Home ಜಿಲ್ಲೆ ಕಲಬುರಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆರಿಗೆ ಭವ್ಯ ಸ್ವಾಗತ

ಗೃಹ ಸಚಿವ ಪ್ರಿಯಾಂಕ್ ಖರ್ಗೆರಿಗೆ ಭವ್ಯ ಸ್ವಾಗತ

ಕಲಬುರಗಿ,ಜು.6: ಗೃಹ ಸಚಿವರಾಗಿ ಮೊದಲಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು.ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮತ್ತು ನಾಯಕರು ಸಚಿವರನ್ನು ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಬಳಿ ಬರಮಾಡಿಕೊಂಡರು.
ನಂತರ, ತೆರೆದ ವಾಹನದ ಭವ್ಯ ಮೆರವಣಿಗೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಗೆ ಕರೆ ತಂದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಕಚೇರಿಯಲ್ಲಿ ಗೃಹ ಸಚಿವರಿಗೆ ಸನ್ಮಾನ ನೆರವೇರಿತು
ಎಂ ಎಲ್ ಎ ಗಳಾದ ಎಂ ವೈ ಪಾಟೀಲ್ ಹಾಗೂ ಅಲ್ಲಮಪ್ರಭು ಪಾಟೀಲ್ ಮಾತಮಾಡಿ ಪ್ರಿಯಾಂಕ್ ಖರ್ಗೆ ಅವರ ಸಾಮಥ್ರ್ಯಕ್ಕೆ ತಕ್ಕಂತ ಖಾತೆಗಳನ್ನು ಮುಖ್ಯಮಂತ್ರಿ ಗಳು ಕೊಟ್ಟಿದ್ದಾರೆ. ಮೊಟ್ಟಮೊದಲ ಬಾರಿಗೆ ಇ ಆಡಳಿತ ಖಾತೆಯನ್ನು ಸಿಎಂ ಹೊರತುಪಡಿಸಿ ಬೇರೆ ಸಚಿವರಿಗೆ ಕೊಟ್ಟಿರುವುದು ಇದೇ ಮೊದಲ ಬಾರಿ. ಐಟಿ ಬಿಟಿ ಖಾತೆಯನ್ನು ಪ್ರಿಯಾಂಕ್ ಖರ್ಗೆ ಅವರಿಗೆ ಕೊಡುವಂತೆ ಐಟಿ ದಿಗ್ಗಜರೆ ಒತ್ತಾಯಿಸಿರುವುದು ಅವರ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ. ಅವರನ್ನು ಉಪಮುಖ್ಯಮಂತ್ರಿ ಮಾಡುವಂತೆ ನಾವೆಲ್ಲ ಒತ್ತಾಯಿಸಿದ್ದೆವು. ಆದರೆ, ಅವರು ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿವೆ ಎಂದರು.
