Home ಜಿಲ್ಲೆ ಮೃತ ರಾನಡೆ ಶೋಭಾ ಮನೆಗೆ ಪುಂಡಲೀಕರಾವ ಶೇಟ್ಟಿಬಾ ಭೇಟಿ, ಸಾಂತ್ವನ

ಮೃತ ರಾನಡೆ ಶೋಭಾ ಮನೆಗೆ ಪುಂಡಲೀಕರಾವ ಶೇಟ್ಟಿಬಾ ಭೇಟಿ, ಸಾಂತ್ವನ

ಸಂಜೆ ವಾಣಿ ವಾರ್ತಾ
ಕಮಲನಗರ :ಮೇ.೨೦: ತಾಲ್ಲೂಕಿನ ಭೋಪಾಳಗಡ್ ಬೇಳಕುಣಿ ಗ್ರಾಮದ ಶೋಭಾ ತಂದೆ ಸಂತೋಷ ರಾನಡೆ ಎಂಬ ವಿದ್ಯಾರ್ಥಿನಿಯ ಸಾವಿನ ಸುದ್ದಿಯು ಇಡೀ ಜಿಲ್ಲೆಗೇ ಬೆಚ್ಚಿಬೀಳಿಸಿ ವಾರ ಕಳೆದಿದೆ. ದಿಢೀರ್ ಸಾವಿನಿಂದ ತೀವೃತರವಾದ ನೋವಿನಿಂದ ಬಳಲುತ್ತಿರುವ ಶೋಭಾಳ ಗೃಹಕ್ಕೆ ಮಾಜಿ ವಿಧಾನಪರಿಷತ್ ಸದಸ್ಯ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರು ಹಾಗೂ ಸಮತಾ ಪ್ರತಿಷ್ಠಾನ ಕಾರ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ಪುಂಡಲೀಕರಾವ ಶೇಟ್ಟಿಬಾ ಕೌಟೆ ಭೇಟಿ ನೀಡಿ ಸಾಂತ್ವನ ತಿಳಿಸಿದರು.
ಮೃತ ವಿದ್ಯಾರ್ಥಿನಿ ಶೋಭಾ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುತ್ತಿದ್ದಂತೆ, ಮಗಳ ಸಾವಿನಿಂದ ಬೇಸತ್ತ ಪೋಷಕರೊಂದಿಗೆ ಎಸ್.ಪಿ.ಕೆ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ. ಪುಂಡಲೀಕರಾವ ಕೆಲ ಕಾಲ ವಿಚಾರಿಸಿ, ಧೈರ್ಯ ತುಂಬಿದರು. ಮೃತ ವಿದ್ಯಾರ್ಥಿನಿಯ ಸಾವಿಗೆ ಕಾರಣವಾದ ಆರೋಪಿಗೆ ರಕ್ಷಣೆ ನೀಡದೇ, ಕಠಿಣಾತೀಕಠಿಣ ಶಿಕ್ಷೆಯಾಗಬೇಕು ಎಂದು ಪಾಲಕರು ಪರಿಪರಿಯಾಗಿ ಒತ್ತಾಯಿಸಿದರು.
ಇದೇ ವೇಳೆ ಔರಾದ(ಬಾ) ನಗರದ ನಾಲಂದಾ ಪ್ರೌಢ ಶಾಲೆಯ ಸಮಸ್ತ ಬೋಧಕ ಸಿಬ್ಬಂಧಿ ವರ್ಗದವರೂ ಹಾಜರಿದ್ದು, ಶೋಕಸಾಗರದಲ್ಲಿ ಮುಳುಗಿದ ಕುಟುಂಬ ವರ್ಗದವರ ದು:ಖಕ್ಕೆ ಕಂಬನಿ ಮಿಡಿದು, ಧೈರ್ಯ ತುಂಬಿ, ಅಭಯ ವ್ಯಕ್ತಪಡಿಸಿದ್ದಲ್ಲದೇ ಕುಟುಂಬ ವರ್ಗದವರ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ ಎಂದರು.