
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.06: ಇಲ್ಲಿನ ವಿದ್ಯಾನಗರ ವೃತ್ತದಿಂದ ಕೊಳಗಲ್ ಮಾರ್ಗದ ಅರ್ಧ ಕಿಲೋ ಮೀಟರ್ ರ ಸ್ತೆ ಅಗಲೀಕರಣ ಮತ್ತು ಇದರಲ್ಲಿ ಎರೆಡು ಬದಿ ಡ್ರೈನೇಜ್ ನಿರ್ಮಿಸಲು ಅಡ್ಡ ಬರುವ ಮರಗಳನ್ನು ತೆರವುಗೊಳಿಸಲು 27.21 ಲಕ್ಷ ರೂಗಳನ್ನು ಪಾವತಿಸಲು ಅರಣ್ಯ ಇಲಾಖೆ ಕಾಮಗಾರಿ ವಹಿಸಿಕೊಂಡಿರುವ ಎಜೆನ್ಸಿಗೆ ಸೂಚಿಸಿದೆ.ಈ ಬಗ್ಗೆ ಉಪ ಅರಣ್ಯ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಈ ರಸ್ತೆಯಲ್ಲಿನ ಅಂದಾಜು 233 ಮರಗಳು
ಕಾಮಗಾರಿಗೆ ಅಡ್ಡಿ ಬರುತ್ತವೆ ಇವನ್ನು ತೆರವುಗೊಳಿಸಲು ಅನುಮತಿಗೆ ಕೋರಿತ್ತು. ಅನುಮತಿ ದೊರೆಯದ ಮುನ್ನವೇ ಶ್ರೀನಿವಾಸ್ ಇನ್ನಾ ಪ್ರಾಜೆಕ್ಟ್ , ನಗರ ಶಾಸಕರ ಬೆಂಬಲಿಗರ ಸೂಚನೆಯಂತೆ 25 ಗಿಡಗಳನ್ನು ಕಡಿದಿದ್ದರು.
ಈ ಬಗ್ಗೆ ದೂರು ದಾಖಲಿಸಲಾಗಿತ್ತು.
ಈ ಬಗ್ಗೆ ತೆಗೆದುಕೊಂಡ ಕ್ರಮ ಏನು ಎಂದು ಸಾಮಾಜಿಕ ಹೋರಾಟಗಾರ ಸಿದ್ದೇಶ ಊಳುರು ಕೇಳಿದ ಮಾಹಿತಿಗೆ ಉಪ ಅರಣ್ಯ ಅಧಿಕಾರಿ ಡಾ.ಕೆ.ಎನ್.ಬಸವರಾಜ್ . ಮಾಹಿತಿ ನೀಡಿ. ಪ್ರಕರಣದ ವಿಚಾರಣೆ ಮತ್ತು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ವಹಿಸಿದೆ.
ಕಳೆದ ಏ.23ರಂದು ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಮರಗಳನ್ನು ಕಟಾವು ಮಾಡುತ್ತಿರುವುದನ್ನು ಉಪ ವಲಯ ಅರಣ್ಯಾಧಿಕಾರಿ ಸುನಿಲ್ ಕುಮಾರ್ ಆರ್. ಚವ್ಹಾಣ್ ಮತ್ತು ಸಿಬ್ಬಂದಿ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ತಡೆದಿದ್ದರು.ಅಕ್ರಮವಾಗಿ ಕತ್ತರಿಸಿದ್ದ ಸುಮಾರು 4.70 ಟನ್ ತೂಕದ 25 ಮರ, ಕೊಂಬೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಕುರಿತು ಶ್ರೀನಿವಾಸ್ ಇನ್ನಾ ಪ್ರಾಜೆಕ್ಟ್ ಹಾಗೂ ಲೋಕೋಪಯೋಗಿ ಇಲಾಖೆಯ ನಾಲ್ವರ ವಿರುದ್ಧ ಅರಣ್ಯ ಇಲಾಖೆಯಿಂದ ಮೊಕದ್ದಮೆ ದಾಖಲಿಸಲಾಗಿತ್ತು.
ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣಕ್ಕೆ ಅಡ್ಡಿಯಾಗುತ್ತಿರುವ 233 ಮರಗಳಿಗೆ ಸಂಬಂಧಿಸಿದಂತೆ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976ರ ಅನ್ವಯ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಆಕ್ಷೇಪಣೆಗಳ ಪರಿಶೀಲನೆ ಬಳಿಕ 94 ಮರಗಳನ್ನು ನಿಯಮಾನುಸಾರ ಕಟಾವು ಮಾಡಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಶಿಫಾರಸು ಮಾಡಿದ್ದರು.
ಅದರಂತೆ 94 ಮರಗಳ ತೆರವಿಗೆ 27.21 ಲಕ್ಷ ರೂ ಪಾವತಿಸಲು ಸೂಚಿಸಿದೆ. ಇನ್ನು ಅಕ್ರಮವಾಗಿ ಮರ ಕಡಿದವರ ಮೇಲೆ ಕ್ರಮ ಜರುಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.





























