ಕೋಲಾರ, ೧- ಅಂತರಾಷ್ಟ್ರೀಯ ಮಾದಕ ವಸ್ತು ವಿರೋದಿ ದಿನಾಚಾರಣೆಯನ್ನು ಪ್ರತಿ ವರ್ಷ ಜೂನ್ -೨೬ ರಂದು ಆಚರಿಸ ಲಾಗುತ್ತಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಯುವಜನತೆಗೆ ಜಾಗೃತಿ ಮೂಡಿಸುವುದು ಹಾಗೂ ಮಾದಕ ವ್ಯಸನದಿಂದ ಸಮಾಜ ವನ್ನು ಮುಕ್ತಗೊಳಿಸುವುದು ಈ ಒಂದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ.
ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವತಿಯಿಂದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಕರ್ನಾಟಕದಾದ್ಯಂತ ಸುಮಾರು ೯೯೦ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಸುಮಾರು ೨ಲಕ್ಷ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ Online ಮೂಲಕ ಮಾಹಿತಿ ನೀಡಲಾಗಿರುತ್ತದೆ.
ಪೋಲೀಸ್ ಅಧಿಕಾರಿ ಡಾ.ಹೆಚ್.ಎನ್. ವೆಂಕಟೇಶ್ ಪ್ರಸನ್ನ ರವರು ಮತ್ತು ಡಾ|| ದೇವಿ ಪ್ರಸಾದ್ ಶೆಟ್ಟಿ, ಖ್ಯಾತ ಹೃದಯ ತಜ್ಞರು,ಮಣಿಪಾಲ್ ಆಸ್ಪತ್ರೆ ಮಂಗಳೂರು. ಧರ್ಮಸ್ಥಳ ಕೇಂದ್ರ ಕಛೇರಿಯಿಂದ ಆಯೋಜಿಸಲಾದ Online ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮತ್ತು ಮಾದಕ ವ್ಯಸನದಿಂದ ಸಮಾಜವನ್ನು ಮುಕ್ತಗೊಳಿಸುವ ಕುರಿತು ಜಾಗೃತಿ ಮೂಡಿಸಿದರು.
ಅದೇ ರೀತಿ ಕೋಲಾರ ಯೋಜನಾ ಕಛೇರಿಯ ವ್ಯಾಪ್ತಿಯ ೪ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಮರಜ್ಯೋತಿ ಪಬ್ಲಿಕ್ ಶಾಲೆ ಖಾದ್ರಿಪುರ, ಸರ್ಕಾರಿ ಪ್ರೌಢಶಾಲೆ ಬೆಗ್ಲಿಹೊಸಹಳ್ಳಿ, SDC ಕಾಲೇಜು ಬಸವನತ್ತ, ರಾಧಕೃಷ್ಣ ವಿದ್ಯಾಭಿವೃದ್ದಿ ಸಂಸ್ಥೆ ದಿಂಬ, ಈ ೪ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮೂಲಕ ಭಾಗವಹಿಸಿದ್ದರು. ಅದರೊಂದಿಗೆ ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದಿಂದ ಪ್ರಸ್ತುತ ವಿದ್ಯಾಮಾನದಲ್ಲಿ ಮಾದಕ ವಸ್ತುಗಳಿಂದ ಯುವಜನತೆ ಮಾರ್ಗ ತಪ್ಪುತ್ತಿರುವ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಉಪಯುಕ್ತ ಮತ್ತು ಅವಶ್ಯಕವಾಗಿರುತ್ತವೆ. ಇದನ್ನು ನೆರವೇರಿಸಿದ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಯುವಜನತೆಯ ಪರವಾಗಿ ಹೃತ್ಫೂರ್ವಕ ಅಭಿನಂದನೆ ಮತ್ತು ಕೃತಜ್ಞತೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ೪ ಶಾಲೆಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರಾದ ಬಿ. ಮುನಿಯಪ್ಪ, ಅಶ್ವಿನಿ, ಕೋಲಾರ ಜಿಲ್ಲಾ ನಿರ್ದೇಶಕರಾದ ಶಿವಾನಂದ ಆಚಾರ್ಯರವರು, ಮತ್ತು ತಾಲ್ಲೂಕು ಯೋಜನಾಧಿಕಾರಿ ಸಿದ್ದಗಂಗಯ್ಯ ಟಿ.ಎಸ್. ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿ ಗಿರೀಶ್, ಸಿ.ಎಚ್.ಎಸ್.ಸಿ ಯೋಜನಾಧಿಕಾರಿ ಪಾಂಡಿಯನ್, ಹಾಗೂ ಮೇಲ್ವಿಚಾರಕರಾದ ನವೀನ್ ಎಲ್. ಸಿದ್ದೇಶ್, ಪುಷ್ಪಾವತಿ, ಮತ್ತು ನಿಜಗುಣಮ್ಮ, ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು
































