Home ಜಿಲ್ಲೆ ಬೆಂಗಳೂರು ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಣೆ

ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಣೆ

ಕೋಲಾರ,ಆ.೧೮- ಸಾಮಾಜಿಕ ನ್ಯಾಯ ಸೇವಾ ಸಮಿತಿಯ ಕರ್ನಾಟಕ ರಾಜ್ಯ ಕಾರ್ಯಾಲಯ, ಕೋರಮಂಗಲ ಬೆಂಗಳೂರು ನಗರದ ಸ್ಪ್ರಿಂಗ್ ಬೋರ್ಡ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯ ಸೇವಾ ಸಮಿತಿಯ ವಿವಿಧ ಒಕ್ಕೂಟಗಳ ಎರಡು ವರ್ಷ ಸೇವಾ ಅವಧಿಗೆ ಆವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ಹಾಗೂ ಗುರುತಿನ ಚೀಟಿ ಸಮಾರಂಭವನ್ನು ಉದ್ಘಾಟಿಸಿ ಹಾಗೂ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.


ಈ ವೇಳೆ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಮತ್ತು ರಾಷ್ಟ್ರೀಯ ಸಂಚಾಲಕ ಪಿಲ್ಲರ್ ಎ. ಮಂಜು, ನಮ್ಮ ಭಾರತಾಂಬೆಯ ಮಡಿಲಲ್ಲಿ ಜನಿಸಿದ ಪ್ರತಿಯೊಬ್ಬ ಮಾನವನಿಗೂ ಸ್ವಾತಂತ್ರ್ಯ ಸಮಾನತೆ ಹಾಗೂ ಬಂಧುತ್ವ ಕಲಿಸುವಂತಹ ಧರ್ಮ ಬೇಕಿದೆ. ನಾವೆಲ್ಲರೂ ಸರ್ವಧರ್ಮ ಸಮನ್ವಯ, ಸೌಹಾರ್ದತೆ, ಸರ್ವರಿಗೂ ಸಮ ಬಾಳು ಮತ್ತು ಸರ್ವರಿಗೂ ಸಮಪಾಲು, ಸಮಾನತೆಯ ಧರ್ಮ, ಹಾಗೂ ನ್ಯಾಯ ಸಮ್ಮತ ಸಿದ್ಧಾಂತದಲ್ಲಿ ನಮ್ಮ ಸಾಮಾಜಿಕ ನ್ಯಾಯ ಸೇವಾ ಸಮಿತಿಯು ಮುನ್ನಡೆಯಬೇಕು ಎಂದರು.


ಅದರಂತೆ ಸರ್ವರೂ ಸಮಾನತೆಯಿಂದ ಬದುಕುವ ಅವಕಾಶವನ್ನು ನಮ್ಮ ಭಾರತ ಸಂವಿಧಾನ ಒದಗಿಸಿಕೊಟ್ಟಿದೆ ಈ ನಿಟ್ಟಿನಲ್ಲಿ ಈ ಭವ್ಯ ಸಂವಿಧಾನದ ಆಶಯಗಳನ್ನು ಬದ್ಧತೆಯಿಂದ ಈಡೇರಿಸುವುದೇ ನಮ್ಮ ಸಾಮಾಜಿಕ ನ್ಯಾಯ ಸೇವಾ ಸಮಿತಿಯ ಗುರಿಯಾಗಿರಬೇಕು. ಅಸಮಾನತೆಯನ್ನು ಹೋಗಲಾಡಿಸಿ ತರವಲ್ಲದ ಅನಗತ್ಯ ಎಲ್ಲಾ ಬೇಡಗಳನ್ನು ಬೇರು ಸಮೇತ ಕಿತ್ತೊಗಿದು ಸ್ವಚ್ಛಂದ ಸಮಾನತೆಯ ಸಮೃದ್ಧ ಸಮಾಜದ ಒಟ್ಟು ಆಶಯಗಳ ಗಟ್ಟಿ ಸಮಾಜವನ್ನು ನಿರ್ಮಿಸೋಕೆ ಕಂಕಣ ಬದ್ಧರಾಗಿ ಎಲ್ಲರೂ ಶ್ರಮಿಸಬೇಕು ಜೊತೆಗೆ ಮಾನವ ಸಂಕುಲದ ಸುರಕ್ಷತೆಗಾಗಿ ಜಾಗೃತಿ ಮೂಡಿಸುವ ಕಾರ್ಯ ಹಾಗೂ ನೊಂದ ಕಾರ್ಮಿಕರಾಗಿ, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ, ವಯೋ ವೃದ್ಧರ, ಹಿರಿಯ ನಾಗರಿಕ ಮತ್ತು ದಿವ್ಯಂಗಾದವರಿಗೆ ನಿರಂತರ ಸೇವೆಗಾಗಿ ಹೆಚ್ಚು ಒತ್ತುಕೊಟ್ಟು ಪ್ರೋತ್ಸಾಹಿಸಬೇಕು. ಅದೇ ರೀತಿ ಮಾನವ ಕಳ್ಳ ಸಾಕಾಣಿಕೆ ಹಾಗೂ ಮಾದಕ ದ್ರವ್ಯಗಳ ಸೇವನೆ ವಿರೋಧಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಿತಿಯನ್ನು ಇನ್ನೆಷ್ಟು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಬೇಕೆಂದು ತಿಳಿಸಿದರು.


ನೂತನ ಪದಾಧಿಕಾರಿಗಳ ಆಯ್ಕೆ : ನವೀನ್ ಪಿ. ಸಾಲಿನ್ಸ್ ರಾಜ್ಯ ಮುಖ್ಯ ಪ್ರಧಾನ ಕಾರ್ಯದರ್ಶಿ, ಎ.ವೆಂಕಟೇಶ ಗೌಡ ರಾಜ್ಯ ಪ್ರಧಾನ ಕಾರ್ಯದರ್ಶಿ ( ಕಾರ್ಮಿಕ ಒಕ್ಕೂಟ) ಮಂಗಳದೇವಿ ಜಿಲ್ಲಾಧ್ಯಕ್ಷರು, ಉಡುಪಿ ಚೌಡಪ್ಪ ಜಿಲ್ಲಾಧ್ಯಕ್ಷರು, ಬೆಂಗಳೂರು