ಟ ಅನ್ನೋದು ನಿಂದನೆ ಮಾಡುವುದು ನಾವು ಸಹಿಸುವುದಿಲ್ಲ ಎಂದು ತಿಳಿಸಿದರು
ಎಪಿಎಂಸಿ ಅದ್ಯಕ್ಷ ಮಂಜುನಾಥ ಅಂಜುಟಗಿ, ರಾಜ್ಯದ 224 ಶಾಸಕರು ಸಹ ನಮ್ಮ ಶಾಸಕರಾದ ಎಂ.ವೈ.ಪಾಟೀಲ ಅವರನ್ನು ಗೌರವಿಸಿ ಮಾತನಾಡುತ್ತಾರೆ. ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಇರಬೇಕು. ಬೇರೆಯವರ ಮೇಲೆ ಆರೋಪ ಮಾಡುವವರ ಮುಂಚೆ ನಾವೆಷ್ಟೂ ಸ್ವಚ್ಚವಾಗಿ ಇದ್ದೇವೆ ಎಂದು ಅರಿತುಕೊಳ್ಳಲಿ ಎಂದು ನಾಟಿಕಾರ ಮನವರಿಕೆ ಮಾಡಿಕೊಳ್ಳಲಿ ತಿರುಗೇಟು ನೀಡಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ಮಾತನಾಡಿ, ನಾವು ಶಾಸಕರ ಕಟ್ಟಾ ಅನುಯಾಯಿಗಳು ಹೊರತು ಗುಲಾಮರಲ್ಲ ಅನ್ನೋದು ನಾಟೀಕಾರ ತಿಳಿದುಕೊಳ್ಳಲಿ. ತಾವು ಕೂಡಾ ರಾಜ್ಯ ಹಿಂದುಳಿದ ವರ್ಗಗಳ ಜೆಡಿಎಸ್ ರಾಜ್ಯ ಅದ್ಯಕ್ಷರಾಗಿದ್ದೀರಿ ನೀವು ಕೂಡಾ ಕುಮಾರಸ್ವಾಮಿ ಗುಲಾಮರಗಿದ್ದೀರಿ ಎಂದು ನಾಟೀಕಾರ ಉತ್ತರ ನೀಡಲಿ.
ಈ ಸಂದರ್ಭದಲ್ಲಿ ಶಿವಾನಂದ ಗಾಡಿಸಾಹುಕಾರ, ದತ್ತು ಬಂಡಗಾರ, ಚಂದ್ರಶೇಖರ್ ಕರಜಗಿ, ಸಿದ್ದು ಮಗಿ, ಶ್ರೀಶೈಲ ಪಾಟೀಲ, ಸಂತೋಷ ಮಣಮಿ, ವಿಶ್ವನಾಥ ಮಲಘಾಣ, ಮಲ್ಲಿಕಾರ್ಜುನ ವಾಳಿ, ಶರಣು ಈಶ್ವರಗೊಂಡ, ಆನಂದ ರಾಠೋಡ ಇದ್ದರು.
ಹಿರಿಯ ನಾಯಕರ ಬಗ್ಗೆ ಮಾತನಾಡಿದರೆ, ದೊಡ್ಡವರಾಗುತ್ತೀರಿ ಅನ್ನೋ ಭ್ರಮೆಯಲ್ಲಿ ಶಿವಕುಮಾರ್ ಇದ್ದಾರೆ. ವಿರೋಧ ಪಕ್ಷದ ಸ್ಥಾನಗಳಲ್ಲಿ ಇದ್ದವರು ಆಡಳಿತ ಪಕ್ಷಕ್ಕೆ ಅಭಿವೃದ್ಧಿ ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದರೆ ಜನ ನಿಮಗೆ ಮೆಚ್ಚುತ್ತಾರೆ. ಆದರೆ, ವಯಕ್ತಿಕ ಟೀಕೆಗಳು ಮಾಡುತ್ತಾ ಕಾಲಹರಣ ಮಾಡಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ತಾಲೂಕಿನ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸುತ್ತಾರೆ.
-ಸಿದ್ಧಾರ್ಥ್ ಬಸರಿಗಿಡ
ಮಾಜಿ ಜಿ.ಪಂ.ಸದಸ್ಯರು, ಅಫಜಲಪುರ































