Home ಜಿಲ್ಲೆ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸಿ, ಭೂಮಿಯ ದೀರ್ಘಕಾಲದ ಉತ್ಪಾದಕತೆ ಮರಳಿ ಪಡೆಯಲು : ಕೃಷಿ ವಿಜ್ಞಾನಿ ಡಾ.ರಾಜಶೇಖರ್...

ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸಿ, ಭೂಮಿಯ ದೀರ್ಘಕಾಲದ ಉತ್ಪಾದಕತೆ ಮರಳಿ ಪಡೆಯಲು : ಕೃಷಿ ವಿಜ್ಞಾನಿ ಡಾ.ರಾಜಶೇಖರ್ ಬಸನಾಯಕ ಕರೆ

ಬೀದರ : ಜೂ ೧೪ : ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಮಣ್ಣಿನ ನೈಸರ್ಗಿಕ ಗುಣಮಟ್ಟ ಹಾಳಾಗುತ್ತಿದೆ. ರೈತರು ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಹಸಿರು ಗೊಬ್ಬರ, ಕಾಂಪೋಸ್ಟ್ ತರಹದ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸಿ, ಭೂಮಿಯ ದೀರ್ಘಕಾಲದ ಉತ್ಪಾದಕತೆಯನ್ನು ಮರಳಿ ಪಡೆಯಬಹುದು ಎಂದು ಬೀದರ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಡಾ.ರಾಜಶೇಖರ್ ಬಸನಾಯಕ್ ಅವರು ರೈತರಿಗೆ ಕಿವಿಮಾತು ಹೇಳಿದರು.

 ಬೀದರ ಜಿಲ್ಲೆಯ ಚಿಕಪೇಟ್, ಮರ್ಕಲ್‌ನಲ್ಲಿ ಇತ್ತೀಚಿನ "ಖೇತಿ ಬಚಾವೋ ಆಂದೋಲನ ಅಭಿಯಾನ"ವನ್ನು  ರೈತ ಸಮುದಾಯಕ್ಕೆ ವೈಜ್ಞಾನಿಕ, ಸುಸ್ಥಿರ ಮತ್ತು ಕಡಿಮೆ ವೆಚ್ಚದ ಕೃಷಿ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

 ತೀವ್ರವಾಗಿ ಕಾಡುತ್ತಿರುವ ಮಣ್ಣಿನ ಸವೆತ ಹಾಗೂ ಫಲವತ್ತತೆ ಕುಸಿತದ ಸಮಸ್ಯೆಯ ಬಗ್ಗೆ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಮಣ್ಣಿನ ನೈಸರ್ಗಿಕ ಗುಣಮಟ್ಟ ಹಾಳಾಗುತ್ತಿದೆ. ರೈತರು ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಹಸಿರು ಗೊಬ್ಬರ, ಕಾಂಪೋಸ್ಟ್ ತರಹದ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸಿ, ಭೂಮಿಯ ದೀರ್ಘಕಾಲದ ಉತ್ಪಾದಕತೆಯನ್ನು ಮರಳಿ ಪಡೆಯಬಹುದು ಎಂದು ಆತಂಕ ವ್ಯಕ್ತಪಡಿಸಿದರು.

 ಬಳಿಕ ಸಸ್ಯ ಸಂರಕ್ಷಣೆ ಕುರಿತು ಮಾತನಾಡಿದ ವಿಜ್ಞಾನಿ ಡಾ. ಶಿವಕುಮಾರ್ ಅವರು, ಪರಿಸರ ಸ್ನೇಹಿ ಬೆಳೆ ಸಂರಕ್ಷಣಾ ವಿಧಾನಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು. ಕೀಟ ಮತ್ತು ರೋಗಗಳ ನಿಯಂತ್ರಣಕ್ಕಾಗಿ ಜೈವಿಕ ಹಾಗೂ ನೈಸರ್ಗಿಕ ಮಾರ್ಗಗಳನ್ನು ಅನುಸರಿಸಲು ಅವರು ಕರೆ ನೀಡಿದರು. ಸ್ಥಳೀಯವಾಗಿ ಸಿಗುವ ಸಸ್ಯ ಸಾಮಗ್ರಿಗಳಿಂದ ಕಷಯ  ಹಾಗೂ ಜೈವಿಕ ಕೀಟನಾಶಕಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ ಅವರು, ದುಬಾರಿ ಹಾಗೂ ವಿಷಕಾರಿ  ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ, ಜೀವವೈವಿಧ್ಯವನ್ನು ರಕ್ಷಿಸುವ ನೈಸರ್ಗಿಕ ಸೂತ್ರಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಬೇಕು ಎಂದು ತಿಳಿಸಿದರು.

 ಬೀದರ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಡಾ.ರಾಜಶೇಖರ್ ಬಸನಾಯಕ್, ಮೊ.೯೪೮೦೬೯೬೩೧೮, ೯೭೧೧೩೩೦೭೫೫ಗೆ ಕರೆ ಮಾಡಿ ಮಾಹಿತಿ ಪಡೆಯಬೇಕು ಎಂದು ಹೇಳಿದರು.

 ಈ ಸಂದರ್ಭದಲ್ಲಿ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಶಿವಕುಮಾರ್, ರೈತ ಸಂಘದ ಪ್ರಮುಖ ನಾಯಕರಾದ ಶ್ರೀ ಶಂಕರಣ್ಣ ಪಾರಾ ಮತ್ತು ಶ್ರೀ ವೈಜಿನಾಥ್ ಬುಯ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಪ್ರಗತಿಪರ ರೈತರು ಉತ್ಸಾಹದಿಂದ ಉಪಸ್ಥಿತರಿದ್ದರು.