Home ಜಿಲ್ಲೆ ಯಾದಗಿರಿಯಲ್ಲಿ ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಯಾದಗಿರಿಯಲ್ಲಿ ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಯಾದಗಿರಿ: ಯಾದಗಿರಿ ವಲಯ ಛಾಯಾಗ್ರಾಹಕರ ಸಂಘದ ವತಿಯಿಂದ ಸೆ.೨೦ರಂದು ನಗರದ ಪತ್ರಿಕಾ ಭವನದಲ್ಲಿ ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಯಾದಗಿರಿ ಮತಕ್ಷೇತ್ರದ ಮಹೇಶ್ ರೆಡ್ಡಿ ಮುದ್ನಾಳ್ ಅವರು ಭಾಗವಹಿಸಿ ಛಾಯಾಗ್ರಾಹಕರೊಂದಿಗೆ ನಾವಿದ್ದೇವೆ. ಛಾಯಾಗ್ರಾಹಕರಿಗೆ ಸರ್ಕಾರದ ವಿವಿಧ ಯೋಜನೆಗಳು ಸಕಾಲದಲ್ಲಿ ತಲುಪುವಂತೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಯಾದಗಿರಿ ವಲಯ ಛಾಯಾಗ್ರಾಹಕರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು:

  • ಗೌರವಾಧ್ಯಕ್ಷರು: ಶ್ರೀ ಸುಭಾಷ್ ಚಂದ್ರ ನಾಲ್ವರ್
  • ಅಧ್ಯಕ್ಷರು: ಶ್ರೀ ಬಸುಗೌಡ ಸೈದಾಪುರ
  • ಉಪಾಧ್ಯಕ್ಷರು: ಮಸ್ತಪ್ಪ ಬಬಲಾದಿ, ಪರಶುರಾಮ್ ಕುರುಕುಂದ
  • ಪ್ರಧಾನ ಕಾರ್ಯದರ್ಶಿ: ವೀರೇಶ್ ಹೂಗಾರ್
  • ಸಹ ಕಾರ್ಯದರ್ಶಿ: ಶ್ರೀನಿವಾಸ್ ತೋರಣದಿಪ್ಪ
  • ಖಜಾಂಚಿ: ಶ್ರೀಕಾಂತ್ ಜೋಗಿ
  • ಸಂಘಟನಾ ಕಾರ್ಯದರ್ಶಿಗಳು: ಅಮಂತಪ್ಪ ಕಟಿಗಿ (ಶಹಾಪುರ), ರಾಘವೇಂದ್ರ ಖಾನಾಪುರ, ಸಂತೋಷ್ ವಡಗೇರಾ, ಶರಣು ಚಟ್ನಳ್ಳಿ
    ಇದೇ ಸಂದರ್ಭದಲ್ಲಿ ಕೆಪಿಎ ವತಿಯಿಂದ ಆಸರೆ ಯೋಜನೆಯ ಗುರುತಿನ ಚೀಟಿಗಳು ಹಾಗೂ ಬಾಂಡ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಛಾಯಾಗ್ರಾಹಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.