Home ಜಿಲ್ಲೆ ಕಲಬುರಗಿ ವಚನ ಆಷಾಢ: ಆನುಭಾವಿಕ ಪ್ರವಚನ ಸಮಾರೋಪ

ವಚನ ಆಷಾಢ: ಆನುಭಾವಿಕ ಪ್ರವಚನ ಸಮಾರೋಪ

ಕಲಬುರಗಿ: ನಾಡಿನ ನಾಡಿ ಮಿಡಿತ ಅರಿತಿರುವ ಮುದಗಲ್ ಕಲ್ಯಾಣಾಶ್ರಮದ ಪೂಜ್ಯ ಮಹಾಂತಸ್ವಾಮಿಗಳು 30 ದಿನಗಳ ಕಾಲ ಹೇಳಿದ ವಚನ ಆಷಾಢ ಪ್ರವಚನ ಆನುಭಾವಿಕ ನೆಲೆಯಲ್ಲಿ ನಡೆಯಿತು ಎಂದು ಕಲಬುರಗಿ ಬಸವ ಸಮಿತಿ ಉಪಾಧ್ಯಕ್ಷರಾದ ಡಾ.ಜಯಶ್ರೀ ದಂಡೆ ಅಭಿಪ್ರಾಯಪಟ್ಟರು.
ಇಲ್ಲಿನ ಜಯನಗರದ ಬಸವ ಸಮಿತಿಯಲ್ಲಿ ಜರುಗಿದ ವಚನ ಆಷಾಢ ಪ್ರವಚನ ಪ್ರಭುಲಿಂಗಲೀಲೆ: ಆನುಭಾವಿಕ ಪ್ರವಚನಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, 28 ಪುರಾಣಗಳು, 9 ಚರಿತಾಮೃತಗಳ ಓದಿನಅನುಭವದಿಂದಾಗಿ ಬಸವಾದಿ ಶರಣರ ಕುರಿತಾದ ಜ್ಞಾನದ ಬುತ್ತಿಯನ್ನು ಉಣಬಡಿಸಿದರು ಎಂದರು.ಪ್ರತಿಕ್ರಿಯೆ ನೀಡಿದ ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ, ಅಯೋಮಯ ಬದುಕಿನ ಗೊಂದಲಗಳಿಗೆ ಸಮಾಧಾನದ ಉತ್ತರನೀಡಿದಂತಿದ್ದ ಈ ಪ್ರವಚನಲೋಕ ನೆಮ್ಮದಿಗೆ ಅಗತ್ಯವಾದ ಶರಣರ ವಿಚಾರಗಳಿಂದ ಮತ್ತು ಪ್ರಮುಖ ಚಿಂತನೆಗಳಿಂದಕೂಡಿತ್ತು ಎಂದು ಅವರು ತಿಳಿಸಿದರು.
ಮುದಗಲ್ ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಲಬುರಗಿ ಬಸವ ಸಮಿತಿಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಸಂಗೀತಗಾರ ಶಂಕ್ರಯ್ಯ ಆರ್. ಗುರುಮಠ, ತಬಲಾ ವಾದಕ ಬಸವರಾಜಹೊನ್ನಿಗನೂರ ವೇದಿಕೆಯಲ್ಲಿದ್ದರು.ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ ಪ್ರಾಸ್ತಾವಿಕ ಮಾತನಾಡಿದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು.


ಕಲಬುರಗಿ ಬಸವ ಸಮಿತಿ ವತಿಯಿಂದ 2016ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಶ್ರಾವಣ ಹಾಗೂ ಆಷಾಢ ಮಾಸದಲ್ಲಿ ಪ್ರವಚನ ಕಾರ್ಯಕ್ರಮ, ಮಹಾದೇವಿಯಕ್ಕಗಳ ಸಮ್ಮೇಳನ, ಅರಿವಿನ ಮನೆ ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
-ಡಾ. ವೀರಣ್ಣ ದಂಡೆ, ಕಲಬುರಗಿ