
ಮುನವಳ್ಳಿ,ಜು೫: ಪಟ್ಟಣದ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೨೦೨೬-೨೭ ನೇ ಸಾಲಿನ ಪಿ.ಯು. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಗೌರವ ಸತ್ಕಾರ ಸಮಾರಂಭವನ್ನು ಮಡಿವಾಳಪ್ಪ ಬಿದರಗಡ್ಡಿ ಉದ್ಘಾಟಿಸಿದರು.
ಉಪ್ಪಿನ ಬೆಟಗೇರಿಯ ಕುಮಾರ ವಿರುಪಾಕ್ಷ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ ಮಕ್ಕಳಿಗೆ ಪ್ರತಿಒಬ್ಬರಿಗು ಒಂದೊAದು ಗುರಿ ಇರುತ್ತದೆ ಗುರಿ ಮುಟ್ಟಲು ಮುಖ್ಯ ವಾಗಿ ಸಂಸ್ಕಾರ ಬೇಕು ಜೋತೆಗೆ ಗುರುಗಳ ಮಾರ್ಗದರ್ಶನ ಇರಬೇಕು ಅಂದಾಗ ಗುರಿ ಮುಟ್ಟಲು ಸಾದ್ಯ ಮಕ್ಕಳ ಅಭಿವೃದ್ದಿಗೆ ಪಾಲಕರ ಮಾರ್ಗದರ್ಶನ ಮುಖ್ಯ ವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಶ್ರೀ ಮುರುಘೇಂಧ್ರ ಶ್ರೀಗಳು ಮಾತನಾಡಿ ಸಂಸ್ಥೆಯ ಉನ್ನತಿಗಾಗಿ ಗುರು ಹಿರಿಯರು, ರಾಜಕೀಯ ಮುಖಂಡರು, ಪಾಲಕರ ಸಹಾಯ ಸಹಕಾರದಿಂದ ಗ್ರಾಮೀಣ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಓದುತ್ತಿರವದು ಹೆಮ್ಮೆ ತಂದಿದೆ ಹಾಗೂ ಇಷ್ಟು ಎತ್ತರಕ್ಕೆ ಬೆಳೆದಿದೆ ಹಾಗೆಯೆ ಮುಂದಿನ ದಿನಮಾನಗಳಲ್ಲಿ ಸಂಸ್ಥೆಯಿAದ ಪಿಯು ವಿಜ್ಞಾನ ಕಾಲೇಜು ಇನ್ನು ಹಲವಾರು ವಿಭಾಗಗಳನ್ನು ಪ್ರಾರಂಭಿಸಲಾಗುವುದು ಎಂದರು.
ಮಡಿವಾಳಪ್ಪ ಬಿದರಗಡ್ಡಿ, ಮಮತಾ ಬಣಗಾರ, ಮಾರೂತಿ ಬಸಳಿಗುಂದಿ ಮಾತನಾಡಿದರು, ಪ್ರಾಚಾರ್ಯ ಎಮ್.ಎಚ್.ಪಾಟೀಲ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಜಿ.ಎ.ಅವರಾತಿ, ಅಡಿವೆಪ್ಪ ಸಿಂಗನ್ನವರ, ಉದಯ ಬಾಳಿ, ಹಣಮಂತ ಸಿಂಗನ್ನವರ, ಎಪ್.ವಾಯ್ ಮುಶೆನ್ನವರ, ರುದ್ರಪ್ಪ ಬೆಲ್ಲದ, ಅರುಣಗೌಡ ಪಾಟೀಲ, ಮಲ್ಲಿಕಾರ್ಜುನ ಜಮಖಂಡಿ, ಗಂಗಾದರ ಗೊರಾಬಾಳ, ಶಂಕರ ಗಯ್ಯಾಳಿ, ಟಿ.ಎನ್.ಮುರಂಕರ, ಕೆ.ಬಿ.ನಲವಡೆ, ಎಮ್.ಸಿ.ಬಾಂಡೇಕರ, ಬಿ.ಬಿ.ಪಾಟೀಲ, ಚಂದ್ರಪ್ಪ ಹಂಜಿ ಇತರರು ಉಪಸ್ಥಿತರಿದ್ದರು.




