ಈ ಹಿಂದೆ ಸಿಎಂ ಅವರನ್ನು ಕರೆದುಕೊಂಡು ಬಂದು ನೆರೆ ಪರಿಹಾರ ಒದಗಿಸಿಕೊಟ್ಟರು ಈಗ ನಾಳೆ ಸಿಎಂ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ,ಖರ್ಗೆ ಅವರು ಸಿಎಂ ಅವರಿಂದ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ತವರಿನಲ್ಲಿ ಸಿಕ್ಕ ಭವ್ಯ ಸ್ವಾಗತಕ್ಕೆ ಋಣಿ : ಪ್ರಿಯಾಂಕ್ ಖರ್ಗೆ ****
ತವರಿನಲ್ಲಿ ಕಾರ್ಯಕರ್ತರ, ಅಭಿಮಾನಿಗಳ ಹಾಗೂ ಹಿರಿಯ ನಾಯಕರ ಅಭಿಮಾನದ ಸ್ವಾಗತಕ್ಕೆ ಋಣಿಯಾಗಿರುವುದಾಗಿ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಗೃಹ, ಇ ಆಡಳಿತ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ತಮಗೆ ಅವಕಾಶ ಕಲ್ಪಿಸಿದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಧನ್ಯವಾದಗಳು ಎಂದ ಖರ್ಗೆ, ಆಡಳಿತದ ವಿಚಾರದಲ್ಲಿ ಮಾತ್ರ ನಾನು ಗೃಹ, ಐಟಿಬಿಟಿ ಹಾಗೂ ಇ ಆಡಳಿತ ಖಾತೆ ಸಚಿವ. ಆದರೆ, ಕಾಂಗ್ರೆಸ್ ಪಕ್ಷದ ಕಚೇರಿ ಒಳಗೆ ಬಂದರೆ ನಾನು ಸಾಮನ್ಯ ಕಾರ್ಯಕರ್ತ ನನಗೆ ಜಗದೇವ ಗುತ್ತೇದಾರ, ಭೀಮಣ್ಣ ಸಾಲಿ ಹಾಗೂ ಮಹೆಬೂಬ್ ಸಾಹೇಬ್ ಹೈಕಮಾಂಡ್ ಎಂದು ವಿನಮ್ರವಾಗಿ ನುಡಿದರು.
ಕಳೆದ ಅವಧಿಯ ನಮ್ಮ ಸರ್ಕಾರ ರೂ1400 ಕೋಟಿ ಗಳಷ್ಟು ಪಂಚಾಯತಿ ಮಟ್ಟದಲ್ಲಿ ರೆವೆನ್ಯೂ ಕಲೆಕ್ಷನ್ ಮಾಡಿದೆ. ರೂ 1600 ಕೋಟಿ ಖರ್ಚು ಮಾಡಿ ಕುಡಿಯುವ ನೀರಿನ ಯೋಜನೆ ಜಾರಿಗೆ ಚಾಲನೆ ನೀಡಲಾಗಿದೆ. ಪ್ರತಿ ಪಂಚಾಯತಿಗೆ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದೇವೆ ಎಂದರು.
ನಮ್ಮ ಅವಧಿಯಲ್ಲಿ ಗ್ರಾಮಾಣಾಭಿವೃದ್ದಿ ಹಾಗೂ ಪಂಚಾಯತ್ ಇಲಾಖೆಯಲ್ಲಿ ನಡೆದ ಅಭಿವೃದ್ದಿಯಿಂದಾಗಿ ಗುತ್ತಿಗೆದಾರರ ಅಸೋಷಿಯೇಷನ್, ಪಿಡಿಎ ಅಸೋಷಿಯಷೇನ್ ಹಾಗೂ ಪ್ರಧಾನ ಮಂತ್ರಿ ಮೋದಿ ಸರ್ಕಾರ ನನಗೆ ಸರ್ಟಿಫಿಕೇಟ್ ಕೊಟ್ಟಿದೆ. ಐಟಿ ಬಿಟಿಯಲ್ಲಿ ರಾಜ್ಯ ನಂಬರ್ ಒನ್ ಆಗಿದೆ. ಇದಕ್ಕೆ ಮೋದಿ ಸರ್ಕಾರ ಪ್ರಶಂಸೆ ನೀಡಿದೆ. ಬಿಜೆಪಿ ನಾಯಕರು ಇದನ್ನು ಗಮನಿಸಲಿ ಎಂದರು.
ಟೆಕ್ಸಟೈಲ್ಸ್ ಪಾರ್ಕ್ ಗೆ ರೂ 350 ಕೋಟಿ ಬಿಡುಗಡೆ ಮಾಡಲಾಗಿದೆ. ರೈತರಿಗೆ ಪರಿಹಾರವಾಗಿ ರೂ 640 ಕೋಟಿ ಬಿಡುಗಡೆ ಮಾಡಲಾಗಿದೆ. ಈಗಿನ ಸರ್ಕಾರದಲ್ಲಿ 7,000 ಪೆÇಲೀಸರ ನೇಮಕಾತಿ ನಡೆಸಲಾಗುತ್ತಿದೆ. ಇದೆಲ್ಲ ಸಾಧ್ಯವಾದದ್ದು ನನ್ನಿಂದಲ್ಲ ನಿಮ್ಮಿಂದ. ನೀವು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಸಚಿವನಾಗಿರುವುದಕ್ಕೆ ಸಾಧ್ಯವಾಗಿದೆ ಎಂದರು.
