Home ಜಿಲ್ಲೆ ಕಲಬುರಗಿ ಧರ್ಮ ನೀತಿವಂತರಾಗಿ ಬಾಳಬೇಕು

ಧರ್ಮ ನೀತಿವಂತರಾಗಿ ಬಾಳಬೇಕು

ಕಲಬುರಗಿ,ಜೂ 2: : ಅಳಂದ ತಾಲೂಕಿನ ಸುಂಟನೂರ ಗ್ರಾಮದ ಬಸವಣ್ಣಪ್ಪ ದೇವರ ಕಲ್ಯಾಣ ಮಂಟಪದಲ್ಲಿ ಗಾನಯೋಗಿ ಪಂಚಾಕ್ಷರಿ ಸಂಗೀತ ಕಲಾ ಸೇವಾ ಸಂಸ್ಥೆ ಆಲೂರ ಬಿ, ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಕಲಾ ಉತ್ಸವ ಹಾಗೂ ನಾಟಕೋತ್ಸವ ಕಾರ್ಯಕ್ರಮ ಜರುಗಿತು .
ಕಾರ್ಯಕ್ರಮದ ಸಾನಿಧ್ಯ ಹಿರೇಸಾವಳಗಿ ಶಿವಲಿಂಗೇಶ್ವರ ಸಂಸ್ಥಾನ ಮಠದ ಗುರುನಾಥ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಜೆ.ಡಿ.ಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಮಹೇಶ್ವರಿ ವಾಲಿ ವಹಿಸಿದರು . ಅತಿಥಿಗಳಾಗಿ ಆಗಮಿಸಿದ ನೀಲಕಂಠಯ್ಯ ಸ್ವಾಮಿ ಹಿರೇಮಠ ಮಾತನಾಡಿ ಪ್ರಸ್ತುತ ಕಾಲಮಾನದಲ್ಲಿ ಏನೆಲ್ಲಾ ಇದ್ದರೂ ಕೂಡ ನೀತಿ ಧರ್ಮವಂತರಾಗಿ ಸಂಸ್ಕಾರವಂತರಾಗಿ ಬಾಳವುದನ್ನು ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ನಾವು ಕಾಣುವವರಾಗಿದ್ದೇವೆ ಆದರೆ ನಾವೆಲ್ಲಾ ಧರ್ಮ ಸಂಸ್ಕೃತಿ ಮರೆಯಬಾರದು ಎಂದು ನುಡಿದರು . ಕಾರ್ಯಕ್ರಮದಲ್ಲಿ ಸಂಗಯ್ಯ ಸ್ವಾಮಿ ಮಠಪತಿ. ಷಣ್ಮುಖಯ್ಯ ಸ್ವಾಮಿ ಸ್ಥಾವರಮಠ. ಮಲ್ಲಯ್ಯ ಸ್ವಾಮಿ ಮಠಪತಿ. ಶರಣಯ್ಯ ಸ್ವಾಮಿ ಆಲೂರ. ನಾಗಯ್ಯ ಸ್ವಾಮಿ ಬಬಲೇಶ್ವರ. ಜನಾರ್ಧನ ದೇಶಪಾಂಡೆ. ವಿಠ್ಠಲ್ ಗುಂಡದ. ಶಂಕರ ಹುಲಿಮನಿ. ವಿಠ್ಠಲ ತಳವಾರ. ಕುಪೇಂದ್ರ ಮೇಲಕೇರಿ ಅರ್ಜುನ ವಗ್ಗನ್. ಬಾಬುರಾವ ಎಲ್ ಪಾಣೆಗಾಂವ. ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಲಾವಿದರಾದ ತೋಟಯ್ಯ ಶಾಸ್ತ್ರಿಗಳು ಕಥಾಕೀರ್ತನೆ ನಡೆಸಿಕೊಟ್ಟರು. ತತ್ವಪದ ಸಂಗೀತ ಡಾ ನಾಗರಾಜ ಕೋಟನೂರ. ಸುಗಮ ಸಂಗೀತ ಸೈದಪ್ಪಾ ಚೌಡಾಪೂರ. ಹಿಂದೂಸ್ತಾನಿ ಸಂಗೀತ ಬಸಯ್ಯ ಬಿ ಗುತ್ತೇದಾರ ತೆಲ್ಲೂರ. ವಚನ ಸಂಗೀತ ರೇವಣಯ್ಯ ಮಠಪತಿ. ಜಾನಪದ ಗೀತೆ ಈರಮ್ಮ ಎಸ್ ಮಠ. ಭಾವಗೀತೆ ಗುರುರಾಜ ಬಿರಾದಾರ.. ಇವರೊಂದಿಗೆ ವಾದ್ಯ ಸಹಕಾರ ಜಗದೀಶ ಹೂಗಾರ ದೇಸಾಯಿಕಲ್ಲೂರ. ಸೋಮಶೇಖರ ಕಲ್ಯಾಣ. ಬಸವರಾಜ ಚಳಗೇರಿ. ಮಹಾಂತಯ್ಯ ಸ್ವಾಮಿ ತಬಲಾಸಾಥಿ ನೀಡಿದರು. “ಭಗವಂತ ಕೊಟ್ಟ ಭಾಗ್ಯ ” ಸಾಮಾಜಿಕ ನಾಟಕ ಪ್ರೇಕ್ಷಕರ ಮನಸೊರೆ ಗೊಳಿಸಿತು.ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. . ಸಂಸ್ಥೆಯ ಅಧ್ಯಕ್ಷ ನಾಗಲಿಂಗಯ್ಯ ಶಾಸ್ತ್ರೀಗಳು ಸ್ಥಾವರಮಠ ಸುಂಟನೂರ ಸ್ವಾಗತಿಸಿದರು. ಮಹಾಲಿಂಗಯ್ಯ ಸ್ವಾಮಿ ಆಲೂರ ಬಿ ನಿರೂಪಿಸಿದರು.