Home ಜಿಲ್ಲೆ ಬೆಂಗಳೂರು ೬೦೦೦ ಸಾವಿರ ಲೇಬರ್ ಕಾರ್ಡ್ ಚಾಲ್ತಿಯಲ್ಲಿ

೬೦೦೦ ಸಾವಿರ ಲೇಬರ್ ಕಾರ್ಡ್ ಚಾಲ್ತಿಯಲ್ಲಿ

filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 76.0; hist255: 0.0; hist252~255: 0.0; hist0~15: 0.0;

ಕೆಜಿಎಫ್:ಆ:೨೦: ಕಟ್ಟಡ ಕೂಲಿ ಕಾರ್ಮಿಕರು ಹಾಗೂ ಇತರೆ ಕಟ್ಟಡ ಕಾರ್ಮಿಕರಿಗೆ ಸರ್ಕಾರ ಹಲವು ಸೌಲತ್ತುಗಳನ್ನು ನೀಡುತ್ತಿದೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕಾರ್ಮಿಕ ಇಲಾಖೆವತಿಯಿಂದ ನಗರ ಹಾಗೂ ಗ್ರಾಮೀಣಾಭಾಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾರ್ಮಿಕ ನಿರೀಕ್ಷಕಿ ಅಮರಾವತಿ ಹೇಳಿದರು.


ಕಾರ್ಮಿಕ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ನಿರೀಕ್ಷಕಿ ಅಮರಾವತಿ ತಾಲ್ಲೂಕಿನ ನಗರ ಹಾಗೂ ಗ್ರಾಮೀಣಭಾಗ ವ್ಯಾಪ್ತಿಯಲ್ಲಿ ೬೦೦೦ ಸಾವಿರ ಲೇಬರ್ ಕಾರ್ಡ್‌ಗಳು ಚಾಲ್ತಿಯಲ್ಲಿ ಇದ್ದು ೩೦೦೦ ಸಾವಿರ ಲೇಬರ್ ಕಾರ್ಡ್‌ದಾರರು ಮಾತ್ರ ಸಕ್ರಿಯವಾಗಿದ್ದು ೩೦೦೦ ಸಾವಿರ ಲೇಬರ್ ಕಾಡ್ ದಾರರು ನಿಷ್ಟ್ರೀಯರಾಗಿದ್ದಾರೆ ಕಟ್ಟಡ ಕೂಲಿ ಕಾರ್ಮಿಕರು ತಮ್ಮ ಕಾರ್ಡ್‌ಗಳನ್ನು ನಿಗದಿತ ಅವದಿಯೊಳಗೆ ಕಾರ್ಡ್‌ಗಳನ್ನು ನವೀಕರಣಗೊಳಿಸಬೇಕು ನೀವು ಕಾರ್ಡ್ ನವೀಕರಣಗೊಳಿಸಿಕೊಂಡರೆ ೬೦ ವರ್ಷ ಮೇಲ್ಪಪಟ್ಟವರಿಗೆ ಇಲಾಖೆ ೩೦೦೦ ಸಾವಿರ ಪೆನ್ಷನ್ ನೀಡುತ್ತಿದೆ ಪೆನ್ಷನ್ ಸೌಲಭ್ಯವನ್ನು ಪಡೆದುಕೊಳ್ಳಿ ಮತ್ತು ಮನೆಯಲ್ಲಿ ಮಕ್ಕಳಿಗೆ ಮದುವೆ ಮಾಡಲು ಮಕ್ಕಳ ವಿಧ್ಯಾಭ್ಯಾಸ ಮಾಡಲು ಸಾಲ ಸೌಲಭ್ಯ ಸಹ ಲಬ್ಯವಿದ್ದು ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು. ಸರ್ಕಾರಿಂದ ವಿವಿಧ ಸೌಲಭ್ಯಗಳಿಗೆ ಅರ್ಹ ಫಲಾನುಭವಿಗಳಾಗಲು ನೀವು ಮಧ್ಯವರ್ತಿಗಳ ಮೋರೆ ಹೋಗದೆ ನೇರವಾಗಿ ಕಚೇರಿಗೆ ಬನ್ನಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಾಗುವುದು ಎಂದು ಹೇಳಿದರು. ಲೇಬರ್ ಕಾರ್ಡ್‌ಗಳನ್ನು ಪಡೆದುಕೊಳ್ಳಲು ಕೋಲಾರದಲ್ಲಿರುವ ಅಂಬೇಡ್ಕರ್ ಸೇವಾ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಿ ಎಂದರು.