ಎಸ್ ಐ ಆರ್ ನಡೆಯುತ್ತಿದೆ. ಈ ಬಗ್ಗೆ ನೀವೆಲ್ಲ ಜಾಗೃತರಾಗಿರಬೇಕು. ಪ. ಬಂಗಾಲದಲ್ಲಿ ಒಂದು ಕೋಟಿ ಓಟರ್ ಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಇಲ್ಲಿ ಹಾಗೆ ಆಗಬಾರದು. ಕೇರಳ, ತಮಿಳುನಾಡುಗಳಲ್ಲಿಯೂ ಕೂಡಾ ಇದೇ ಪ್ರಯತ್ನ ನಡೆಸಲಾಗಿತ್ತು. ಆದರೆ, ಪ.ಬಂಗಾಳ ತರ ಆಗಲಿಲ್ಲ. ಅದಕ್ಕಾಗಿ ನಾವು ಹನ್ನೆರಡು ಪ್ರಶ್ನೆ ಕೇಳಿದ್ದೆವು. ಅದಕ್ಕೆ ಉತ್ತರ ಸಿಕ್ಕಿಲ್ಲ. ಒಂದು ವೇಳೆ ಎಸ್ ಐ ಆರ್ ಸಂದರ್ಭದಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟರೆ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಈ ಬಗ್ಗೆ ನೀವೆಲ್ಲ ಎಚ್ಚರ ವಹಿಸಬೇಕು ಎಂದು ಕರೆನೀಡಿದರು.
ನಾನು ಆರ್ ಎಸ್ ಎಸ್ ನೋಂದಣಿ ಬಗ್ಗೆ ನಾನು ಪ್ರಶ್ನೆ ಮಾಡಿದ್ದೆ. ದಿನಕ್ಕೆ 4200 ಕಡೆ ಭೇಟಿಯಾಗುತ್ತಾರೆ. 2200 ಕಡೆ ಪಥಸಂಚಲನ ನಡೆಸುತ್ತಾರೆ. 20 ಲಕ್ಷ ಜನ ಸೇರುತ್ತಾರಂತೆ. ಈ ದೇಶದಲ್ಲಿ ಪ್ರತಿಯೊಂದು ಸಂಘಟನೆಯೂ ಕೂಡಾ ಲೆಕ್ಕ ಕೊಡಬೇಕು. ಸ್ವಾತಂತ್ರ್ಯ ಸಿಕ್ಕ 52 ವರ್ಷ ಗಳ ಕಾಲ ರಾಷ್ಟ್ರದ ಧ್ವಜವನ್ನು ತಮ್ಮ ಕಚೇರಿಯ ಮೇಲೆ ಹಾರಿಸಲಿಲ್ಲ ಯಾಕೆ? ಈಗ ಎಲ್ಲಾ ಚೆಂದಾ ಚೋರಿ ಚರ್ಚೆ ನಡೆಯುತ್ತಿದೆ. ರಾಮನೂ ಕೂಡಾ ಲೆಕ್ಕ ಕೊಡಬೇಕು. ಆದರೆ, ಆರ್ ಎಸ್ ಎಸ್ ಲೆಕ್ಕ ತೋರಿಸುವುದಿಲ್ಲವಂತೆ.
