Home ಜಿಲ್ಲೆ ಬೆಂಗಳೂರು ೫೮ ಎಕರೆ ೬ ಗುಂಟೆ ಸರ್ಕಾರಿ ಜಮೀನು ಪತ್ತೆ

೫೮ ಎಕರೆ ೬ ಗುಂಟೆ ಸರ್ಕಾರಿ ಜಮೀನು ಪತ್ತೆ

ಮಾಲೂರು,ಜು.೨:ಅಗಲಕೋಟೆ ವಿವಾದಿತ ಜಮೀನು ಅಕ್ರಮವಾಗಿದೆ ಎಂದು ಕೆಲವರು ಆರೋಪಿಸಿದ್ದರು.ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮಾಡಿದ ಮನವಿ ಮೇರೆಗೆ ವಿವಾದಿತ ಜಮೀನು ಸರ್ವೆ ಕಾರ್ಯ ನಡೆಸಲು ಜಿಲ್ಲಾಧಿಕಾರಿ ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳನ್ನು ನೇಮಿಸಿ ಆದೇಶಿಸಿದ್ದರು,ಅದರಂತೆ ನಡೆದ ಸರ್ವೆ ಕಾರ್ಯದಲ್ಲಿ ೩೦೯ ಎಕರೆ ೨೧ಗುಂಟೆ ಜಮೀನಿನ ಪೈಕಿ ೫೮ ಎಕರೆ ೬ ಗುಂಟೆ ಸರ್ಕಾರಿ ಜಮೀನು ಪತ್ತೆಯಾಗಿದೆ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.


ನಗರದ ತಾಲೂಕು ಕಚೇರಿಯ ಶಾಸಕರ ಕಚೇರಿಯ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಕಲ್ ಹೋಬಳಿಯ ಅಗಲಕೋಟೆ ವಿವಾದಿತ ಜಮೀನು ಅಕ್ರಮವಾಗಿದೆ ಎಂದು ಚರ್ಚೆಗಳಾಗಿವೆ. ಮಾಜಿ ಶಾಸಕರು ಹಾಗೂ ಸಾರ್ವಜನಿಕರು ಸಹ ಆರೋಪ ಮಾಡಿ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರು. ಈ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಅಂತ್ಯ ಕಾಣಬೇಕು ವಾಸ್ತವಂಶ ತಿಳಿಯಲು ಮಾಹಿತಿಯನ್ನು ಜನರಿಗೆ ತಿಳಿಸಲು ಸರ್ಕಾರ ಹಾಗೂ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಗಲಕೋಟೆಯ ಜಮೀನು ಸರ್ವೆ ಕಾರ್ಯ ನಡೆಸಿ ವರದಿ ನೀಡಲು ಆದೇಶಿಸಿದ್ದರು ಎಂದು ಮಾಹಿತಿ ನೀಡಿದೆ.


ಕಂದಾಯ ಸರ್ವೆ ಇಲಾಖೆ ಅಧಿಕಾರಿಗಳ ತಂಡವು ೨ ದಿನಗಳಿಂದ ವಿವಾದಿತ ಜಮೀನಿನ ಸರ್ವೆ ಕಾರ್ಯ ನಡೆಸಿ ಮಾಹಿತಿ ಸಿದ್ಧಪಡಿಸಿದೆ, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದ್ದಾರೆ. ಈ ಕ್ಷೇತ್ರದ ಶಾಸಕರಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಕರಾಬು ಕಲ್ಲುಕುಂಟೆ ಸರ್ವೆ ನಂಬರ್ ೪೭ರಲ್ಲಿ ೨೪ ಗುಂಟೆ, ಸರ್ವೆ ನಂಬರ್ ೪೪ ರಲ್ಲಿ ಸ್ಮಶಾನ ೨ ಎಕರೆ ೨ ಗುಂಟೆ, ಸರ್ವೇ ನಂಬರ್ ೫೦ರಲ್ಲಿ ಬಂಡಿದಾರಿ ೧೬ ಗುಂಟೆ ೨೦ ಅಡಿ ೭ ಕಾಲು ದಾರಿ, ೮ ಅಡಿಯಂತೆ ಒಟ್ಟು ೫೮ ಎಕರೆ ೬ ಗುಂಟೆ ಸರ್ಕಾರಿ ಜಮೀನು ಬೇರೆ ಬೇರೆ ಉದ್ದೇಶಗಳಿಗೆ ಮೀಸಲಿರಿಸಿದ್ದ ಜಮೀನು ಪತ್ತೆಯಾಗಿದೆ ಎಂದು ಹೇಳಿದರು.


