Home ಜಿಲ್ಲೆ ಕಲಬುರಗಿ ಹೋರಾಟದ ಪ್ರತಿಫಲ: ಮೊಳಗಿದ ಸರ್ಕಾರಿ ಶಾಲೆಗಂಟೆ

ಹೋರಾಟದ ಪ್ರತಿಫಲ: ಮೊಳಗಿದ ಸರ್ಕಾರಿ ಶಾಲೆಗಂಟೆ

ಕಲಬುರಗಿ,ಜೂ 2: ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದ ವಿರುದ್ಧ ಕಳೆದ 6 ತಿಂಗಳಿಂದ ಸಾರ್ವಜನಿಕರು, ಪೆÇೀಷಕರು ಮತ್ತು ವಿದ್ಯಾರ್ಥಿಗಳು ನಡೆಸಿದ ನಿರಂತರ, ಒಗ್ಗಟ್ಟಿನ ಹೋರಾಟದಿಂದಾಗಿ ಮುಚ್ಚುವ ಭೀತಿಯಲ್ಲಿದ್ದ ಶಾಲೆಗಳು ಇಂದು ಸಡಗರದಿಂದ ಪುನಾರಂಭಗೊಂಡಿವೆ.
ಈ ಸಂದರ್ಭದಲ್ಲಿ ಎಐಡಿಎಸ್‍ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರು ಜಿಲ್ಲೆಯ ಕಾಳಗಿ, ಚಿತ್ತಾಪುರ, ಶಹಾಬಾದ್, ಕಮಲಾಪುರ, ಕಲಬುರಗಿ, ಜೇವರ್ಗಿ ಹಾಗೂ ಅಫಜಲಪುರ ತಾಲೂಕುಗಳ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು ಎಂದು ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ತಿಳಿಸಿದ್ದಾರೆ