
ಸಂಜೆವಾಣಿ ವಾರ್ತೆ,
ವಿಜಯಪುರ, ಮೇ. ೨೦: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ ನೆರವೇರಿಸಿ, ಸಾರ್ವಜನಿಕರ ಅಹವಾಲು ಆಲಿಸಿದರು.
ನಗರದ ವಾರ್ಡ್ ನಂ.೩೩ ರಲ್ಲಿ ಬರುವ ಶಹಾಪೇಟೆ ಲೇಔಟ್ ದಲ್ಲಿ ೨೦೨೫-೨೬ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಿಸಲಾದ ರೂ.೧೦ ಲಕ್ಷ ಅನುದಾನದಲ್ಲಿ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಹಾಗೂ ಬನಶಂಕರಿ ದೇವಸ್ಥಾನದ ಆವರಣದಲ್ಲಿ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಿಸಲಾದ ರೂ.೧೫ ಲಕ್ಷ ಮೊತ್ತದಲ್ಲಿ ವೇದಮಾತಾ ಶ್ರೀ ಗಾಯಿತ್ರಿ ಪ್ರತಿಷ್ಠಾನ ಟ್ರಸ್ಟ್ನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಹಾಗೂ ರಹೀಮ್ ನಗರ ಕೌಜಲಗಿ ತೋಟದ ಶ್ರೀ ಜೈ ಹನುಮಾನ್ ಗುಡಿ ಹತ್ತಿರ ೨೦೨೫-೨೬ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಿಸಲಾದ ರೂ.೧೫ ಲಕ್ಷ ಅನುದಾನದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ನಂತರ ನೆರೆದ ಸಾರ್ವಜನಿಕರ ಅಹವಾಲು ಆಲಿಸಿ, ಪರಿಹಾರ ಕಲ್ಪಿಸುವುದಾಗಿ ಸಕರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಕುರಿಯವರ, ಪ್ರೇಮಾನಂದ ಬಿರಾದಾರ, ಮುಖಂಡರಾದ ಶಂಕರ ಹೂಗಾರ, ವಿಠ್ಠಲ ನಡುವಿನಕೇರಿ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ, ಎನ್.ಎಂ.ಪ್ಯಾಟಿ, ಆನಂದ ದೊಡಮನಿ, ಸಂಗಮೇಶ ಮೇತ್ರಿ, ಡಾ. ಕಟಗೇರಿ, ನಾಗಪ್ಪ ಮೇತ್ರಿ, ರೇಣುಕಾ ಪರಸಪ್ಪಗೋಳ, ರೇಖಾ ಕೌಜಲಗಿ, ಪರಶುರಾಮ ಜಾಧವ, ಅನೀಲ ದ್ಯಾಬೇರಿ, ಶಂಕರ ತಾಲಬಾವಡಿ, ಅಕ್ಷಯ ಹೂಗಾರ, ಕಮಲೇಶ ಬಜಂತ್ರಿ, ರಾಜು ದ್ಯಾಬೇರಿ, ಮಹಾದೇವ ಕಲ್ಲೊಳ್ಳಿ, ಗೋಪಾಲ ಕಣಸೆ ಸೇರಿದಂತೆ ಮತ್ತಿತರರು ಇದ್ದರು.




