ಇದಲ್ಲದೆ,ಸರ್ವೇ ವರದಿ ಸಲ್ಲಿಸಲಿದ್ದು ಒತ್ತುವರಿಯಾಗಿದ್ದರೆ ಇಲಾಖೆಯ ವಶಕ್ಕೆ ಪಡೆಯಲಾಗುವುದು,ರಸ್ತೆಗಳು ಬಂದ್ ಮಾಡಿದ್ದರೆ ರಸ್ತೆಗಳು ತೆರವುಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು. ಅಗಲಕೋಟೆ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಚಾರವೇ ಆಗಿತ್ತು. ಕೆಲವರು ಪ್ರಚಾರ ಪಡೆದುಕೊಂಡಿದ್ದರು ಇವೆಲ್ಲದ್ದಕ್ಕೆ ತಾರ್ಕಿಕ ಅಂತ್ಯ ಕಂಡಿದೆ. ಗಂಭೀರವಾಗಿ ಕ್ರಮ ವಹಿಸಲು ತಾಲೂಕು ಆಡಳಿತ ಬದ್ಧವಾಗಿದೆ. ಯಾರಿಗೂ ಪ್ರಚಾರ ಬೇಡ ಅಗಲಕೋಟೆ ಜಮೀನಿನ ವಿಚಾರವಾಗಿ ನನಗೂ ಸಹ ಅನುಮಾನ ಇತ್ತು ಅದು ಕೊನೆ ಹಂತಕ್ಕೆ ತಲುಪಿದೆ ಇನ್ನೇನಿದ್ದರೂ ಜಿಲ್ಲಾಧಿಕಾರಿ ವರದಿ ಮೇಲೆ ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.


ಅಗಲಕೋಟೆ ವಿವಾದಿತ ಜಮೀನಿನಲ್ಲಿ ಸರ್ಕಾರಿ ಶಾಲೆ ಎಂಬುದಕ್ಕೆ ದಾಖಲೆಗಳಿಲ್ಲವೆಂದು ಕಂಡು ಬಂದಿದೆ.ಯಾರ ಬಳಿಯಾದರೂ ಸರ್ಕಾರಿ ಶಾಲೆ ಇದೆ ಎಂದು ದಾಖಲೆಗಳಿದ್ದಲ್ಲಿ ಅಧಿಕಾರಿಗಳಿಗೆ ನೀಡಿ ಚಾಲೆಂಜ್ ಮಾಡಿ ಸರ್ಕಾರಿ ಶಾಲೆ ಜಮೀನು, ಉಳಿಸಿ ಎಂದರು.


ಅಕ್ರಮ ಮಾಡಿದವರು ಯಾರೇ ಆಗಿರಲಿ ಅಕ್ರಮ ಮಾಡಿದವರ ಮೇಲೆ ಕಾನೂನು ಕ್ರಮ ಖಚಿತ ನಮ್ಮ ಪಕ್ಷದ ಸರ್ಕಾರ ಮನವಿ ಮೇರೆಗೆ ತಾಲೂಕಿನಲ್ಲಿ ಜಮೀನಿನ ಅಕ್ರಮಗಳು ತನಿಖೆ ನಡೆಸಲು ಸರ್ಕಾರ ಎಸ್‌ಐಟಿ ಸಮಿತಿ ರಚಿಸಲಾಗಿದೆ. ತನಿಖೆಯೂ ಸಹ ನಡೆಯುತ್ತಿದೆ. ವರದಿ ಮೊದಲು ನಾನು ಏನನ್ನು ಮಾತನಾಡುವುದಿಲ್ಲ ವರದಿ ಬಂದ ಮೇಲೆ ಯಾರೇ ಆಗಿರಲಿ ಅಕ್ರಮ ಮಾಡಿಕೊಂಡವರು ಅಕ್ರಮ ದಾಖಲೆಗಳು ಸೃಷ್ಟಿಸಿಕೊಂಡವರು ಮಾಡಿಕೊಟ್ಟವರು ತನಿಖೆಯಲ್ಲಿ ಸಾಬೀತಾದರೆ ಶಿಸ್ತುಕ್ರಮ ವಹಿಸಲಾಗುವುದು, ಇದಕ್ಕೂ ಸಹ ಒಂದು ತಿಂಗಳೊಳಗೆ ಅಂತ್ಯ ಕಾಣಲಿದೆ ಅಂಕಿ ಅಂಶಗಳನ್ನು ನೀಡುವುದಾಗಿ ಹೇಳಿದರು.


ಯೋಜನಾಪ್ರಾಧಿಕಾರ ಅಧ್ಯಕ್ಷ ವಿಜಯನರಸಿಂಹ, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಾಮಮೂರ್ತಿ, ತಾ.ಪಂ. ಮಾಜಿ ಸದಸ್ಯ ರಮೇಶ್‌ಗೌಡ, ಮುಖಂಡ ಕ್ಷೇತ್ರನಹಳ್ಳಿ ವೆಂಕಟೇಶಗೌಡ, ಅಶ್ವಥರೆಡ್ಡಿ, ಆನಂದಕುಮಾರ್, ಜಿಲ್ಲಾ ಮಹಿಳ ಘಟಕದ ಅಧ್ಯಕ್ಷೆ ಹೇಮಮಾಲಿನ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಆರ್.ಶ್ರೀನಿವಾಸ್, ವಾಲ್ಮೀಕಿ ಸಂಘದ ತಿಮ್ಮರಾಯಪ್ಪ ಹಾಜರಿದ್ದರು.