
ಮುನವಳ್ಳಿ,ಜು.೬: ಯಕ್ಕುಂಡಿ ಗ್ರಾಮದ ಸರಕಾರಿ ಪದವಿಪೂರ್ವ ಕಾಲೇಜಿನ ೨೦೨೬-೨೭ ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯ ಶಿವಣ್ಣ ಹೆಚ್ ಮಾತನಾಡಿ ಯಕ್ಕುಂಡಿ ವಿಧ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದಶನದಲ್ಲಿ ಓದಿದರೆ ನಿಸ್ಸಂದೇಹವಾಗಿ ಅದ್ಭುತ ಸಾಧನೆಯನ್ನು ಮಾಡಬಹುದು. ಸಾಧನೆಯು ಶಾಧಕನ ಸೊತ್ತೇ ಹೊರತು ಸೋಮಾರಿಗಳದ್ದಲ್ಲ. ಮತ್ತು ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಇಂದು ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಸನ್‌ನಲ್ಲಿ ಪಾಸಾಗಿರುವುದರಿಂದ ನಮ್ಮ ಕಾಲೇಜಿನ ಕೀರ್ತಿ ಹೆಚ್ಚಿಸಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎ ಬಿ ಮಿರಜಕರ ವಹಿಸಿದ್ದರು. ಮುಖ್ಯತಿಥಿಗಳಾಗಿ ಹಿರಿಯರಾದ ಶಂಕರಗೌಡ ಪಾಟೀಲ, ಬಸವರಾಜ ಹೊಂಗಲ, ಅಬ್ದುಲ್ ಖಾದರಜೈಲಾನಿ ಬಾರಿಗಿಡದ, ಬಸನಗೌಡ ಪಾಟೀಲ, ನವೀನಗೌಡ ಪಾಟೀಲ, ಉಪಸ್ಥಿತರಿದ್ದರು. ಆರ್ ಕೆ ಮುರಂಕರ, ಚಿನ್ನಪ್ಪ ಕುಂಬಾರ, ಸಂಗೀತಾ ನವಲಗುಂದ, ತೇಜಸ್ವಿನಿ ಗೀರಣವರ, ಮಲ್ಲಪ್ಪ ಹುಲಕುಂದ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಕಲಾ ಹಾಗೂ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಸನ್ ನಲ್ಲಿ ಪಾಸಾದ ೯ ವಿದ್ಯಾಥಿಗಳನ್ನು ಕಾಲೇಜು ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ದ್ವಿತೀಯ ಪಿಯಿಸಿ ಪರೀಕ್ಷೇಯಲ್ಲಿ ಕಾಲೇಜಿಗೆ ಪ್ರಥಮ ಬಂದ ವಿದ್ಯಾಥಿನಿಯರಾದ ನಿರ್ಮಲಾ ಬೆನಕಟ್ಟಿ ಮತ್ತು ಗಾಯಿತ್ರಿ ಸುಣಗಾರ ಇವರನ್ನು ಶಿಕ್ಷಕಿ ವ್ಹಿ ಎಸ್ ಗದ್ದಿಗೌಡರ ಅವರ ಅತ್ತೆಯವರಾದ ದಿವಂಗತ ನೀಲವ್ವ ಶಿದ್ದಲಿಂಗಪ್ಪ ಹೊಂಗಲ ಇವರ ಸ್ಮರಣಾರ್ಥ ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದರು.
ಪೂರ್ಣಿಮಾ ಕಲಹಾಳ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾ ಸತ್ತಿಗೇರಿ ಸ್ವಾಗತಿಸಿದರು. ವಿಠ್ಠಲ ಮಾಕಾರ ವಂದಿಸಿದರು.





























