
ಅಥಣಿ : ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರ್ಡುಗಳ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಪುರಸಭೆ ಬದ್ಧವಾಗಿದೆ.17ನೇ ವಾರ್ಡಿನಲ್ಲಿ ಬರುವ ಎಪಿಎಂಸಿ ಗವಿಸಿದ್ದಮಡ್ಡಿ ರಸ್ತೆ ಹದಗೆಟ್ಟಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ಪುರಸಭೆಯ 10 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಕೈಗೊಳ್ಳಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಹೇಳಿದರು
ಪಟ್ಟಣದ ಎಪಿಎಂಸಿ 17ನೇ ವಾರ್ಡಿನಲ್ಲಿ ಪುರಸಭೆಯ ಅನುದಾನದಡಿ 10 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಮಾತನಾಡಿ, ಅಥಣಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪುರಸಭೆ ನಿರಂತರವಾಗಿ ಶ್ರಮಿಸುತ್ತಿದೆ. ಈ ವಾರ್ಡ ಜನರ ಬಹುದಿನಗಳ ಬೇಡಿಕೆ ಈಡೇರಿದ್ದು, ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು. ವಾರ್ಡನ ಇತರ ಸಮಸ್ಯೆಗಳನ್ನು ಕೂಡ ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಂಚ್ಚಿ. ಮಾಜಿ ಅದ್ಯಕ್ಷ ದಿಲೀಪ ಲೋಣಾರೆ, ಸದಸ್ಯರಾದ ಮೃಣಾಲಿನಿ ದೇಶಪಾಂಡೆ, ವಿದ್ಯಾ ಹಳದಮಳ್ಳ, ಮಲ್ಲಿಕಾರ್ಜುನ ಬುಟಾಳಿ, ಕಲ್ಲೇಶ ಮಡ್ಡಿ, ಪ್ರಮೋದ ಬಿಳ್ಳೂರ, ಉದಯ ಸೋಳಸಿ. ಬಸು ನಾಯಿಕ. ರಿಯಾಜ ಸನದಿ. ಬಸವರಾಜ ಪಾಟೀಲ. ರಮೇಶ ಪವಾರ, ಮುಖಂಡರಾದ ಬಸವರಾಜ ಹಳದಮಳ್ಳ. ರಾಜು ಬುಲಬುಲೆ, ತಿಪ್ಪಣ್ಣ ಭಜಂತ್ರಿ, ರವಿ ಬಡಕಂಬಿ, ವಿಶ್ವನಾಥ ಗಡದೆ. ಬೀರಪ್ಪ ಯಂಕಂಚ್ಚಿ. ಗುತ್ತಿಗೆದಾರ ಚೇತನ ಪರಾಂಜಪೆ ಸೇರಿದಂತೆ ಸ್ಥಳೀಯ ಮುಖಂಡರು, ವಾರ್ಡನ ನಾಗರಿಕರು ಉಪಸ್ಥಿತರಿದ್ದರು.






















