Home ಜಿಲ್ಲೆ ಕಲಬುರಗಿ ರಾಷ್ಟ್ರೀಯ ಕಲಾ ಶಿಬಿರ ಸಂಪನ್ನ

ರಾಷ್ಟ್ರೀಯ ಕಲಾ ಶಿಬಿರ ಸಂಪನ್ನ

ಕಲಬುರಗಿ: ಜಲಗಾಂವ್‍ನ ಆರ್ಯನ್ ಇಕೋ ರೆಸಾರ್ಟ್‍ನಲ್ಲಿ ಆರ್ಯನ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ಕಲಾ ಶಿಬಿರವು ಸಂಪನ್ನಗೊಂಡಿತು.

ಭಾರತೀಯ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್‍ನ ಸಹಯೋಗದಲ್ಲಿ ನಡೆದ ಈ ಕಲಾ ಶಿಬಿರವು ಆಗಸ್ಟ್ 22ರಂದು ಎಲ್ಲಾ ಭಾಗವಹಿಸಿದ ಕಲಾವಿದರನ್ನು ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸುವ ಮೂಲಕ ಸಮಾರೋಪಗೊಂಡಿತು.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 20 ಕಲಾವಿದರು ಪ್ರಕೃತಿಯಿಂದ ಪ್ರೇರಿತವಾದ ವಿಷಯದ ಮೇಲೆ ಚಿತ್ರಗಳನ್ನು ರಚಿಸಿದರು. ಭಾಗವಹಿಸಿದ ಕಲಾವಿದರಲ್ಲಿ ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ದಾದಾಪೀರ್ ಚಿತ್ರದುರ್ಗ, ರೆಮಿ ಪೆÇೀಡಾರ್, ರಾಜಶೇಖರ್ ಶಾಮಣ್ಣ, ರಾಜಶೇಖರ್ ಚಿಂಚೊಳ್ಳಿ ಸೇರಿದಂತೆ ಮತ್ತಿತರರು ಇದ್ದರು.

ಡಾ. ಅವಿನಾಶ್ ಕಾಟೆ ಅವರು ಕಲಾ ಶಿಬಿರದ ನಿರ್ದೇಶಕರಾಗಿದ್ದು, ವೈಶಾಲಿ ಕಾಟೆ, ಎಂ. ಎನ್. ಮೂರ್ತಿ ಹಾಗೂ ರೆಹಮಾನ್ ಪಟೇಲ್ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.