Home ಜಿಲ್ಲೆ ಕಲಬುರಗಿ ಕೊಲೆ ಪ್ರಕರಣ: ಯುವಕನಿಗೆ ಜೀವಾವಧಿ ಶಿಕ್ಷೆ

ಕೊಲೆ ಪ್ರಕರಣ: ಯುವಕನಿಗೆ ಜೀವಾವಧಿ ಶಿಕ್ಷೆ

ಕಲಬುರಗಿ,ಜು 3: ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮನೂರು ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದÀ ಆರೋಪ ಸಾಬೀತಾದ್ದರಿಂದ ಯಂಕಪ್ಪ ಊರ್ಫ ಯಂಕಣ್ಣ ದ್ಯಾವಪ್ಪ ಮಾಲಗತ್ತಿ ( 24) ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಚಾಮನೂರು ಗ್ರಾಮದ ಮಾಲಗತ್ತಿ ಕುಟುಂಬದ ಯುವತಿಯನ್ನು ಅದೇ ಗ್ರಾಮದ ಅನ್ಯ ಕೋಮಿನ ಯುವಕ ಸೂರ್ಯಕಾಂತ ಎಂಬಾತ ಪ್ರೀತಿಸುತ್ತಿದ್ದ.ಆ ಯುವತಿಗೆ ಶಹಪುರ ತಾಲೂಕಿನ ಗ್ರಾಮವೊಂದರ ಯುವಕನಿಗೆ ಮದುವೆ ಮಾಡಿಕೊಡಲಾಗಿತ್ತು.ಮದುವೆಯಾದ 6-7 ದಿವಸಗಳಲ್ಲಿ ಪ್ರೀತಿಸಿದ ಯುವಕ ಮದುವೆಯಾದ ಯುವತಿಯನ್ನು 10-06-2021 ರಂದು ಆಕೆಯ ಗಂಡನ ಮನೆಯಿಂದ ಕರೆದುಕೊಂಡು ಬೆಂಗಳೂರಿಗೆ ಹೋಗಿ ಅಲ್ಲಿ ಮದುವೆಯಾಗಿದ್ದ.ಇದು ಎರಡೂ ಕುಟುಂಬಗಳ ನಡುವೆ ದ್ವೇಷಕ್ಕೆ ಕಾರಣವಾಗಿತ್ತು.ರಾಜಿ ಪಂಚಾಯತಿ ನಡೆದು ಎರಡೂ ಕುಟುಂಬಗಳ ವೈಮನಸ್ಸು ಸರಿಯಾಗುವವರೆಗೂ ಊರಿಗೆ ಬಾರದಂತೆ ಯುವತಿ ಮತ್ತು ಆಕೆಯನ್ನು ಮರುಮದುವೆಯಾದ ಸೂರ್ಯಕಾಂತನಿಗೆ ತಿಳಿಹೇಳಲಾಗಿತ್ತು
01-06 2022 ರಂದು ಅವರು ತಮ್ಮ ಮಗುವಿನ ತೊಟ್ಟಿಲು ಕಾರ್ಯಕ್ರಮಕ್ಕೆ ಊರಿಗೆ ಮರಳಿ ಬಂದಾಗ ಜಗಳ ನಡೆದಿತ್ತು.ಆ ಜಗಳದಲ್ಲಿ ಬಡಿಗೆ ಕೊಡಲಿಯ ಏಟು ತಿಂದ ಸೂರ್ಯಕಾಂತ ಕುಟುಂಬದ ದಶರಥ ಎಂಬ ವ್ಯಕ್ತಿಯ ಸಾವು ಸಂಭವಿಸಿತ್ತು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸಾಕ್ಷಿ ಆಧಾರಗಳನ್ನು ಪರಿಶೀಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್ ಲಕ್ಷ್ಮೀನಾರಾಯಣ ಅವರು ತೀರ್ಪುನೀಡಿ ಆದೇಶಿಸಿದ್ದಾರೆ.ಸರಕಾರದ ಪರವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರಿ ಸರಕಾರಿ ಅಭಿಯೋಜಕ ಎಸ್.ಆರ್ ನರಸಿಂಹಲು ಅವರು ವಾದ ಮಂಡಿಸಿದ್ದರು.