
ಬೀದರ್: ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಯುವಕರಲ್ಲಿ ರಾಷ್ಟ್ರೀಯತೆ ಹಾಗೂ ಭಾವೈಕ್ಯತೆ ಮೂಡಿಸುವ ವಿಕಸಿತ್ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮ ಸಮಾರೋಪ ಅಂಗವಾಗಿ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಎನ್ಐಸಿ ಕೇಂದ್ರದಲ್ಲಿ ವಿಶೇಷ ವರ್ಚುಯಲ್ ಸಂವಾದ ವೀಕ್ಷಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಗಡಿ ಗ್ರಾಮಗಳಿಗೆ ಭೇಟಿ ನೀಡಿ ಬಂದ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು.
ಗಡಿ ಗ್ರಾಮಗಳಿಗೆ ಭೇಟಿ ಕೊಟ್ಟು ವಾಪಸ್ಸಾದ ಬೀದರ್ನ ದೀಪ್ ಗೋವಿಂದ ಗನೊರಿಯಾ ಸಂವಾದದಲ್ಲಿ ಪಾಲ್ಗೊಂಡರು.
ದೀಪ್ ಗೋವಿಂದ ಗನೋರಿಯಾ ಅವರನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಮೇರಾ ಯುವ ಭಾರತ್ನ ಜಿಲ್ಲಾ ಯುವ ಅಧಿಕಾರಿ ನಿಖಿಲಕುಮಾರ ಹಾಗೂ ಎನ್ಐಸಿ ಡಿಐಒ ಅಜೀತಕುಮಾರ ಇದ್ದರು.
ಕೇಂದ್ರ ಗೃಹ ಸಚಿವಾಲಯ, ಐಟಿಬಿಪಿ, ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಮೇರಾ ಯುವ ಭಾರತ್ ಸಹಯೋಗದಲ್ಲಿ ವಿಕಸಿತ್ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.































