Home ಜಿಲ್ಲೆ ಕಲಬುರಗಿ ನಗರದ ಸಮಸ್ಯೆಗಳ ವಿರುದ್ಧ ವ್ಯಾಪಾರಸ್ಥರ ಬೃಹತ್ ಧರಣಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ನಗರದ ಸಮಸ್ಯೆಗಳ ವಿರುದ್ಧ ವ್ಯಾಪಾರಸ್ಥರ ಬೃಹತ್ ಧರಣಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಸೇಡಂ,ಮೇ,20:ನಗರದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸ್ಥಳೀಯ ಆಡಳಿತದ ವಿಫಲತೆಯನ್ನು ಖಂಡಿಸಿ ಹಾಗೂ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆ ವ್ಯಾಪಾರಸ್ಥರ ಸಂಘದ ವತಿಯಿಂದ ಬೃಹತ್ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಶ್ರೀ ಕೊತ್ತಲ ಬಸವೇಶ್ವರರ ದೇವಾಲಯದಿಂದ ಬಸವೇಶ್ವರ ವೃತ್ತದ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ ವರ್ತಕರು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವ್ಯಾಪಾರಸ್ಥರ ಸಂಘದಿಂದ ನಡಿಯುತ್ತಿರುವ ಧರಣಿ ಸ್ಥಳಕ್ಕೆ ಸಹಾಯಕ ಆಯುಕ್ತರಾದ ಪ್ರಭುರೆಡ್ಡಿ ಕೆಎಎಸ್ ತಹಸಿಲ್ದಾರ್ ಶ್ರೀಮತಿ ಶ್ರೀಯಾಂಕಾ ಎ ಧನಶ್ರೀ ಹಾಗೂ ನಗರಸಭೆ ಪೌರಾಯುಕ್ತರಾದ ಶರಣಯ್ಯ ಸ್ವಾಮಿ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಅಧಿಕಾರಿಗಳು ವ್ಯಾಪಾರಸ್ಥರ ಮನವಿ ಪತ್ರ ಸ್ವೀಕರಿಸಿ ಕ್ಷಣ ಪರಿಹಾರ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಧರಣಿ ಸತ್ಯಾಗ್ರಹ ಕೈಬಿಟ್ಟರು. ಈ ವೇಳೆಯಲ್ಲಿ ಸಂಘದ ಗೌರವಾಧ್ಯಕ್ಷ ಅಂಬಾರಾವ್ ಬಿ. ಪಾಟೀಲ್, ವ್ಯಾಪಾರಸ್ಥರ ಸಂಘದ ತಾಲೂಕಾ ಅಧ್ಯಕ್ಷರಾದ ರಾಜಶೇಖರ ಎಸ್.ನೀಲಂಗಿ,ಉಪಾಧ್ಯಕ್ಷರಾದ ಮನೋಹರ್ ದೊಂತಾ,ಅನಂತರಡ್ಡಿ ಪಾಟೀಲ್,ಅನಿಲ್ ಮಾಲಪಾಣಿ,ಕಾರ್ಯದರ್ಶಿ ದತ್ತಾತ್ರೇಯ ಐನಾಪುರ್,ಜಂಟಿ ಕಾರ್ಯದರ್ಶಿಗಳಾದ ಪ್ರಶಾಂತ್ ಮಹೀಂದ್ರಕ, ಅಬ್ದುಲ್ ಸತ್ತಾರ್,ಶ್ರೀನಿವಾಸ್ ಕಸೋಜು, ಜಂಟಿ ಖಜಾಂಚಿ ತಾರಾರಾಮ್ ಚೌಧರಿ, ಸದಸ್ಯರಾದ ಬಸವರಾಜ ರೇವಗೊಂಡ, ಪ್ರೇಮ್ ಕುಮಾರ್ ಗಡಾಳೆ, ನಿತೀಶ್ ಪುರುಷೋತ್ತಮ್ ಪರಿಕ್, ಬಸವರಾಜ ಚಂದನಕೇರಿ, ಭೀಮರಾಯ ಹಲ್ಕಟ್ಟಿ, ವಿದ್ಯಾಸಾಗರ್ ಪಾಟೀಲ್, ಶಿವಕುಮಾರ ತರನಳ್ಳಿ,ಶುಭಮ್ ಐನಾಪು, ಆರಿಫ್ ಖಾನ್, ಶರಣು ಪಾಟೀಲ್, ಶರಣಗೌಡ ರುದ್ದೂರ್, ಚೇತನ್ ಐನಾಪುರ್, ಶರಣು ಸೇರಿದಂತೆ ಅನೇಕರು ಉಪಸ್ಥಿತರಿದ್ದರು