Home ಜಿಲ್ಲೆ ಕಲಬುರಗಿ ದುಮ್ಮದ್ರಿ, ಐನಾಪುರ ಗ್ರಾಮಗಳಲ್ಲಿ ಎಸ್‍ಐಆರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

ದುಮ್ಮದ್ರಿ, ಐನಾಪುರ ಗ್ರಾಮಗಳಲ್ಲಿ ಎಸ್‍ಐಆರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

ಯಡ್ರಾಮಿ,ಜು.3-ತಾಲೂಕಿನ ಪಂಚ್ ಗ್ಯಾರಂಟಿ ಸಮಿತಿಯ ವತಿಯಿಂದ ಯಡ್ರಾಮಿ ತಾಲೂಕಿನ ಕಾಚಾಪುರ್ ಗ್ರಾಮದಲ್ಲಿ ಪಂಚಾಯಿತಿ ಮಟ್ಟದಲ್ಲಿ ದುಮ್ಮದ್ರಿ ಹಾಗೂ ಐನಾಪುರ ಗ್ರಾಮಗಳ ಸೇರಿಕೊಂಡು ಇಂದು ಎಸ್ ಐಆರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾಚಾಪುರ್ ಗ್ರಾಮದ ಮುಖಂಡರು ಯುವಕರು ಅಕ್ಕತಂಗಿಯರು ಸೇರಿ ಪಂಚ ಗ್ಯಾರಂಟಿ ಸಮಿತಿಯ ಸದಸ್ಯರನ್ನು ಸ್ವಾಗತಿಸಿ ಸನ್ಮಾನ ಮಾಡಿ ಗೌರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖ್ಯಸ್ಥರಾದ ಬಸಣ್ಣ ಮಾಡ್ಗಿ, ಹನುಮಂತ್ ಕಂಡಕ್ಟರ್, ಸಿದ್ದನಗೌಡ ರಾಮನಗೌಡ, ಅಮೃತ ಗುರಣ್ಣ ದೊಡ್ಡಮನಿ, ಬಂದೇ ನವಾಜ್ ಚಿಗರಳ್ಳಿ, ಸಜ್ಜನ್ ಸೌಕಾರ್ ಹಾಗೂ ಗ್ಯಾರೆಂಟಿ ಸಮಿತಿಯ ಸದಸ್ಯರಾದ ಮೈಬೂಬ್ ಮಣಿಯಾರ್ ಮಳ್ಳಿ, ಮಲಕಣ್ಣ ಸಿಡ್ಲಿ, ಹನುಮಂತ್ ರಾಯ ಎಡಿಜೋಳ, ಇಸ್ಮೈಲ್ ಪಟೇಲ್ ಇಜೇರಿ, ಸೈದಪ್ಪ ಇಜೆರಿ, ಭೀಮಣ್ಣ ಪೂಜಾರಿ ಮಳ್ಳಿ, ಮಾಂತಪ್ಪ ದೊರಿ, ಹಸನ್ ಪಟೇಲ್ ಬೀಳ್ವಾರ್, ಕಾವೇರಿ ಗೌಡ್ತಿ ಮಾಲಿ ಪಾಟೀಲ್ ಇನ್ನಿತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯರು ಯುವಕರು ಉಪಸ್ಥಿತರಿದ್ದರು.