Home ಜಿಲ್ಲೆ ಬೆಂಗಳೂರು ಪ್ರಧಾನ್-ಪ್ರಹ್ಲಾದ್ ’ವೈಚಾರಿಕ ಅವಳಿಗಳು; ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ

ಪ್ರಧಾನ್-ಪ್ರಹ್ಲಾದ್ ’ವೈಚಾರಿಕ ಅವಳಿಗಳು; ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ

ಬೆಂಗಳೂರು.ಜು೨೯:ಕೇಂದ್ರದ ನೂತನ ಶಿಕ್ಷಣ ಸಚಿವರಾಗಿ ಸಂಸದ ಪ್ರಹ್ಲಾದ್ ಜೋಶಿ ಅವರನ್ನು ನೇಮಕ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಿರ್ಧಾರದಿಂದ ಕನ್ನಡಿಗರು ತಲೆತಗ್ಗಿಸುವಂತಾಗಿದೆ ಎಂದು ಕಿಡಿಕಾರಿರುವ ಅವರು, ಜೋಶಿ ಅವರನ್ನು ತಕ್ಷಣವೇ ಶಿಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.’ಆರ್‌ಎಸ್‌ಎಸ್ ಪ್ರಭಾವದ ಆಡಳಿತ’ಈ ಕುರಿತು ಸಾಮಾಜಿಕ ಜಾಲತಾಣ ’ಎಕ್ಸ್’ (ಘಿ) ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, “ಕರ್ನಾಟಕದ ಸಂಸದರೊಬ್ಬರು ದೇಶದ ಶಿಕ್ಷಣ ಸಚಿವರಾಗಿದ್ದಾರೆ ಎಂಬ ಹೆಮ್ಮೆ ನಮಗಿರಬೇಕಿತ್ತು. ಆದರೆ, ಅತ್ಯಾಚಾರ ಸಂತ್ರಸ್ತೆಯ ಪರವಾಗಿ ನಿಂತವರನ್ನು ಸಮರ್ಥಿಸಿಕೊಳ್ಳದ ವ್ಯಕ್ತಿಯನ್ನು ಪ್ರಧಾನಿ ಮೋದಿ ಶಿಕ್ಷಣ ಸಚಿವರನ್ನಾಗಿ ಮಾಡಿರುವುದು ಕನ್ನಡಿಗರಿಗೆ ಅವಮಾನ ತಂದಿದೆ” ಎಂದು ಆರೋಪಿಸಿದ್ದಾರೆ.


ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಹ್ಲಾದ್ ಜೋಶಿ ಇಬ್ಬರೂ ’ವೈಚಾರಿಕವಾಗಿ ಅವಳಿಗಳು’ ಎಂದು ಕರೆದಿರುವ ಅವರು, ಇಬ್ಬರೂ ಎಬಿವಿಪಿ ಮೂಲದವರಾಗಿದ್ದು ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಪ್ರತಿನಿಧಿಸುತ್ತಾರೆ. ಮುಖ ಮಾತ್ರ ಬದಲಾಗಿದೆಯೇ ಹೊರತು ಸರ್ಕಾರದ ನಡವಳಿಕೆ ಬದಲಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.


ಬಿಲ್ಕಿಸ್ ಬಾನೋ ಪ್ರಕರಣ ಉಲ್ಲೇಖ೨೦೦೨ರ ಗುಜರಾತ್ ಗಲಭೆ ಹಾಗೂ ಬಿಲ್ಕಿಸ್ ಬಾನೋ ಪ್ರಕರಣವನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, “ದೋಷಿಗಳನ್ನು ’ಉತ್ತಮ ನಡತೆ’ ಆಧಾರದ ಮೇಲೆ ಬಿಡುಗಡೆ ಮಾಡಿದಾಗ ಜೋಶಿ ಅವರು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಮಾತನಾಡಿದ್ದರು. ಇಂತಹ ಮನಸ್ಥಿತಿ ಉಳ್ಳವರ ಕೈಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ಸಿಲುಕಿದರೆ ಭವಿಷ್ಯವೇನು?” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ವಿಚಾರವನ್ನು ಪ್ರಸ್ತಾಪಿಸಿ ಜೋಶಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಿತಾಸಕ್ತಿಯ ಬಗ್ಗೆ ಕಾಳಜಿ ಇದ್ದರೆ, ತಕ್ಷಣವೇ ಜೋಶಿ ಅವರನ್ನು ಈ ಖಾತೆಯಿಂದ ಮುಕ್ತಗೊಳಿಸಿ ಸೂಕ್ತ ವ್ಯಕ್ತಿಗೆ ಜವಾಬ್ದಾರಿ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.