ಆರ್ ಎಸ್ ಎಸ್ ಗೆ ಕಾನೂನಿನ ಅಡಿಯಲ್ಲಿ ನಾನು ಬರೆದ ಪತ್ರಕ್ಕೆ ಅವರು ಇನ್ನೂ ಉತ್ತರಿಸಿಲ್ಲ. ಕಾನೂನಿನ ಅಡಿಯಲ್ಲೇ ಎಲ್ಲವನ್ನೂ ನೋಡಿಕೊಳ್ಳುತ್ತೇನೆ. ದಾಖಲೆಗಳನ್ನು ತೆಗೆದಿರಿಸಲು ಹೇಳಿದ್ದೇನೆ. ನೂರು ವರ್ಷದ ಸಂಘಟನೆಯಲ್ಲವೇ ದಾಖಲೆ ಹುಡುಕುತ್ತಿರಬಹುದು ಎಂದ ಗೃಹ ಸಚಿವರು, ಪ್ರತಿಯೊಬ್ಬರು ನೂರು ರೂಪಾಯಿ ಸಂಪಾದನೆ ಮಾಡಿದರೂ ತೆರಿಗೆ ಕಟ್ಟಲೇಬೇಕು. ಆದರೆ, ಆರ್ ಎಸ್ ಎಸ್ ತೆರಿಗೆ ಕಟ್ಟಲ್ಲವಂತೆ. ಯಾಕೆ? ಈ ಬಗ್ಗೆ ಚರ್ಚಿಸಲು ನಾನೆ ಅವರ ಕಚೇರಿಗೆ ಹೋಗಲು ತಯಾರಿದ್ದೇನೆ. ನಾನು ನನ್ನ ಕುಟುಂಬದ ಆಸ್ತಿ ವಿವರ ಕೊಡುತ್ತೇನೆ. ಅವರೂ ವಿವರ ಕೊಡಲಿ ಎಂದು ಸವಾಲಾಕಿದರು.
ರಾಮಮಂದಿರ ಹುಂಡಿಕಳ್ಳತನದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ದೇವರ ಹುಂಡಿ ಹೊಡೆಯುವವರಿಗೆಲ್ಲಾ “ಜೀ” ಯಾಕೆ? ಚೆಂದಾ ಚೋರಿ ಮಾಡಿರುವ ಗೋಪಾಲ್ ಜೀ ಗೆ ಯಾಕೆ ಜೀ. ಮರ್ಯಾದೆ ಇರದವರಿಗೆಲ್ಲ ಜೀ ಎಂದು ಮಾರ್ಯಾದೆ ಯಾಕೆ? ಎಂದು ವ್ಯಂಗ್ಯವಾಡಿದರು.
ರಾಮಮಂದಿರದ ಪ್ರತಿಯೊಂದು ಕೆಲಸವೂ ಸೇರಿದಂತೆ ಪ್ರಾಣಪ್ರತಿಷ್ಠಾನವೂ ಕೂಡಾ ಮೋದಿ ಮಾಡಿದ್ದಾರೆ. ಹಾಗಾಗಿ, ಚೆಂದಾ ಚೋರಿಯ ಕ್ರೆಡಿಟ್ ಕೂಡಾ ತೆಗೆದುಕೊಳ್ಳಲಿ. ಯಾಕೆ ಈ ಬಗ್ಗೆ ಮನ್ ಕೀ ಬಾತ್ ನಲ್ಲಿ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ವೇದಿಕೆಯ ಮೇಲೆ ಶಾಸಕರಾದ ಹಾಗೂ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಬಿ.ಆರ್.ಪಾಟೀಲ್ ಎಂ ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ, ಮಹೆಬೂಬ್ ಸಾಹೇಬ್ ಚಿಸ್ತಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು, ಮಹಜರ್ ಆಲಂಖಾನ್, ಅರುಣಕುಮಾರ ಎಂವೈ ಪಾಟೀಲ,ಪ್ರವೀಣ್ ಪಾಟೀಲ್ ಹರವಾಳ, ಸಂತೋಷ ಪಾಟೀಲ ಡಣ್ಣೂರ,
