
ಕಲಬುರಗಿ,ಆ.18-ಪತಿಯ ಕಿರುಕುಳ ತಾಳಲಾರದೆ ಪತ್ನಿಯೇ ಕೊಡಲಿಯಿಂದ ಹೊಡೆದು ಪತಿಯನ್ನು ಕೊಲೆ ಮಾಡಿರುವ ಘಟನೆ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸೇಡಂ ತಾಲೂಕಿನ ಹೆಡ್ಡಳ್ಳಿ ಗ್ರಾಮದ ನಾಗೇಂದ್ರ ಕಾಶಪ್ಪ ಮುಧೋಳ (32) ಎಂದು ಗುರುತಿಸಲಾಗಿದೆ. ಕೊಲೆ ಆರೋಪದಡಿ ಆತನ ಪತ್ನಿ ಸುಧಾರಾಣಿ ನಾಗೇಂದ್ರ ಮುಧೋಳ (27)27) ಅವರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಕುರಿ ಮೇಯಿಸುವ ಕೆಲಸದ ಹಿನ್ನೆಲೆಯಲ್ಲಿ ನಾಗೇಂದ್ರ ತನ್ನ ಪತ್ನಿಯ ತವರುಮನೆಯಾದ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಭಾನುವಾರ ತಡರಾತ್ರಿ ಪತ್ನಿಯೊಂದಿಗೆ ನಾಗೇಂದ್ರ ಜಗಳ ತೆಗೆದಿದ್ದಾನೆ ಎನ್ನಲಾಗಿದ್ದು, ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದೆ. ಆಗ ಸುಧಾರಾಣಿ ಕೊಡಲಿಯಿಂದ ನಾಗೇಂದ್ರನಿಗೆ ಹೊಡೆದಿದ್ದು,ಗಂಭೀರವಾಗಿ ಗಾಯಗೊಂಡ ಆತ ಮೃತಪಟ್ಟಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ರಾತ್ರಿ ಗಸ್ತು ತಿರುಗುತ್ತಿದ್ದ ರಟಕಲ್ ಠಾಣೆ ಪೆÇಲೀಸರ ಮುಂದೆ ಸುಧಾರಾಣಿ ಹಾಜರಾಗಿ, ತಾನೇ ಪತಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾಳೆ ಎಂದು ಪೆÇಲೀಸ್ ಮೂಲಗಳು ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.
ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಸೋಮವಾರ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಚಿಂಚೋಳಿ ಡಿವೈಎಸ್‍ಪ
ಸಂಗಮೇಶ ಹಿರೇಮಠ, ಸುಲೇಪೇಟ ಸಿಪಿಐ ಕೃಷ್ಣಕುಮಾರ ಪಾಟೀಲ ಹಾಗೂ ಪಿಎಸ್‍ಐ ಶೀಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ರಟಕಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































