Home ಜಿಲ್ಲೆ ಕಲಬುರಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 19 ರಂದು ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 19 ರಂದು ಪ್ರತಿಭಟನೆ

ಆಳಂದ,ಆ.18-ತಾಲೂಕಿನ ನಿಂಬರ್ಗಾ ಮತ್ತು ದಂಗಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಬರುವ ಎಲ್ಲಾ ಕಂದಾಯ ಗ್ರಾಮಗಳ ಮೂಲಭೂತ ಸೌಲಭ್ಯ, ಸೌಕರ್ಯ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಿಂಬರ್ಗಾ ಮತ್ತು ದಂಗಾಪೂರ ಗ್ರಾಮ ಪಂಚಾಯತ್ ಮುಂದೆ ಆ.19 ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಿಂಬರ್ಗಾ ವಲಯ ಕಟ್ಟಡ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಯಲ್ಲಪ್ಪ ಎಸ್ ಕಟ್ಟಿಮನಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ನಿಂಬರ್ಗಾ ಮತ್ತು ದಂಗಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಬರುವ ಎಲ್ಲಾ ಕಂದಾಯ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.