
ಕಲಬುರಗಿ: ಜಿಲ್ಲಾ ಸವಿತಾ ಸಮಾಜ ಹಾಗೂ ನಾವಿ ಕ್ಷೌರಿಕ ಸಂಘದ ವತಿಯಿಂದ ಶ್ರೀಶ್ರೀಶ್ರೀ ಸಂತ ಸೇನಾ ಮಹಾರಾಜರ ೬೫೬ನೇ ಪುಣ್ಯಾರಾಧನಾ ಮಹೋತ್ಸವವನ್ನು ಸೆ.೮ರಂದು ನಗರದ ಜಿಲ್ಲಾ ಕನ್ನಡ ಭವನದ ಮಿನಿ ವಿಧಾನಸಭೆ ಸಮೀಪದ ಆವರಣದಲ್ಲಿ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿAದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕೆಕೆಆರ್ಟಿಸಿ ಮಾಜಿ ಅಧ್ಯಕ್ಷ ಇಲಿಯಾಸ್ ಸೇಠ್ ಬಾಗವಾನ ಉದ್ಘಾಟಿಸಿ ಮಾತನಾಡಿ, ಸಂತ ಸೇನಾ ಮಹಾರಾಜರು ಸೇವೆ, ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶವನ್ನು ಸಮಾಜಕ್ಕೆ ಸಾರಿದ ಮಹಾನ್ ಸಂತರು. ಅವರ ಆದರ್ಶಗಳನ್ನು ಯುವ ಪೀಳಿಗೆ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ ಎಚ್. ಮಾನೆ ವಹಿಸಿದ್ದರು. ಸೋಲಾಪುರದ ನಾಭಿಕ ಮಹಾಮಂಡಳದ ಅಧ್ಯಕ್ಷ ವೈಭವ ಶೇಠ್, ಕಲಬುರಗಿ ಸವಿತಾ ಸಮಾಜದ ಗೌರವಾಧ್ಯಕ್ಷ ಶರಣಬಸಪ್ಪ ಎಂ. ಸೂರ್ಯವಂಶಿ, ಅಧ್ಯಕ್ಷ ಶಂಕರ ಎಸ್. ಕಾಳ್ಳೂರ, ಸರಕಾರಿ ಸವಿತಾ ನೌಕರರ ಸಂಘದ ಕಲಬುರಗಿ ಅಧ್ಯಕ್ಷ ದೇವೇಂದ್ರ ಕುರಿಹಾಳ, ಬೆಂಗಳೂರಿನ ವಿಭಾಗೀಯ ಕಾರ್ಯದರ್ಶಿ ರಾಜಶೇಖರ ಎಂ. ಮಾನೆ, ರಾಜ್ಯ ಉಪಾಧ್ಯಕ್ಷ ನಾಗಪ್ಪ ಗೋಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಉಪನ್ಯಾಸ ನೀಡಿದ ಡಾ. ದತ್ತಾತ್ರೇಯ ಸಿ. ಸೂರ್ಯವಂಶಿ ಅವರು ಸಂತ ಸೇನಾ ಮಹಾರಾಜರ ಜೀವನಾದರ್ಶ, ಕಾಯಕ ನಿಷ್ಠೆ ಹಾಗೂ ಸಮಾಜಮುಖಿ ಚಿಂತನೆ ಕುರಿತು ವಿವರಿಸಿದರು. ಸಂತರು ಸಾರಿದ ಸಮಾನತೆ, ಸೇವೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ನಾಗಪ್ಪ ಗೋಗಿ ಮಾತನಾಡಿ, ಶ್ರೀ ಸಂತ ಸೇನಾ ಮಹಾರಾಜರ ಆರಾಧನೆ ಕೇವಲ ಆಚರಣೆಗೆ ಸೀಮಿತವಾಗದೆ ಭಕ್ತಿಯ ಮಾರ್ಗವಾಗಿ, ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೌರಿಕ ಸೇವಾ ಸಂಘದ ಕಲಬುರಗಿ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಮಾನೆ ಅವರು, ಸಂತ ಸೇನಾ ಮಹಾರಾಜರ ಜೀವನ ಮತ್ತು ಸಂದೇಶಗಳು ಸವಿತಾ ಸಮಾಜಕ್ಕೆ ಸದಾ ಪ್ರೇರಣೆಯಾಗಿವೆ. ಸಮಾಜದ ಸಂಘಟನೆ, ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶರಣು ಸೂರ್ಯವಂಶಿ ನೆರವೇರಿಸಿದರು. ಸಂಗಮೇಶ ಶಾಸ್ತ್ರಿಗಳು ಮಾಶಾಳ ಸೂತ್ರಸಂಚಾಲನೆ ಮಾಡಿದರು. ರಾಜೇಂದ್ರ ಅಷ್ಟಿಗಿಕರ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಂಬರೀಶ್ ಮಂಗಲಗಿ, ಶಾಂತಪ್ಪ ಕಾರಬಾಸಗೆ, ಅಶೋಕ ಎನ್. ಡೈಮಂಡ್, ಗಣೇಶ್ ಚಿನ್ನಾಕಾರ್ ಸುಭಾಷ ಬಾದಮಿ, ನರಸಿಂಗ ಆರ್. ಮೊತಕಪಲ್ಲಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಂತ ಸೇನಾ ಮಹಾರಾಜರ ೬೫೬ನೇ ಪುಣ್ಯಾರಾಧನಾ ಕಾರ್ಯಕ್ರಮದ ಪದಾಧಿಕಾರಿಗಳಾಗಿ ಶರಣಬಸಪ್ಪ ಎನ್. ಸೂರ್ಯವಂಶಿ (ಗೌರವಾಧ್ಯಕ್ಷ), ಅಶೋಕ ಎಚ್. ಮಾನೆ (ಅಧ್ಯಕ್ಷ), ಸೂರ್ಯಕಾಂತ ಮುಗಳಿ, ಶಿವಲಿಂಗಪ್ಪ ಎಸ್. ಅವುಟೆ, ದತ್ತು ಜಾದವ, ವಿಜಯಕುಮಾರ ಜಾದವ, ಸಾಯಬಣ್ಣ ಎಲ್. ವಿಬೂತೆ, ವಿನೋದ (ಗುಂಡು) ಎಸ್. ಮೋರೆ, ಶಿವಕುಮಾರ (ಪಿಂಟು) ಆರ್. ಕಟ್ಟಿಮನಿ, ಹಣಮಂತ ಆರ್. ಕಾಳೆ, ದಶರಥ ಸೂರ್ಯವಂಶಿ ಹಾಗೂ ಸಿದ್ದಾರೋಡ ಪಿ. ಮೋರೆ ಕಾರ್ಯನಿರ್ವಹಿಸಿದರು.
ಸಲಹಾ ಸಮಿತಿಯಲ್ಲಿ ಡಾ. ದತ್ತಾತ್ರೇಯ ಸಿ. ಸೂರ್ಯವಂಶಿ, ದತ್ತಾತ್ರೇಯ ಎಲ್. ವಿಬೂತೆ, ಮಲ್ಲಿಕಾರ್ಜುನ ಮಾನೆ, ರಾಜಶೇಖರ ಎಂ. ಮಾನೆ, ಸಾಯಿಬಣ್ಣ ವಿಬೂತೆ, ರಾಜೇಂದ್ರ ಬಿ. ಮಾನೆ ಹಾಗೂ ಶ್ರೀಪಾದ ವಿಬೂತೆ ಇದ್ದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಹಾಗೂ ಕ್ಷೌರಿಕ ಸಮುದಾಯದ ಮುಖಂಡರು, ಪದಾಧಿಕಾರಿಗಳು, ವಿವಿಧ ಸಂಘ-ಸAಸ್ಥೆಗಳ ಪ್ರತಿನಿಧಿಗಳು ಹಾಗೂ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.























