
ವಾಷಿಂಗ್ಟನ್/ ಟೆಲ್ ಅವೀವ್.ಜು೩೦:ಇರಾನ್ ಹಾಗೂ ಮಧ್ಯಪ್ರಾಚ್ಯದ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವೈಟ್ ಹೌಸ್‌ನಲ್ಲಿ ಸುಮಾರು ೯೦ ನಿಮಿಷಗಳ ಕಾಲ ರಹಸ್ಯ ಹಾಗೂ ಮಹತ್ವದ ಸಭೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಇರಾನ್ ಸಂಘರ್ಷದ ಮುಂದಿನ ನಡೆಯ ಕುರಿತು ಎರಡೂ ದೇಶಗಳ ನಾಯಕರು ಪ್ರಮುಖ ೩ ಸಾಧ್ಯತೆಗಳು ಅಥವಾ ಮಾರ್ಗಗಳನ್ನು ಗಂಭೀರವಾಗಿ ಪರಿಶೀಲಿಸಿದ್ದಾರೆ. ಶಾಂತಿ ಹಾಗೂ ಸಮಾಧಾನಕರ ಪರಿಹಾರಕ್ಕಾಗಿ ಮಾತುಕತೆಯ ಮಾರ್ಗ.ಆರ್ಥಿಕ ದಿಗ್ಬಂಧನ ಮತ್ತು ಒತ್ತಡ ಕಠಿಣ ನಿರ್ಬಂಧಗಳ ಮೂಲಕ ಇರಾನ್ ಮೇಲೆ ನಿಯಂತ್ರಣ ಹೇರುವುದು.ಸೇನಾ ದಾಳಿ ಮಿಲಿಟರಿ ಬಲಪ್ರಯೋಗದ ಮೂಲಕ ಪ್ರತ್ಯುತ್ತರ ನೀಡುವುದು.
ಇರಾನ್ ಮೇಲಿನ ಮುಂದಿನ ಕ್ರಮಗಳ ವಿಚಾರದಲ್ಲಿ ಎಲ್ಲ ಆಯ್ಕೆಗಳನ್ನೂ ತೆರೆದಿಡಬೇಕು ಎಂದು ನೆತನ್ಯಾಹು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಅಮೆರಿಕ ತನ್ನ ಸೇನಾ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿದ ಬೆನ್ನಲ್ಲೇ, ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದು, ಪರಿಸ್ಥಿತಿ ಮತ್ತಷ್ಟು ಬಿಸಿಯಾಗಿದೆ. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಪ್ರತ್ಯುತ್ತರದ ಎಚ್ಚರಿಕೆ ನೀಡಿದ್ದಾರೆ.































