
ಅಫಜಲಪುರ,ಜು.3-ಪೋಕ್ಸೊ ಪ್ರಕರಣದ ಆರೋಪಿಯೊಬ್ಬನನ್ನು ಪೆÇಲೀಸ್ ಠಾಣೆಗೆ ವಿಚಾರಣೆಗೆಂದು ಕರೆ ತಂದಿದ್ದ ವೇಳೆ ಪೆÇಲೀಸರ ಕಣ್ಣಿಗೆ ಮಣ್ಣೆರೆಚಿ ಠಾಣೆಯಿಂದಲೇ ಪರಾರಿಯಾಗಿದ್ದಾನೆ.
ಅಫಜಲಪುರ ಠಾಣೆ ವ್ಯಾಪ್ತಿಯವ ಗ್ರಾಮವೊಂದರ 16 ವರ್ಷದ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಪಾಲಕರು ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೆÇಲೀಸರಿಗೆ, ಅದೇ ಗ್ರಾಮದ 24 ವರ್ಷದ ಯುವಕನೊಬ್ಬ ಬಾಲಕಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದನು.
ಅಫಜಲಪುರ ಪೆÇಲೀಸರು ಇಬ್ಬರೂ ಮಹಾರಾಷ್ಟ್ರದ ಪುಣೆಯಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಾಲಕಿಯ ಪಾಲಕರೊಂದಿಗೆ ಪುಣೆಗೆ ತೆರಳಿ ಆರೋಪಿಯನ್ನು ಬಂಧಿಸಿ ತಡರಾತ್ರಿ ಠಾಣೆಗೆ ಕರೆತಂದಿದ್ದರು. ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಲಬುರಗಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಪಿ ತನ್ನ ಬುದ್ಧಿವಂತಿಕೆಯಿಂದ ಕೈಕೋಳವನ್ನು ಬಿಚ್ಚಿಕೊಂಡು ಠಾಣೆಯ ಪಕ್ಕದ ಬೇವಿನ ಮರದ ಕೊಂಬೆಯನ್ನು ಹಿಡಿದುಕೊಂಡು ಕೆಳಗಿಳಿದು ಕತ್ತಲಲ್ಲಿ ಬುಧವಾರ ನಸುಕಿನ ಜಾವ ಠಾಣೆಯ ಸಿಬ್ಬಂದಿ ನಿದ್ರೆಗೆ ಜಾರಿದ್ದ ವೇಳೆ, ಆರೋಪಿ ಪರಾರಿಯಾಗಿದ್ದಾನೆ. ಆರೊಪಿ ಠಾಣೆಯಿಂದ ಪರಾರಿಯಗಿ ಓಡಿ ಹೋಗುವುದನ್ನು ಇಡೀ ದೃಶ್ಯಗಳನ್ನು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡಿದರೆ ಮೇಲ್ನೋಟಕ್ಕೆ ಪೆÇಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತದೆ.
……………………..
ಕರ್ತವ್ಯ ನಿರತ ಸಿಬ್ಬಂದಿಯ ಘೋರ ನಿರ್ಲಕ್ಷ್ಯದಿಂದಲೇ ಪೆÇೀಕ್ಸೋ ಆರೋಪಿ ಠಾಣೆಯಿಂದಲೇ ಪರಾರಿಯಗಿರುವುದು ಪೆÇಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಪ್ರಸ್ತುತ ಡಿವೈಎಸ್ಪಿ ತಮ್ಮರಾಯ ಪಾಟೀಲ್, ಸಿಪಿಐ ಲಖನ್ ಮಸಗುಪ್ಪಿ ಹಾಗೂ ಪಿಎಸ್‍ಐ ಸೋಮಲಿಂಗಪ್ಪ ಒಡೆಯರ್ ನೇತೃತ್ವದ ತಂಡಗಳು ಆರೋಪಿಯ ಪತ್ತೆಗಾಗಿ ಜಿಲ್ಲೆಯಾದ್ಯಂತ ಹಾಗೂ ನೆರೆಯ ಮಹಾರಾಷ್ಟ್ರಗಡಿ ಭಾಗಗಳಲ್ಲಿ ತೀವ್ರ ಶೋಧ ನಡೆಸುತ್ತಿವೆ. ಗುರುವಾರ ರಾತ್ರಿವರೆಗೂ ಆರೋಪಿಯ ಯಾವುದೇ ಸುಳಿವು ಸಿಕ್ಕಿಲ್ಲ.
ಠಾಣೆಯಿಂದ ಪರಾರಿ ಆಗಿರುವ ಆರೋಪಿಯನ್ನು
ತಕ್ಷಣವೇ ಬಂಧಿಸಲಾಗುವುದು. ಈತನ ನಿಗಾಕ್ಕೆ ನಿಯೋಜನೆ ಮಾಡಲಾದ ಸಿಬ್ಬಂದಿಯ ಕರ್ತವ್ಯ
ಲೋಪ ಆಗಿದ್ದು, ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
- ಅಡ್ಡೂರು ಶ್ರೀನಿವಾಸುಲು, ಎಸ್‍ಪಿ, ಕಲಬುರಗಿ
………………..
ಠಾಣೆಯಿಂದಲೇ ಆರೋಪಿ ಪರಾರಿಯಾಗಿದ್ದು, ಗಸ್ತಿಗಾಗಿ ಸಿಬ್ಬಂದಿ ನಿಯೋಜನೆ ಮಾಡಲಾಯಿತು. ಸಿಬ್ಬಂದಿ ನಿರ್ಲಕ್ಷ್ಯದಿಂದ ಪೆÇೀಕ್ಸೋ ಆರೋಪಿ ಎರಡನೇ ಮಹಡಿಯಿಂದ ಜಿಗಿದು ಪರಾರಿ ಆಗಿದ್ದು ನಮ್ಮ ಪೆÇೀಲಿಸ್ ಇಲಖೆ ಅಷ್ಟೇ ಅಲ್ಲದೇ ನಮ್ಮ ಅಫಜಲಪುರ ಠಾಣೆಗೆ ಮುಜಗರವಾಗಿದೆ ಆದಷ್ಟು ಬೇಗ ಆರೋಪಿ ಪತ್ತೆ ಹಚ್ಚಿ ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸುವ ಎಲ್ಲಾ ಸಿದ್ದತೆ ಮಾಡಲಾಗಿದೆ.
-ಲಖನ್ ಮಸಗುಪ್ಪಿ ಸಿಪಿಐ, ಅಫಜಲಪುರ


























