Home ಜಿಲ್ಲೆ ಸರ್ಕಾರದ ಸೌಲಭ್ಯಗಳ ವಂಚಿತ ಬೆಳೆಸಮೀಕ್ಷೆದಾರರು

ಸರ್ಕಾರದ ಸೌಲಭ್ಯಗಳ ವಂಚಿತ ಬೆಳೆಸಮೀಕ್ಷೆದಾರರು

ಹೂವಿನ ಹಿಪ್ಪರಗಿ :ಮೇ.೨೦:ಬಸವನ ಬಾಗೇವಾಡಿ ತಾಲೂಕಿನಾದ್ಯಂತ ಕ್ರುಷಿ ಇಲಾಖೆ ಅಡಿಯೊಳಗೆ ಸತತವಾಗಿ ಸುಮಾರು ೮-೧೦ ವರ್ಷಗಳಿಂದ ೯೫ ಜನ ಬೆಳೆಸಮಿಕ್ಷೆದಾರರು ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಸರಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಅವರು ಸಂಘಟನೆಮುಖಾAತರ ನ್ಯಾಯ ಸಮ್ಮತವಾದ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆಯನ್ನು ಇಡೀ ರಾಜ್ಯ ವ್ಯಾಪಿ ಕಟ್ಟಿಕೊಂಡಿದ್ದಾರೆ. ಈ ಸಂಘಟನೆಯ ಅಂಗ ಘಟಕವಾಗಿ ಕಾರ್ಯ ನಿರ್ವಹಿಸಲು ಬಸವನ ಬಾಗೇವಾಡಿ ತಾಲೂಕಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಇತ್ತೀಚೆಗೆ ಬಸವನ ಬಾಗೇವಾಡಿಯ ಶ್ರೀ ಬಸವೇಶ್ವರ ದೇವಾಲಯ ಆವರಣದ ಉದ್ಯಾನವನದಲ್ಲಿ ರಾಜ್ಯ ಸಮಿತಿಯ ಸದಸ್ಯರುಗಳ ನೇತೃತ್ವದಲ್ಲಿ ನೆರವೇರಿಸಲಾಯಿತು.
ಬಸವನ ಬಾಗೇವಾಡಿ ತಾಲೂಕಾ ಅಂಗ ಘಟಕದ ಗೌರವಅಧ್ಯಕ್ಷರಾಗಿ ರಾಯಪ್ಪ ದಳವಾಯಿ, ತಾಲೂಕಿನ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಘಟಕದ ಸಹಕಾರ್ಯದರ್ಶಿಯೂ ಆಗಿ ಶಿವರಾಜ ಪೂಜಾರಿ, ಉಪಾಧ್ಯಕ್ಷರಾಗಿ ನಾಗಪ್ಪ ಚಿಗರಿ, ಪ್ರಧಾನ ಕಾರ್ಯದರ್ಶಿಯಾಗಿ ನಬಿಸಾಹೇಬ ಕರಜಗಿ, ಸಹಕಾರ್ಯದರ್ಶಿಯಾಗಿ ಮಲ್ಲಪ್ಪ ಬೊಮ್ಮನಹಳ್ಳಿ , ಖಜಾಂಚಿಯಾಗಿ ಅಮೂಲ ಹರಿಜನ, ಸಂಘಟನಾ ಕಾರ್ಯದರ್ಶಿ ಯಾಗಿ ಕುಮ್ಮಣ್ಣ ಕಂಟೆಪ್ಪಗೋಳ, ಸಂಚಾಲಕರಾಗಿ ಸಂಗಮೇಶ ಮುರಾಳ, ಸದಸ್ಯರು ಗಳಾಗಿ ಮುತ್ತಪ್ಪ ಕೊಂಡಗೂಳಿ, ದೀಪಕ ಹರಿಜನ ಹಾಗೂ ವಿಕಾಸ ಸುಸಲಾದಿ ಈ ಎಲ್ಲಾ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷರಾದ ಭೀಮಪ್ಪ ಲಕ್ಷ್ಮಣ ತಳವಾರ ಅವರು , ಸಂಸ್ಥಾಪಕರಾದ ನರಸಪ್ಪ ಅರ್ಜುನ್ ನಾವಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಬೋಧಿಸಿದರು.
ಈ ಒಂದು ಕಾರ್ಯಕ್ರಮಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಪ್ರಬುದ್ಧಕರ ಕಲಬುರ್ಗಿ ಜಿಲ್ಲೆಯಿಂದ ರಾಜ್ಯ ಖಜಾಂಚಿ ಬಸವರಾಜ ಹೊಳೆದಾಸರ ಮತ್ತು ರಾಜಶೇಖರ ಶಿವನಿಚ್ಚಿ ಬಾಗಲಕೋಟೆಯಿಂದ ಸದಪ್ಪ ಜಡಗನ್ನವರ ಮತ್ತು ಸಲೀಮ ಗೋಕಾಂವಿ ಹಾಗೂ ವಿಜಯಪುರ ಜಿಲ್ಲೆಯ ಸಮಸ್ತ ತಾಲೂಕಾ ಘಟಕದ ಪದಾಧಿಕಾರಿಗಳು ಕೂಡಾ ಬಂದುಭಾಗವಹಿಸಿದ್ದರು.