Home ಜಿಲ್ಲೆ ಕಲಬುರಗಿ ವಿವಾಹ ಕೇವಲ ಕಾನೂನು ಒಪ್ಪಂದವಲ್ಲ,ಸಮಾಜದ ಬುನಾದಿ: ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್

ವಿವಾಹ ಕೇವಲ ಕಾನೂನು ಒಪ್ಪಂದವಲ್ಲ,ಸಮಾಜದ ಬುನಾದಿ: ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್

ಕಲಬುರಗಿ,ಆ 19:ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಾನೂನು ವಿಭಾಗ, ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ಮರತೂರ ಸಹಯೋಗದಲ್ಲಿ “ಸಹಜೀವನದ ವಿಕಸನ: ವಿವಾಹ ಮತ್ತು ಲಿವ್-ಇನ್ ಸಂಬಂಧಗಳಲ್ಲಿನ ಪಾವಿತ್ರ್ಯತೆ, ಕಾನೂನುಬದ್ಧತೆ ಹಾಗೂ ಸಾಮಾಜಿಕ ಆಯಾಮಗಳು” ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಕರ್ನಾಟಕ ಮತ್ತು ಒಡಿಶಾ ಹೈಕೋರ್ಟ್‍ಗಳ ನಿವೃತ್ತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ ವಿವಾಹವನ್ನು ಕೇವಲ ಇಬ್ಬರ ನಡುವಿನ ಕಾನೂನು ಒಪ್ಪಂದವೆಂದು ಪರಿಗಣಿಸದೆ, ಕುಟುಂಬದ ಸ್ಥಿರತೆ, ಸಾಮಾಜಿಕ ಮೌಲ್ಯಗಳು ಮತ್ತು ಮುಂದಿನ ಪೀಳಿಗೆಯ ಹಿತಾಸಕ್ತಿಯನ್ನು ರೂಪಿಸುವ ಪ್ರಮುಖ ಸಾಮಾಜಿಕ ಸಂಸ್ಥೆಯಾಗಿ ನೋಡಬೇಕು ಎಂದರು.
ನಮ್ಮ ಭಾರತೀಯ ಪದ್ಧತಿಯಲ್ಲಿ ವಿವಾಹವು ಹದಿನಾರು ಸಂಸ್ಕಾರಗಳಲ್ಲಿ ಒಂದಾಗಿದ್ದು, ಬದ್ಧತೆ, ಪರಸ್ಪರ ಜವಾಬ್ದಾರಿ, ನಂಬಿಕೆ, ಕುಟುಂಬದ ನಿರಂತರತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಒಳಗೊಂಡ ಸಂಸ್ಕಾರವಾಗಿದೆ. ಆದರೆ ಬದಲಾಗುತ್ತಿರುವ ಜೀವನಶೈಲಿ ಮತ್ತು ವಿದೇಶಿ ಸಂಸ್ಕøತಿಯ ಪ್ರಭಾವಗಳ ನಡುವೆ ನಮ್ಮ ಭಾರತೀಯತೆ ಹಾಗೂ ನಮ್ಮ ಸಾಮಾಜಿಕ ಮೌಲ್ಯಗಳನ್ನು ಸಮಕಾಲೀನ ಸಂದರ್ಭದಲ್ಲಿ ಸಂರಕ್ಷಿಸುವ ಅಗತ್ಯವಿದೆ.
ವೈಯಕ್ತಿಕ ಸ್ವಾಯತ್ತತೆ ಮತ್ತು ಸಾಮಾಜಿಕ ಜವಾಬ್ದಾರಿಯ ನಡುವೆ ಸಮತೋಲನ ಅಗತ್ಯವಾಗಿದ್ದು, ಮಹಿಳೆಯರ ಸ್ವಾತಂತ್ರ್ಯ, ಸಮಾನತೆ ಮತ್ತು ಸಬಲೀಕರಣವನ್ನು ಗೌರವಿಸುವುದರ ಜೊತೆಗೆ ಕುಟುಂಬ ಮತ್ತು ಸಮಾಜದ ವಿಶಾಲ ಹಿತಾಸಕ್ತಿಯನ್ನೂ ಪರಿಗಣಿಸಬೇಕು ಎಂದು ತಿಳಿಸಿದರು.
ವಿವಾಹಕ್ಕೆ ಸಂಬಂಧಿಸಿದ ಕುಟುಂಬ ಕಾನೂನು, ಉತ್ತರಾಧಿಕಾರ, ಆಸ್ತಿ ಹಕ್ಕು, ನಿರ್ವಹಣಾ ಹಕ್ಕು, ಪೆÇೀಷಕರ ಜವಾಬ್ದಾರಿ ಮತ್ತು ಮಕ್ಕಳ ಹಕ್ಕುಗಳು ಸೇರಿದಂತೆ ಹಲವು ಕಾನೂನು ಆಯಾಮಗಳು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ ಎಂದರು. ಲಿವ್-ಇನ್ ಸಂಬಂಧಗಳನ್ನೂ ಕಾನೂನುಬದ್ಧ ಹಕ್ಕುಗಳು, ಮಕ್ಕಳ ಹಿತಾಸಕ್ತಿ, ಉತ್ತರಾಧಿಕಾರ, ನಿರ್ವಹಣೆ ಮತ್ತು ಪೆÇೀಷಕರ ಜವಾಬ್ದಾರಿ ಮುಂತಾದ ಅಂಶಗಳ ದೃಷ್ಟಿಯಿಂದ ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದರು.
