Home ಮುಖಪುಟ ಸುದ್ದಿ ಅನಧಿಕೃತ ಜಾಹೀರಾತು ಫಲಕ – ಬ್ಯಾನರ್ ತೆರವು

ಅನಧಿಕೃತ ಜಾಹೀರಾತು ಫಲಕ – ಬ್ಯಾನರ್ ತೆರವು

ಬೆಂಗಳೂರು,ಜೂ.೨-ಡಿಕೆ ಶಿವಕುಮಾರ್ ಅವರು ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ
ನಗರದ ವಿವಿಧ ಕಡೆಗಳಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ.


ಡಿಕೆ ಶಿವಕುಮಾರ್ ಶುಭಕೋರುವ ಅನಧಿಕೃತವಾಗಿ ಹಾಕಿದ್ದ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ಜೊತೆಗೆ ಒತ್ತುವರಿಯಾಗಿದ್ದ ಪಾದಚಾರಿ ಮಾರ್ಗವನ್ನು ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದರು.


ವಿಧಾನಸೌಧ,ಹೈಕೋರ್ಟ್ ಮುಂಭಾಗ, ಲೋಕಭವನ ಇನ್ನಿತರ ಅನಧಿಕೃತವಾಗಿ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ.
ಹೈಕೋರ್ಟ್‌ನ ನಿರ್ದೇಶನದಂತೆ, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಅನಧಿಕೃತ ಬ್ಯಾನರ್‌ಗಳು, ಫ್ಲೆಕ್ಸ್‌ಗಳು ಮತ್ತು ಪೋಸ್ಟರ್‌ಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಆದೇಶವಿದೆ.


ಅನಧಿಕೃತವಾಗಿ ಪ್ರದರ್ಶಿಸುವ ಬ್ಯಾನರ್‌ಗಳಿಗೆ ೫೦ ಸಾವಿರ ರೂ. ದಂಡ ಮತ್ತು ಎಫ್‌ಐಆರ್ ದಾಖಲಿಸುವ ಎಚ್ಚರಿಕೆಯನ್ನು ಬಿಬಿಎಂಪಿ ಮತ್ತು ಸರ್ಕಾರ ನೀಡಿದೆ.