
ನವಲಗುಂದ,ಆ.೧೪: ಮಲಪ್ರಭೆಗೆ ಮಹಾದಾಯಿ ಕಳಸಾ ಬಂಡೂರಿ ಜೋಡಣೆ ಬಗ್ಗೆ ನ್ಯಾಯಾದೀಕರಣದ ತಿರ್ಪಿನಂತೆ ಯೋಜನೆಯನ್ನು ಕಾರ್ಯಾರಂಬ ಮಾಡಬೇಕು ಎಂದು ಆಗ್ರಹಿಸಿ ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು ತಹಶೀಲ್ದಾರ ಕಚೇರಿ ಶಿರೇಸ್ತದಾರ ಅಜಯ ಆಯಿ ಮುಖಾಂತರ ಸಿಎಂ ಡಿ ಕೆ ಶಿವಕುಮಾರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆವರಿಗೆ ಗುರುವಾರ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕದಲ್ಲಿ ಬರಗಾಲ ಬಿದ್ದಿದೆ ರಾಜ್ಯ ಕೇಂದ್ರ ಸರಕಾರಗಳು ತಕ್ಷಣವೇ ಬರಗಾಲ ಘೋಷಿಸಿ ರೈತರಿಗೆ ಪರಿಹಾರ ಮತ್ತು ಬೆಳೆವಿಮೆ ಬಿಡುಗಡೆ ಹಾಗೂ ಹಿಂದಿನ ವರ್ಷದ ಬೆಳೆವಿಮೆ ಬಾಕಿ ಉಳಿದ ಪರಿಹಾರ ಬಿಡುಗಡೆ ಗೊಳಿಸಬೇಕು ಜನರಿಗೆ ಉದ್ಯೋಗ ಜಾನುವಾರುಗಳಿಗೆ ಆಹಾರ ಒದಗಿಸಬೇಕು.
ತಮಿಳುನಾಡಿಗೆ ೧೨ ಸಾವಿರ ಕೂಸೆಕ್ಸ್ ಪ್ರಮಾಣದಲ್ಲಿ ೧೫ ದಿನಗಳ ಕಾಲ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶಿಸಿರುವದನ್ನು ಖಂಡಿಸುತ್ತದೆ ಪುನಃ ಸಮಿತಿ ಪರಾಮರ್ಶೆ ಮಾಡಿ ತಮಿಳುನಾಡಿಗೆ ನೀರು ಬಿಡುವುದನ್ನು ತಕ್ಷಣವೇ ನಿಲ್ಲಿಸಬೇಕು.
ರಾಷ್ಟಿçÃಕೃತ ಬ್ಯಾಂಕುಗಳು ಸಿಬಿಲ್ ತೇಗಿದುಹಾಕಿ ರೈತರಿಗೆ ಮರಳಿ ಸಾಲ ಕೋಡಬೇಕು ಮತ್ತು ಉತ್ತರ ಕರ್ನಾಟಕ ಬರಗಾಲ ಬಿದ್ದಿದ್ದರಿಂದ ಸಹಕಾರಿ ಬ್ಯಾಂಕುಗಳು ಮತ್ತು ರಾಷ್ಟಿçÃಕೃತ ಬ್ಯಾಂಕುಗಳು ರೈತರಿಗೆ ಸಂಪೂರ್ಣಾ ಸಾಲ ಮನ್ನಾ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಸುಭಾಸಚಂದ್ರಗೌಡ ಪಾಟೀಲ, ಉಳಿವೆಪ್ಪ ಇಬ್ರಾಹಿಂಪುರ, ಗುರಪ್ಪ ಗಡ್ಡಿ, ಕೃಷ್ಣರಡ್ಡಿ ಕುರಹಟ್ಟಿ ಬಸನಗೌಡ ಫಕೀರಗೌಡ್ರ, ಬಾಂಬೆ ಮೇಸ್ತಿç, ಚಾಹುಸೇನಿ, ಭೀಮಪ್ಪ ಹಿರೇಗಣ್ಣವರ, ಕರಿಯಪ್ಪ ತಳವಾರ, ಯಲ್ಲಪ್ಪ ತಡಸಿ, ಮುರಗೆಪ್ಪ ಪಲ್ಲೇದ, ರವಿ ತೋಟದ, ಸಂಗಪ್ಪ ನಿಡವಣಿ ಸೇರಿದಂತೆ ಹಲವರು ಇದ್ದರು































