Home ಜಿಲ್ಲೆ ಕಲಬುರಗಿ ಸುದ್ದಿ ಮಾಧ್ಯಮದ ಜೊತೆಗೆ ಜನಸೇವೆ ಮಾಡಿ:ಅಲ್ಲಮಪ್ರಭು ಪಾಟೀಲ್

ಸುದ್ದಿ ಮಾಧ್ಯಮದ ಜೊತೆಗೆ ಜನಸೇವೆ ಮಾಡಿ:ಅಲ್ಲಮಪ್ರಭು ಪಾಟೀಲ್

ಕಲಬುರಗಿ.ಜು.30: ಸುದ್ದಿ ಮಾಧ್ಯಮವು ಬಹು ಶಕ್ತಿಶಾಲಿ ಅದರಿಂದ ನೊಂದ ಮನಸ್ಸುಗಳ ಕಣ್ಣೊರೆಸಿ ಅವರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಿ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಅವರು ಅಖಿಲ ಭಾರತ ಮಾಧ್ಯಮ ಸಂಸ್ಥೆಯ ನಗರದ ಶರಣಸಿರಸಗಿ ಮಡ್ಡಿಯ ಕಲಬುರಗಿ ಜಿಲ್ಲಾ ನೂತನ ಕಚೇರಿ ಯನ್ನು ಉದ್ಘಾಟಿಸಿ ಮಾತನಾಡುತ್ತಾ ಹೇಳಿದರು.
ಸುರೇಶ ಕೋಟಗಿ ಅವರು ಬಹಳ ಅನುಭವದ ಜೊತೆ ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಿ ಮಾಧ್ಯಮದಲ್ಲಿ ಕೆಲಸ ಮಾಡಿದ್ದಾರೆ ಅದರ ಫಲವಾಗಿ ಇಂದು ಭಾರತದಾದ್ಯಂತ ಸುಮಾರು ಎರಡೂವರೆ ಲಕ್ಷದಷ್ಟು ಓದುಗರನ್ನು ಹೊಂದಿರುವ ಈ ಮಾಧ್ಯಮದ ನೂತನ ಜಿಲ್ಲಾ ಕಚೇರಿ ಆರಂಭಿಸಿದ್ದಾರೆ.ಇದು ಇನ್ನಷ್ಟು ಬೆಳೆಯಲಿ ಎಂದು ಹೇಳಿ ಕೋಟಗಿ ಅವರಿಗೆ ಸನ್ಮಾನ ಮಾಡಿದರು.ಜಿಲ್ಲಾ ವರದಿಗಾರ ಸುರೇಶ ಕೋಟಗಿ ಅವರು ಸರ್ವರನ್ನು ಸ್ವಾಗತಿಸಿದರು.
ಕಾರ್ಯಕ್ರಮ ದಲ್ಲಿ ಕಿರಣ್ ಪಾಟೀಲ್ ಬಾಬುರಾವ್ ಯಡ್ರಾಮಿ ಶರಣಗೌಡ ಪಾಟೀಲ್ ಮುಂತಾದವರೂ ಉಪಸ್ಥಿತರಿದ್ದರು.ಆರಂಭದಲ್ಲಿ ಕಾವೇರಿ ಹಿರೇಮಠ್ ಮತ್ತು ಕಿರಣ್ ಪಾಟೀಲ್ ಮುದ್ದುರಾಮನ ಹಾಡನ್ನು ಹೇಳಿದರು.