Home ಸುದ್ದಿ ರಾಷ್ಟ್ರೀಯ ರಣಬೀರ್-ರಹಾ ಜೊತೆ ಆಲಿಯಾ ಭಟ್ ಹಾಲಿಡೇ ಮಜಾ

ರಣಬೀರ್-ರಹಾ ಜೊತೆ ಆಲಿಯಾ ಭಟ್ ಹಾಲಿಡೇ ಮಜಾ

ಮುಂಬೈ, ಆ. 18- ಬಾಲಿವುಡ್‍ನ ಕ್ಯೂಟ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮುದ್ದಾದ ಮಗಳು ರಹಾ ಜೊತೆ ಕಳೆದ ರಜಾದಿನಗಳ ಸುಂದರ ನೆನಪುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಮುದ್ರದ ಮಧ್ಯೆ ಬೋಟ್‍ನಲ್ಲಿ ಕುಳಿತು ನೀಲಿ ಜಲರಾಶಿಯನ್ನು ಸವಿಯುತ್ತಿರುವ ಮತ್ತು ಮಗಳು ರಹಾ ಜೊತೆ ಮಲಗಿರುವ ಕ್ಯೂಟ್ ಫೆÇೀಟೋಗಳನ್ನು ಪೆÇೀಸ್ಟ್ ಮಾಡಿರುವ ಆಲಿಯಾ, “ಒಳ್ಳೆಯ ಹಳೆಯ ದಿನಗಳು, ಅಪ್ಪುಗೆಗಳು ಮತ್ತು ಪ್ರೀತಿ” ಎಂದು ಶೀರ್ಷಿಕೆ ನೀಡಿದ್ದಾರೆ.
ನಿರಂತರ ಸಿನಿಮಾ ಶೂಟಿಂಗ್ ಬ್ಯುಸಿ ಶೆಡ್ಯೂಲ್ ನಡುವೆಯೂ ಈ ಸ್ಟಾರ್ ಜೋಡಿ ತಮ್ಮ ಮಗಳಿಗಾಗಿ ಬಿಡುವು ಮಾಡಿಕೊಂಡು ಫ್ಯಾಮಿಲಿ ಟೈಮ್ ಎಂಜಾಯ್ ಮಾಡಿದ್ದು, ಈ ಕ್ಯೂಟ್ ಫೆÇೀಟೋಗಳು ಈಗ ಬಾಲಿವುಡ್ ಪ್ರಿಯರ ಮತ್ತು ಅಭಿಮಾನಿಗಳ ಮನ ಗೆದ್ದು ವೈರಲ್ ಆಗುತ್ತಿವೆ.