ಕೆಜಿಎಫ್‌ನಲ್ಲಿ ೪೯೮ ಟಿಎಪಿಸಿಎಂಎಸ್ ಮತಗಳು ಡಿಲೀಟ್

ಬೇತಮಂಗಲಆ.೨೪- ಕೆಜಿಎಫ್ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ೪೯೮ ರೈತರ ಮತ ರದ್ದುಗೊಳಿಸಿರುವುದನ್ನು ಖಂಡಿಸಿ ಹಾಗೂ ಬರಪೀಡಿತ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಆರ್ಕೆ ಫೌಂಡೇಶನ್ ಅಧ್ಯಕ್ಷ ಮೋಹನ್ ಕೃಷ್ಣ ನೇತೃತ್ವದಲ್ಲಿ ರೈತ ಮುಖಂಡರ ಸಭೆ ನಡೆಯಿತು.


ಪಟ್ಟಣದ ಅಶ್ವಿನಿ ಕಲ್ಯಾಣ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಸಹಕಾರಿ ರೈತ ಸದಸ್ಯರ ಮತದಾನ ಹಕ್ಕು ರಕ್ಷಣಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಕೆಜಿಎಫ್ ತಾಲೂಕಿನಲ್ಲಿ ರೈತರ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಟಿಎಪಿಸಿಎಂಎಸ್ ನಲ್ಲಿ ೪೯೮ ರೈತರ ಮತಗಳನ್ನು ರದ್ದುಗೊಳಿಸಿದ್ದರೂ ಕ್ಷೇತ್ರದ ಶಾಸಕಿ ರೂಪಕಲಾ ಅವರು ಮೌನ ವಹಿಸಿರುವುದು ಖಂಡನೀಯ ಎಂದರು.


ವಿಧಾನಸೌಧದಲ್ಲೇ ಲಂಚ ಪಡೆದು ಜೈಲಿಗೆ ಹೋಗಿ ಬಂದ ಸಂಪಂಗಿ,ಸಚಿವ ನಾಗೇಂದ್ರ ವಿರುದ್ಧ ಹೋರಾಟ ನಡೆಸಿದರೆ ಹೇಗೆ ಹತ್ತು ವರ್ಷಗಳ ಕಾಲ ಅವರು ಹಾಗೂ ತಾಯಿಯವರು ಶಾಸಕರಾಗಿದ್ದವರು.ರೈತರ ಹಿತ ಕಾಪಾಡದೇ ಕೇವಲ ಅಧಿಕಾರದ ದಾಹದಿಂದ ಮತದಾರರನ್ನು ಅನರ್ಹಗೊಳಿಸಿ ಅವರು ಹಾಗೂ ಪುತ್ರ, ಪುತ್ರಿ ಪತ್ನಿ, ತಾಯಿಯವರು ಮಾತ್ರ ಮತದಾನಕ್ಕೆ ಅರ್ಹರಾಗಿದ್ದಾರೆಯೇ ಎಂದು ಗುಡುಗಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಒಪ್ಪಂದ ಮಾಡಿಕೊಂಡು ಭ್ರಷ್ಟಾಚಾರ ಹಾಗೂ ರೈತರ ಜೀವನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.೨೫ ಎಕರೆ ಪ್ರದೇಶದಲ್ಲಿ ಬೃಹತ್ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ಇದುವರೆಗೂ ೧೦ ಬಾರಿ ಪೂಜೆಯನ್ನು ಸಲ್ಲಿಸಿದ್ದಾರೆ ಎಂದರು.


ಈ ಎಪಿಎಂಸಿ ಮಾರುಕಟ್ಟೆ ಸಮಿತಿಯಲ್ಲಿ ಕೇವಲ ಬಲಾಡ್ಯರು ಪ್ರಭಾವಿಗಳು ನಿರ್ದೇಶಕರಾಗಿದ್ದಾರೆ. ಸಾಮಾನ್ಯ ರೈತರು ಒಬ್ಬರು ಸಹ ನಿರ್ದೇಶಕರಾಗಿಲ್ಲ, ಮೊದಲು ಮಾಜಿ ಶಾಸಕ ವೈಸಂಪಂಗಿಯವರು ಈ ಎಪಿಎಂಸಿ ಮಾರುಕಟ್ಟೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದವರು ತದನಂತರ ಏಕೆ ಈ ಬಗ್ಗೆ ತಕಾರಯತ್ತಿಲ್ಲ ಎಂದು ಪ್ರಶ್ನಿಸಿದರು.


ಎಸ್‌ಐಆರ್ ಬಗ್ಗೆ ಮನೆಮನೆಗೂ ಬಿಜೆಪಿಯ ಕಾಂಗ್ರೆಸ್ ನಾಯಕರು ಅರಿವು ಮೂಡಿಸುತ್ತಾ ಹೋಗಿದ್ದರು ಅದೇ ರೀತಿ ಟಿಎಪಿಎಂಸಿಎಸ್ ನಿರ್ದೇಶಕರ ಸಂಘದಲ್ಲಿ ಇರುವ ರೈತರಿಗೆ ಮತದಾನ ಹಕ್ಕು ಕಾಯ್ದೆ ಬಗ್ಗೆ ಏಕೆ ಅರಿವು ಮೂಡಿಸಿಲ್ಲ ಏಕಾಏಕಿ ನೀವು ಅನರ್ಹ ಮತದಾರರು ಎಂದು ಪೋಸ್ಟಲ್ ನೋಟಿಸ್ ನೀಡಲು ಕಾರಣ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.


ರದ್ದು ಮಾಡಲಾದ ರೈತರ ಮತಗಳನ್ನು ತಕ್ಷಣವೇ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ, ರೈತರೊಂದಿಗೆ ಸೇರಿ ಟಿಎಪಿಸಿಎಂಎಸ್ ಕಚೇರಿಗೆ ಮುತ್ತಿಗೆ ಹಾಕಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.ಸಭೆಯಲ್ಲಿ ವಿವಿಧ ರೈತ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.


ಮಾಜಿ ಸಂಸದ ಮುನಿಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ನಾಯಕರು ರೈತರ ಹಕ್ಕುಗಳನ್ನು ರಕ್ಷಿಸಲು ತಕ್ಷಣವೇ ಸ್ಪಂದಿಸಬೇಕೆಂದು ಕೋರಿದರು.