ಡಾ.ಕಿರಣದೇಶಮುಖ,ಶಿವಾನಂದ್ ಪಾಟೀಲ್, ಆರ್. ಕೆ. ಪಾಟೀಲ್, ನೀಲಕಂಠರಾವ್ ಮೂಲಗೆ, ಸುಭಾಷ್ ರಾಠೋಡ್, ಶರಣಪ್ಪ ಮಟ್ಟೂರು, ಶ್ರೀನಿವಾಸ್ ಸಗರ, ರಾಜಗೋಪಾಲ ಮುದಿರೆಡ್ಡಿ, ಸೋಮಶೇಖರ್ ಗೋನಾಯಕ್, ಡಾ ಕಿರಣ್ ಪಾಟೀಲ್, ಶರಣು ಪಪ್ಪಾ , ಫಾರೂಕ್ ಮಣಿಯಾಲ್,ರಾಜೀವ ಜಾನೆ,ಈರಣ್ಣ ಝಳಕಿ,ಶಿವಾನಂದ ಝಳಕಿ, ಲಾಲ್ ಅಹಮ್ಮದ್ ಬಾಂಬೆ ಶೇಠ್, ಲಿಂಗರಾಜ ತಾರಫೈಲ್,ಶಕೀಲ್ ಸರಡಗಿ,ಅಶ್ವಿನ್ ಸಂಕಾ ಹಾಗೂ ಇತರರು ಇದ್ದರು.


2028 ಕ್ಕೆ ಪ್ರಿಯಾಂಕ್ ಖರ್ಗೆ ಸಿಎಂ : ತಿಪ್ಪಣ್ಣಪ್ಪ ಕಮಕನೂರು.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ರಾಜ್ಯ ಸರ್ಕಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಹಳ ಮುಖ್ಯ ಹಾಗೂ ಗಮನಾರ್ಹ ಸಚಿವರಾಗಿದ್ದಾರೆ ಎನ್ನುವುದಕ್ಕೆ ಅವರಿಗೆ ಇಂದು ಸಿಕ್ಕ ಭವ್ಯ ಸ್ವಾಗತ ಸಾಕ್ಷಿಯಾಗಿದೆ ಎಂದರು.
ಗೃಹ, ಇ ಆಡಳಿತ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು.
ಕಲಬುರಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆ ಕೆಲಸ ನಡೆದಿದೆ ಅದಕ್ಕೆ ಸಚಿವರು ರೂ 17 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಮೂರ್ತಿ ಉದ್ಘಾಟನೆಗೆ ಲಕ್ಷ ಜನರನ್ನು ಸೇರಿಸಲಾಗುವುದು. ಇದರಂತೆ ಬೆಂಗಳೂರಿನ ವಿಧಾನಸೌಧದ ಮುಂದೆ ಅಂಬಿಗರ ಚೌಡಯ್ಯ ನವರ ಮೂರ್ತಿ ಸ್ಥಾಪಿಸುವಂತೆ ಒತ್ತಾಯಿಸಿದರು.
ಪ್ರಿಯಾಂಕ್ ಖರ್ಗೆ ಅವರು ಜನಪ್ರಿಯ ಗೃಹ ಸಚಿವರಾಗಿದ್ದು 2028 ರ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದು ಇಂದು ಗೃಹ ಸಚಿವರಾಗಿದ್ದು ಅಂದು ಮುಖ್ಯಮಂತ್ರಿಯಾಗಲಿದ್ದಾರೆ ಎಂದು. ಕೋಲಿ, ಕಬ್ಬಲಿಗ ಮತ್ತು ಸಮನಾರ್ಥ ಜಾತಿಗಳನ್ನು ಎಸ್ ಟಿ ಗೆ ಸೇರಿಸಬೇಕು. ಅದಕ್ಕೆ ಏನಾದರೂ ಇಚ್ಛಾಶಕ್ತಿ ಇದ್ದರೆ ಅದು ಪ್ರಿಯಾಂಕ್ ಖರ್ಗೆ ಅವರಿಗೆ ಮಾತ್ರ ಎಂದರು.