
ನವಲಗುಂದ,ಜು೬: ತಾಲ್ಲೂಕಿನ ಚಿಲಕವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಮಾರುತಿ ದೇವಸ್ಥಾನ ಉದ್ಘಾಟನಾ ಸಮಾರಂಭ, ಜಾತ್ರಾ ಮಹೋತ್ಸವ ಹಾಗೂ ಶ್ರೀ ಮಾರುತಿ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹನ ಕಾರ್ಯಕ್ರಮವು ಜೂಲೈ ೭ ಮಂಗಳವಾರ ಹಾಗೂ ಜುಲೈ ೮ ಬುಧವಾರ ದಂದು ನೆರವೇರಲಿದೆ ಎಂದು ಮಾರುತಿ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಕೆ.ವಿ. ಹುಲಕೋಟಿ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಅತ್ಯಂತ ಪುರಾತನ ದೇವಾಲಯವಾಗಿದ್ದು, ಜೀರ್ಣೋದ್ಧಾರಗೊಳಿಸಲಾಗಿದೆ. ಗ್ರಾಮಸ್ಥರು ಹಾಗೂ ಸರ್ಕಾರದ ಅನುದಾನದೊಂದಿಗೆ ಸುಮಾರು ರೂ.೧.೨೦ ಕೋಟಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಕಲ್ಲಿನಿಂದ ಭವ್ಯ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ಪಂಚಗ್ರಹ ಸಂಸ್ಥಾನಮಠ, ಹಿರೇಮಠ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸುವರು. ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿ ಮಹಾಬಳೇಶ್ವರ ದೇವಸ್ಥಾನ ಶಂಕುಸ್ಥಾಪನೆ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಕಳಸಾರೋಹಣ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಜ್ಯೋತಿ ಬೆಳಗಿಸಲಿದ್ದು, ಸಂಸದರಾದ ಬಸವರಾಜ ಬೊಮ್ಮಾಯಿ ದೇವಸ್ಥಾನ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಶಾಸಕ ಎನ್.ಎಚ್. ಕೋನರಡ್ಡಿ ಅಧ್ಯಕ್ಷತೆ ವಹಿಸುವರು.
ಸಲೀಂ ಅಹ್ಮದ್, ಸಂತೋಷ ಲಾಡ್, ಅಬ್ಬಯ್ಯ ಪ್ರಸಾದ, ಭರಮಗೌಡ (ರಾಜು) ಕಾಗೆ, ಸೈಯದ್ ಅಜ್ಜಂಪೀರ್ ಎಸ್. ಖಾದ್ರಿ, ನಾಗೇಂದ್ರಕುಮಾರ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ಎಫ್.ಹೆಚ್. ಜಕ್ಕಪ್ಪನವರ, ಲಿಂಗರಾಜ ಪಾಟೀಲ, ಶಿವಲೀಲಾ ವಿನಯ್ ಕುಲಕರ್ಣಿ, ಶಾಕೀರ್ ಸನದಿ, ಅಡಿವೆಪ್ಪ ಗಿರೆಪ್ಪಾ ಇಟಗಿ, ನ್ಯಾಯವಾದಿ ವಿ. ಡಿ. ಕಾಮರಡ್ಡಿ, ಜಿ.ಇದಪ್ಪಗೌಡರ, ಬಿ.ಆರ್ ಯಾವಗಲ್, ಕೆ.ಎ.ಎಸ್. ಅಧಿಕಾರಿ ರಮೇಶ ಕೋನರಡ್ಡಿ, ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಕೆ.ವಿ. ಹುಲಕೋಟಿ, ಜಿಲ್ಲಾಧಿಕಾರಿ ಸ್ನೇಹಲ್ ಆರ್, ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ, ಜಿ ಪಂ ಸಿಇಓ ಭುವನೇಶ ದೇವಿದಾಸ ಪಾಟೀಲ, ಜಿ.ಹಿಂ.ವ ಕಲ್ಯಾಣಾಧಿಕಾರಿ ಗಂಗಾಧರ ದೊಡಮನಿ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಧಾರವಾಡ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಯವರಿಂದ ಕರಡಿ ಮಜಲು ಮತ್ತು ಹೆಣ್ಣು ಮಕ್ಕಳಿಂದ ಡೊಳ್ಳಿನ ಮಜಲಿನ ಸೇವೆ ಜರುಗುವದು ಎಂದು ಅಧ್ಯಕ್ಷ ಹುಲಕೋಟಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಜಿ. ಕೋನರಡ್ಡಿ, ಆರ್.ಎಚ್. ಕೋನರಡ್ಡಿ, ಎಸ್. ಎಚ್. ಹರಕುಣಿ, ವಿ.ಆರ್. ಕೋನರಡ್ಡಿ, ವಾಸು ವಿ. ಕೋನರಡ್ಡಿ, ಎನ್.ಆರ್. ಪಾಟೀಲ, ವಿ.ವಿ. ದಾನಪನವರ, ಸದುಗೌಡ ಪಾಟೀಲ, ಎನ್ ಜೆ ಬೀರಣ್ಣವರ, ಸೇರಿದಂತೆ ಇತರರು ಇದ್ದರು.





























