Home ಜಿಲ್ಲೆ ಕಲಬುರಗಿ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಜಯಂತಿ ಆಚರಣೆ

ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಜಯಂತಿ ಆಚರಣೆ

ಕಲಬುರಗಿ,ಜು3.-ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರು ಕಚೇರಿಯಲ್ಲಿ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಜಯಂತಿ ಆಚರಿಸಲಾಯಿತು.
ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರಾದ ಡಾ.ರೂಕಿಯ ಆಸ್ನಾ ರಬಾ ಅವರು ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಓಪಿಡಿ ಸರ್ಜನ್ ಡಾ.ಶಾಲಾನಿ ಸಜ್ಜನಶೆಟ್ಟಿ, ಸ್ಥಳೀಯ ವೈದ್ಯಾಧಿಕಾರಿ ಡಾ.ಜಯಮ್ಮ ಎಸ್ ಗಣಜಲಖೇಡ್, ಕಚೇರಿ ಅಧಿಕ್ಷಕ ವಿಜಯಕುಮಾರ, ಎಚ್ ಫ್ ಡಬ್ಲ್ಯೂ ಇಂಥಿಜ್, ಜಿಲ್ಲಾ ಟಿಸಿಸಿ ಸೈಕ್ಯಾಟ್ರಿಕ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ, ಸಹಾಯಕರಾದ ಕಾವ್ಯ, ಅಕೌಂಟೆಂಟ್ ಸಿದ್ದಪ್ಪ, ಗಣಕಯಂತ್ರ ಸಹಾಯಕಿ ಪಾರ್ವತಿ ಭೀಮರಾವ್, ಸುರೇಖಾ ದಿವಟಗಿ, ಅವಿನಾಶ್ ಪಾಟೀಲ, ಕೈಲಾಶ್ ಶರಣು, ಪೃಥ್ವಿ ಹಾಗೂ ಇತರರು ಇದ್ದರು.