
ಲಕ್ಷ್ಮೇಶ್ವರ,ಅ.೧೯: ನೂರಾರು ವರ್ಷಗಳ ಧಾರ್ಮಿಕ, ಸಾಂಪ್ರಾಯಿಕ ಇತಿಹಾಸ-ಪರಂಪರೆ ಹೊಂದಿರುವ ಪಟ್ಟಣದ ಶ್ರೀ ಲಿಂಬಯ್ಯಸ್ವಾಮಿಮಠದಲ್ಲಿ ಪ್ರತಿವರ್ಷದಂತೆ ವಿಜಯದಶಮಿಯಂದು ಸಾಂಪ್ರದಾಯಿಕವಾಗಿ ನಡೆದು ಬಂದ ನಂದಾ ದೀಪಾರಾಧನೆ ಮತ್ತು ಸನ್ಮಾನ ಸಮಾರಂಭ ಅ. ೨೦ರಂದು ಸಂಜೆ ೭ಕ್ಕೆ ಪಟ್ಟಣದ ಅಂಬಯ್ಯಸ್ವಾಮಿ ಮಠದ ಆವರಣದಲ್ಲಿ ನಡೆಯಲಿದೆ ಎಂದು ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಹೇಳಿದರು.
ಈ ಕುರಿತು ಭಾನುವಾರ ಶ್ರೀಮಠದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕರು, ಸುಪ್ತ ಚೇತನ ಸಾಧಕರನ್ನು ಗುರುತಿಸಿ ಗೌರವಿಸುವ ಅಂಬಯ್ಯಸ್ವಾಮಿ ಪ್ರತಿಭಾ ಪ್ರತಿ?Á್ಠನವು ೨ ದಶಕಗಳಿಂದ ನಂದಾದೀಪಾರಾಧನಾ ಮಹೋತ್ಸವದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಮೂವರು ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿದೆ.
ಅವರಲ್ಲಿ ಲಕ್ಷ್ಮೇಶ್ವರದ ಹಿರಿಯ ಚೇತನ ನಿರ್ಮಲಾದೇವಿ ಬಸಣ್ಣ ಹತ್ತಿಕಾಳ ಅವರ ಧಾರ್ಮಿಕ ಮತ್ತು ಸಮಾಜ ಸೇವೆ ಪರಿಗಣಿಸಿ ಅವರಿಗೆ ಆದರ್ಶ ಶಿವಶರಣೆ' ಗೌರವ ಪುರಸ್ಕಾರ ಮಾಡಲಾಗುತ್ತಿದೆ. ಹಂದಿಗನೂರಿನ ರಾಜೇಶ್ವರಿ ವಿ. ಪಾಟೀಲ ಅವರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಪ್ರೇರಣೆಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಕೃಷಿ ಮಹಿಳೆ’ ಗೌರವ ನೀಡಿ ಸನ್ಮಾನಿಸಲಾಗುವುದು. ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಪ್ರಾಧ್ಯಾಪಕಿ ಡಾ. ಉ?Áದೇವಿ ಉ. ಹಿರೇಮಠ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಅವರಿಗೆ `ಶಿಕ್ಷಣ ಸಿರಿ’ ಗೌರವ ನೀಡಲಾಗುತ್ತಿದೆ ಅಲ್ಲದೇ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷ ಜಯದೇವ ಎಂ. ಮೆಣಸಗಿ ಅವರನ್ನು ಸನ್ಮಾನಿಸಲಾಗುತ್ತಿದೆ.
ಶಿರಹಟ್ಟಿ-ಬಾಲೆಹೊಸೂರು ಭಾವೈಕ್ಯತಾ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶ್ರೀ ತಾ.ಪಾ.ಮ.ಬ. ಲಕ್ಷ್ಮೇಶ್ವರದ ಕಾರ್ಯದರ್ಶಿ ಜಯಲಕ್ಷ್ಮೀ ಜಿ. ಗಡ್ಡದೇವರಮಠ ಅಧ್ಯಕ್ಷತೆ ವಹಿಸುವರು. ಅಧ್ಯಾತ್ಮ ಚಿಂತಕ ಚಂದ್ರಶೇಖರ ಎಸ್. ಮಹಾಜನಶೆಟ್ಟರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹರ್ಲಾಪುರದ ಸಾಂಬಯ್ಯ ಹಿರೇಮಠ ಹಾಗೂ ಸಂಗಡಿಗರಿAದ ಜಾನಪದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯ ಪ್ರತಿಭೆಗಳನ್ನು ಸನ್ಮಾನಿಸಲಾಗುವುದು.ಈ ವೇಳೆ ನೇತ್ರದಾನ ಮತ್ತು ದೇಹದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುವುದು. ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಬಸವರಾಜ ಬೆಂಡಿಗೇರಿ, ವಿರೂಪಾಕ್ಷಪ್ಪ ಪಡಗೇರಿ, ಬಸಣ್ಣ ಗಾಂಜಿ, ರಾಜೀವ ಕುಂಬಿ, ಚಿದಾನಂದ ಲಿಂಬಯ್ಯಸ್ವಾಮಿಮಠ, ನಿರಂಜನ ಲಿಂಬಯ್ಯಸ್ವಾಮಿಮಠ, ಮಹೇಶ ಲಿಂಬಯ್ಯಸ್ವಾಮಿಮಠ, ಎಂ.ಕೆ. ಕಳ್ಳಿಮಠ, ಪ್ರವೀಣ ಬಾಳಿಕಾಯಿ, ನಿಂಗಪ್ಪ ಬನ್ನಿ, ಈರಣ್ಣ ಅಂಕಲಕೋಟಿ, ಸಾಹೇಬಜಾನ ಹವಾಲ್ದಾರ, ಶರಣಪ್ಪ ಗುಳಗಣ್ಣನವರ, ಶಾಂತಣ್ಣ ಓದುನವರ, ರಾಮಣ್ಣ ಪಡಗೇರಿ, ನೀಲಪ್ಪ ಪೂಜಾರ, ಗಂಗಪ್ಪ ದುರಗಣ್ಣವರ ಸೇರಿದಂತೆ ಹಲವರಿದ್ದರು.























