Home ಜಿಲ್ಲೆ ಕಲಬುರಗಿ ಚಿಮ್ಮಇದಲಾಯಿ ಸಿದ್ದರಾಮೇಶ್ವರ ಹಿರೇಮಠದ ಭಕ್ತರಿಂದ ಗುರುಪೂರ್ಣಿಮೆ

ಚಿಮ್ಮಇದಲಾಯಿ ಸಿದ್ದರಾಮೇಶ್ವರ ಹಿರೇಮಠದ ಭಕ್ತರಿಂದ ಗುರುಪೂರ್ಣಿಮೆ

ಚಿಂಚೋಳಿ,ಜು 30: ತಾಲೂಕಿನ ಚಿಮ್ಮಇದಲಾಯಿ ಗ್ರಾಮದ ಸಿದ್ದರಾಮೇಶ್ವರ ಹಿರೇಮಠದ ಭಕ್ತರು ಗುರುಪೂರ್ಣಿಮೆ ನಿಮಿತ್ಯ ಪರಮ ಪೂಜಾ ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯರÀ ಸಾನಿಧ್ಯದಲ್ಲಿ ಶ್ರೀಗಳಿಗೆ ಇಷ್ಟಲಿಂಗ ಪೂಜೆ ಮತ್ತು ಪಾದ ಪೂಜಾ ಹಾಗೂ ಪುಷ್ಪಾರ್ಚನೆ ನೆರವೇರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ನಂತರ ಕಾರ್ಯಕ್ರಮ ಕುರಿತು ಪರಮ ಪೂಜಾ ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯರ, ಅವರು ಮಾತನಾಡಿ ಗುರು ಪೂರ್ಣಿಮೆ ಅಂಗವಾಗಿ ಭಕ್ತರು ಸೇವೆ ಸಲ್ಲಿಸಿದರೆ ಈ ಸೇವೆಯು ಏಕೆಂದರೆ ಗುರುಪೂರ್ಣಿಮೆ ಮಹತ್ವದ ಏನೆಂದರೆ ಎಲ್ಲರೂ ವಿದ್ಯಾರ್ಥಿ ಇದ್ದಾಗ ಶಾಲೆಗೆ ಹೋಗುದ ನಂತರ ನಾವು ಶಾಲೆಗೆ ಟೀಚರಿಗೆ ಗುರು ಎಂದು ತಿಳಿದುಕೊಂಡು ಗುರುವಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡುತ್ತಾರೋ ಅದೇ ರೀತಿ ನಮಗೂ ಕೂಡ ಎಲ್ಲ ಭಕ್ತರು ಸೇರಿಕೊಂಡು ಗುರು ನಾನು ಎಂದು ತಿಳಿದುಕೊಂಡು ಗುರುಪೂರ್ಣಿಮೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಯುವ ಅಧ್ಯಕ್ಷರಾದ ವೀರೇಶ ಎಂಪಳ್ಳಿ, ಚಿಮ್ಮಾಇದ್ಲಾಯಿ ಗ್ರಾಮದ ಮುಖಂಡರಾದ ಶಿವರಾಜ ದೇಶಮುಖ್, ಮಲ್ಲಿಕಾರ್ಜುನ ಬಳಕೇರಿ, ಶಿವಶರಣಪ್ಪ ಡೆಂಗಿ, ವೀರೇಶ್ ದೇಸಾಯಿ, ಗುಂಡಪ್ಪ ಅವರಾದಿ, ಸೋಮಶೇಖರ್ ಸ್ವಾಮಿ, ಅಮೃತ ಮೋತಪ್ಪಳ್ಳಿ, ಲಕ್ಷ್ಮಿಕಾಂತ ಕೋಂಟಿ, ಶಿವರಾಜ್ ಚಟನಳ್ಳಿ, ಮುಗಲಪ್ಪ ದಾಸ್, ಮತ್ತು ಅನೇಕ ಚಿಮ್ಮಾಇದ್ಲಾಯಿ ಗ್ರಾಮದ ಭಕ್ತರು ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು