Home ಜಿಲ್ಲೆ ಬೆಂಗಳೂರು ಹಿರಿಯ ಪತ್ರಕರ್ತ ಕೆ.ಎನ್. ಪ್ರಕಾಶ್ ಬೀಳ್ಕೊಡುಗೆ

ಹಿರಿಯ ಪತ್ರಕರ್ತ ಕೆ.ಎನ್. ಪ್ರಕಾಶ್ ಬೀಳ್ಕೊಡುಗೆ

ಕೋಲಾರ,ಜು,೪- ಕೋಲಾರ ಶಕ್ತಿ ಪತ್ರಿಕೆಯ ಹಿರಿಯ ವರದಿಗಾರ ಕೆ.ಎನ್.ಪ್ರಕಾಶ್( ಮಾಮಿ) ಅವರು ಪತ್ರಿಕಾ ವೃತ್ತಿಯಿಂದ ವಿಶ್ರಾಂತಿ ಬಯಸಿ ದುಬಾಯಿ ದೇಶಕ್ಕೆ ತೆರಳುತ್ತಿರುವ ಹಿನ್ನಲೆಯಲ್ಲಿ ಮನ್ವಂತರ ಪ್ರಕಾಶನದ ಸಂಸ್ಥಾಪಕ ಪಾ.ಶ್ರೀ.ಆನಂತರಾಮ್ ತಮ್ಮ ಸ್ವಗೃಹದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಶುಕ್ರವಾರ ಬೆಳಿಗ್ಗೆ ಆಯೋಜಿಸಿದ್ದರು.


ಸಮಾರಂಭದಲ್ಲಿ ಮನ್ವಂತರ ಪ್ರಕಾಶನ ಸಂಸ್ಥಾಪಕ ಆನಂತರಾಮ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ವಿ.ಮುನಿರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಪ್ರಧಾನಕಾರ್ಯದರ್ಶಿ ಎ,ಜಿ.,ಸುರೇಶ್ ಕುಮಾರ್, ಹೆಚ್.ಎ.ಪುರೋಶೋತ್ತಮ್‌ರಾವ್.,ಅಂಚೆ ಆಶ್ವಥ್, ಸಚ್ಚಿದಾನಂದ, ಸುಬ್ರರಾಯಪ್ಪ. ಕೊಂಡರಾಜನಹಳ್ಳಿ ಮಂಜುಳ ಮುಂತಾದವರು ಮಾತನಾಡಿ ಪ್ರಕಾಶ್ ಅವರು ಮಾಮಿ ಎಂದೆ ಪರಿಚಿತರಾಗಿದ್ದು ಕಳೆದ ೨೧ ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಇದರ ಜೂತೆಗೆ ಶ್ರೀ ಭುವನೇಶ್ವರಿ ಕನ್ನಡ ಸಂಘ ಸೇರಿದಂತೆ ಮನ್ವಂತರ ಪ್ರಕಾಶನ ಸಂಸ್ಥೆಯ ಕಾರ್ಯದರ್ಶಿಯಾಗಿ ಸಮಾಜ ಮುಖಿ ಕೆಲಸಗಳನ್ನು ಶಿಸ್ತು ಬದ್ದತೆಯಿಂದ ನಿರ್ವಹಿಸುತ್ತಿದ್ದ ಬಗ್ಗೆ ನೆನಪಿಸಿದರು.


ಪ್ರಕಾಶ್ ಅವರ ಇಬ್ಬರು ಹೆಣ್ಣು ಮಕ್ಕಳ ಕುಟುಂಬವು ದುಬಾಯಿ ದೇಶದಲ್ಲಿ ಹಲವು ವರ್ಷಗಳಿಂದ ನೆಲೆಸಿರುವುದರಿಂದ ೨-೩ ಬಾರಿ ದುಬಾಯಿಗೆ ತೆರಳಿ ಕೆಲವು ಕಾಲ ಇದ್ದು ವಾಪಾಸ್ಸಾಗಿದ್ದರು. ಅದರೆ ಇತ್ತೀಚೆಗೆ ಮಕ್ಕಳು ಇಲ್ಲೇ ಬಂದು ಇರಿ ಎಂದು ತಮ್ಮ ತಂದೆ ತಾಯಿಗಳಿಗೆ ಒತ್ತಾಯಿಸಿದ ಹಿನ್ನಲೆಯಲ್ಲಿ ಪ್ರಕಾಶ್ ಮತ್ತು ಅವರ ಪತ್ನಿ ದಂಪತಿಗಳು ದುಬಾಯಿಯಲ್ಲೇ ನೆಲೆಸಲು ನಿರ್ಧಾರಿಸಿ ತೆರಳುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಅವರೊಂದಿಗೆ ಇದ್ದ ತಮ್ಮ ಒಡನಾಟವನ್ನು ನೆನಪಿಸಿ ಕೊಂಡು ಪ್ರಕಾಶ್ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.


ಸನ್ಮಾನವನ್ನು ಸ್ವೀಕರಿಸಿದ ಪ್ರಕಾಶ್ ಮಾತನಾಡಿ ಪತ್ರಿಕಾ ಕ್ಷೇತ್ರದಲ್ಲಿ ನನಗೆ ಯಾರೂ ಶತ್ರುಗಳಿಲ್ಲ. ನನಗೆ ಯಾರ ಮೇಲೂ ದ್ವೇಷಗಳಿರಲಿಲ್ಲ, ಸಣ್ಣಪುಟ್ಟ ಮಾತು ಕತೆ ನಡೆದರೂ ಅದು ಆಕ್ಷಣಕ್ಕೆ ಮಾತ್ರ ಸೀಮಿತವಾಗಿತ್ತು ನಂತರದಲ್ಲಿ ಸಹಜ ಸ್ಥಿತಿಗೆ ಮರಳುವ ಮೂಲಕ ನನಗೆ ಎಲ್ಲರೂ ಸ್ನೇಹಮಯಿಯಾಗಿದ್ದರು. ನನಗೆ ಕೋಲಾರ ಬಿಟ್ಟು ಹೋಗಲು ಇಚ್ಚೆ ಇಲ್ಲವಾದರೂ ವಯಸ್ಸಾಗಿದ್ದು ಈಗಾ ಮಕ್ಕಳು ಮೊಮ್ಮಕ್ಕಳೊಂದಿಗೆ ಕಾಲ ಕಳೆಯ ಬೇಕೆಂಬ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು


ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿ ಹೋರಾಟಗಾರ ಅ.ಕೃ.ಸೋಮ ಶೇಖರ್, ಬಿಜೆಪಿ ಸತ್ಯನಾರಾಯಣ, ಪತ್ರಕರ್ತರಾದ ಓಂಕಾರಮೂರ್ತಿ, ಕೆ.ಬಿ.ಜಗದೀಶ್, ರಾಘವೇಂದ್ರ, ಸತೀಶ್, ರಂಗನಾಥ್, ಸ್ಖಂದಕುಮಾರ್, ಪದ್ಮನಾಭ, ಗಂಗಾಧರ್,ಹಾಗೂ ಆನಂತರಾಮ್ ಅವರ ಮಗಳು ಮತ್ತು ಅಳಿಯ ಇದ್ದು ಎಲ್ಲರಿಗೂ ಲಘು ಉಪಹಾರ ವಿತರಿಸಿದರು.