Home ಜಿಲ್ಲೆ ಕಲಬುರಗಿ ಚಿಂಚೋಳಿಯಲ್ಲಿ ಹಾರಕೂಡ ಶ್ರೀಗಳಿಗೆ ಸನ್ಮಾನ

ಚಿಂಚೋಳಿಯಲ್ಲಿ ಹಾರಕೂಡ ಶ್ರೀಗಳಿಗೆ ಸನ್ಮಾನ

ಚಿಂಚೋಳಿ,ಜು.30: ಇಲ್ಲಿನ ಹಾರಕೂಡ ಕಲ್ಯಾಣ ಮಂಟಪದಲ್ಲಿ ನಡೆದ ಗುರು ಪೂರ್ಣಿಮೆ ಸಮಾರಂಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ವತಿಯಿಂದ ಕರ್ನಾಟಕ ಸರಕಾರ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಭಾಜನರಾಗಿರುವ ಹಾರಕೂಡ ಮಠದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರಿಗೆ ಅಭಿನಂದನಾ ಪತ್ರ, ಸ್ಮರಣಿಕೆ ನೀಡಿ ಸತ್ಕರಿಸಿ ಗೌರವಿಸಲಾಯಿತು. ಕನ್ನಡ ಸಾಹಿತ್ಯಕ್ಕೆ ಹಾರಕೂಡ ಮಠದ ಸೇವೆ ಅಮೂಲ್ಯವಾಗಿದೆ. ಶ್ರೀ ಮಠದ ವತಿಯಿಂದ ಹಲವಾರು ಮೌಲಿಕ ಕನ್ನಡ ಗ್ರಂಥಗಳು ಹೊರಬಂದಿವೆ. ಶ್ರೀಗಳ ಕನ್ನಡ ಸೇವೆ ಗುರುತಿಸಿ, ಜಿ.ಪಿ.ರಾಜರಾತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ನೀಡಿರುವುದಕ್ಕೆ ಕರ್ನಾಟಕ ಸರಕಾರಕ್ಕೆ ಅಭಿನಂದಿಸುತ್ತೇನೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ.ಮಲ್ಲಿಕಾರ್ಜುನ ಪಾಲಾಮೂರ್ ಹೇಳಿದರು ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಐನೋಳಿ, ಕದಳಿ ವೇದಿಕೆಯ ತಾಲೂಕಾ ಅಧ್ಯಕ್ಷರಾದ ಗೀತಾರಾಣಿ ಐನೋಳಿ, ಶಾಮಲಾ ಮಠಪತಿ, ಸುಭಾಸ ಸೀಳಿನ, ವೀರೇಶ ಎಂಪಳ್ಳಿ, ಇದ್ದರು