Home ಜಿಲ್ಲೆ ಶಿಕ್ಷಣವೆಂಬ ಅಸ್ತç ನಿಮ್ಮದಾಗಲಿ:ಡಾ.ಕೊಕ್ಕನವರ

ಶಿಕ್ಷಣವೆಂಬ ಅಸ್ತç ನಿಮ್ಮದಾಗಲಿ:ಡಾ.ಕೊಕ್ಕನವರ

ತಾಳಿಕೋಟೆ : ಮೇ.೨೦: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರರAದು ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು, ಎನ್.ಎಸ್.ಎಸ್. ಎನ್.ಸಿ.ಸಿ, ವಾಯ್.ಆರ್.ಸಿ. ಇ.ಎಲ್.ಸಿ. ಮತ್ತು ಸೌಟ್ಸ್ & ಗೈಡ್ಸ್ ಹಾಗೂ ವಿವಿಧ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವು ಜರುಗಿತು.
ಕಾಲೇಜಿನ ವಿರಕ್ತಶ್ರೀ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಸಂಪನ್ಮೂಲ ಅತಿಥಿಗಳಾಗಿ ಆಗಮಿಸಿದ ಜಮಖಂಡಿಯ ಸಾಹಿತಿಗಳು ಮತ್ತು ಸಂಯೋಜಕರು ಕನ್ನಡ ಸ್ನಾತಕೋತ್ತರ ಕೇಂದ್ರ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಡಾ. ಯಶವಂತ ಕೊಕ್ಕನವರ ಅವರು ಮಾತನಾಡಿ ಸಮಾಜದಲ್ಲಿ ವ್ಯಕ್ತಿಗೆ ಸ್ಥಾನಮಾನಗಳು ದೊರೆಯ ಬೇಕಾದಲ್ಲಿ ಶಿಕ್ಷಣವೆಂಬ ಅಸ್ತ್ರ ನಮ್ಮದಾಗ ಬೇಕು ಆಗ ನಮ್ಮ ಗುರಿ ತಲುಪಲು ಸಾಧ್ಯವಾಗಲಿದೆ ಅಚಲವಾದ ನಂಬಿಕೆ ಮತ್ತು ಗುರಿಯೊಂದಿಗೆ ಮುನ್ನಡೆದು ಸಾಧನೆಯ ಸಾಧಕರಾಗಿ ಇದೇ ಶಾಲೆಗೆ ಅತಿಥಿಗಳಾಗ ಆಗಮಿಸಿ ಕಾಲೇಜಿನ ಹಿರಿಮೆಯನ್ನು ಬೆಳಗಿಸಿರಿ ಎಂದರು.
ಪ್ರಾಚಾರ್ಯರಾದ ಡಾ. ಡಿ.ಬಿ ಮೂಗಡ್ಲಿಮಠ ಅವರು ಮಾತನಾಡಿ ವಿದ್ಯಾರ್ಥಿಗಳು ಗುರಿ, ಸಮಯಪ್ರಜ್ಞೆ, ದೃಡಸಂಕಲ್ಪದಿAದ ಬದುಕು ಕಟ್ಟಿಕೊಳ್ಳಬೇಕು ಉನ್ನತ ಶಿಕ್ಷಣದಿಂದ ಉದ್ಯೋಗ ಪಡೆದು ಜೀವನ ರೂಪಿಸಿಕೊಳ್ಳಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ವೀರಶೈವ ವಿದ್ಯಾವರ್ಧಕ ಸಂಘದ ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರಾದ ವಿ. ಸಿ. ಹಿರೇಮಠ ಅವರು ಮಾತನಾಡಿ ಮಕ್ಕಳು ತಮ್ಮ ಉಜ್ವಲ ಭವಿಷ್ಯಕ್ಕೆ ಸದಾ ನಿರತರಾಗಬೇಕು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ನಮ್ಮ ಮಹಾವಿದ್ಯಾಲಯ ಕಳೆದ ೪೯ ವರ್ಷಗಳಿಂದ ಶ್ರಮಿಸುತಿದೆ. ನಮ್ಮ ಮಹಾವಿದ್ಯಾಲಯಕ್ಕೆ ೫೦ ವರ್ಷಗಳು ತುಂಬುವ ಸಂಭ್ರಮಾಚರಣೆಯಲ್ಲಿ ಇದ್ದೆವೆ. ಸುವರ್ಣ ಸಂಭ್ರಮದಲ್ಲಿ ನಾವು ನಮ್ಮ ಸಂಸ್ಥೆಯನ್ನು ಮತ್ತಷ್ಟು ಮೆರಗು ನೀಡಲು ಪ್ರಯತ್ನಿಸುತ್ತೆವೆ ಎಂದರು.
ಈ ಸಮಯದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ, ಕಾರ್ಯದರ್ಶಿಗಳು ಎಮ್.ಎಸ್. ಸರಶೆಟ್ಟಿ, ಉಪಾಧ್ಯಕ್ಷ ಕೆ.ಎಸ್. ಮುರಾಳ, ಸಂಘದ ನಿರ್ದೆಶಕರು ಹಾಗೂ ಸಂಚಾಲಕರಾದ ಡಾ. ಅಶೋಕ ಆರ್ ರಾಠೋಡ ಹಾಗೂ ವಿದ್ಯಾರ್ಥಿ ಪ್ರತಿನಿಧಿಯಾದ ಕುಮಾರಿ ವಿದ್ಯಾಶ್ರೀ ಅಗಸರ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿರು ಉಪಸ್ಥಿತರಿದ್ದರು.

ಕುಮಾರಿ ಮಮತಾಜ ನಾಯ್ಕೋಡಿ ಪ್ರಾರ್ಥಿಸಿದರು. ಡಾ. ಸುಜಾತಾ ಚಲವಾದಿ ಪರಿಚಯಿಸಿದರು. ಬಹುಮಾನ ವಿತರಣೆಯನ್ನು ಕೆ. ಬಿ. ದೇಸಾಯಿ ನಡೆಸಿಕೊಟ್ಟರು. ಡಾ. ದೀಪಾ ಮಾಳಗೆ, ಶ್ರೀಮತಿ ಸಂಗೀತಾ ಕೊಡೆಕಲ್ಲಮಠ ನಿರೂಪಿಸಿದರು. ಶ್ರೀಮತಿ ಲಲಿತಾ ಗೌಡರ ವಂದಿಸಿದರು.

ಶಿಕ್ಷಣದ ಜೊತೆಗೆ ಸಾಮಾಜಿಕ ಕಳಕಳಿಯೂ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಇದರಿಂದ ವಿದ್ಯಾರ್ಥಿ ಜೀವನ ಯಾವತೀರುವಿನಲ್ಲಿ ಸಾಧನೆಗೆ ಹೋದರೂ ಯಶಸ್ವಿಯಾಗಲು ಸಾಧ್ಯವಾಗಲಿದೆ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಎಂಬುದನ್ನು ಇಟ್ಟುಕೊಂಡು ಮುಂದೆ ಸಾಗಿದರೆ ಯಶಸ್ವಿನ ಗಟ್ಟ ಮುಟ್ಟಲು ಸಾದ್ಯ.
                                    ದಯಾನಂದ ಮೂಗಡ್ಲಿಮಠ
                                ಪ್ರಾಚಾರ್ಯರು ಎಸ್.ಕೆ.ಮಹಾವಿದ್ಯಾಲಯ