ವೀರರಾಣಿ ಕಿತ್ತೂರು ಚೆನ್ನಮ್ಮ, ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಮತ್ತು ವಿದ್ವಾಂಸಿ ಉಭಯಭಾರತಿ ಅವರ ಉದಾಹರಣೆಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ದೀಕ್ಷಿತ್, ಭಾರತೀಯ ಪರಂಪರೆಯಲ್ಲಿ ಮಹಿಳೆಯರು ಆಡಳಿತ, ನಾಯಕತ್ವ ಮತ್ತು ಬೌದ್ಧಿಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಿರುವುದನ್ನು ವಿವರಿಸಿದರು.
ಕುಟುಂಬ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವುದು ಕಳವಳಕಾರಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ನಗರ ಪ್ರದೇಶಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ವೃದ್ಧ ಪೆÇೀಷಕರ ನಿರ್ಲಕ್ಷ್ಯ ಕಳವಳಕಾರಿ ಬೆಳವಣಿಗೆಯಾಗಿದೆ ಎಂದರು.
ಹಿಂದಿನ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಪರಸ್ಪರ ಸಹಕಾರ, ಬಾಂಧವ್ಯ ಮತ್ತು ಜವಾಬ್ದಾರಿಯ ಮನೋಭಾವವಿತ್ತು. ಆದರೆ ಬದಲಾಗುತ್ತಿರುವ ವಿವಾಹ ಪದ್ಧತಿ, ಲಿವ್-ಇನ್ ಸಂಬಂಧಗಳು ಹಾಗೂ ಪರಸ್ಪರ ನಂಬಿಕೆ ಮತ್ತು ಗೌರವದ ಕೊರತೆಯಿಂದ ನಮ್ಮ ಕುಟುಂಬಗಳ ಮತ್ತು ಸಮಾಜ, ದೇಶದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಹೇಳಿದರು. ಇಂತಹ ಸಮಕಾಲೀನ ವಿಷಯಗಳ ಕುರಿತು ಕಾನೂನು ವಿಭಾಗ ಮತ್ತು ಕಾನೂನು ವಿದ್ಯಾರ್ಥಿಗಳು ಚರ್ಚೆ ಹಾಗೂ ಸಂವಾದ ನಡೆಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಕಾನೂನು ವಿಭಾಗದ ಡೀನ್ ಪೆÇ್ರ. ಬಸವರಾಜ ಎಂ. ಕುಬಕಡ್ಡಿ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ. ಅನಂತ ಚಿಂಚುರೆ ವಂದನಾರ್ಪಣೆ ಸಲ್ಲಿಸಿದರು. ಡಾ. ರೇಣುಕಾ ಎಸ್. ಗುಬ್ಬೇವಾಡ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಜ್ಞಾನೇಶ್ವರ ಪ್ರತಿಷ್ಠಾನದ ಟ್ರಸ್ಟಿ ಮಹದೇವಯ್ಯ ಕರದಳ್ಳಿ, ದೆಹಲಿ ವಿಶ್ವವಿದ್ಯಾಲಯದ ಪೆÇ್ರ. ಸೀಮಾ, ಸಿಯುಕೆಯ ಪೆÇ್ರ. ಚನ್ನವೀರ್ ಆರ್.ಎಂ., ಪೆÇ್ರ. ಪವಿತ್ರಾ ಆರ್. ಆಲೂರು, ಪ್ರೊ.ಪ್ರಭಾಕರನ ಸೇರಿದಂತೆ ಕಾನೂನು ವಿಭಾಗದ ಪ್ರಾಧ್ಯಾಪಕರಾದ ಡಾ. ಶಶಿರೇಖಾ ಮಾಳಗಿ, ಡಾ. ಜಗದೀಶ್ ಚಂದ್ರ ಟಿ.ಜಿ., ಡಾ. ಜಯಂತ ಬೋರುವಾ, ಡಾ. ಕೆ.ಎಂ. ಕೃಷ್ಣ ಶೇಖರ್ ಶರ್ಮಾ, ಪಿ. ವೈಷ್ಣವಿ ನಾರಾಯಣಿ ಹಾಗೂ ಜುನು ದಾಸ್ ಸೇರಿದಂತೆ ವಿವಿಧ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ವಕೀಲರು ಉಪಸ್ಥಿತರಿದ್ದರು.