Home ಜಿಲ್ಲೆ ಬೆಂಗಳೂರು ಬಾಂಧವ ಕಪ್-೨೦೨೬ವಾಲಿಬಾಲ್ ಪಂದ್ಯಾವಳಿ ಆಯೋಜನೆ

ಬಾಂಧವ ಕಪ್-೨೦೨೬ವಾಲಿಬಾಲ್ ಪಂದ್ಯಾವಳಿ ಆಯೋಜನೆ

ಬೆಂಗಳೂರು.ಮೇ೧೬:ಜಯನಗರ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಮತ್ತು ಬಾಂಧವ ಸಾಮಾಜಿಕ ಸೇವಾ ಸಂಘಟನೆ ಸಹಯೋಗದಲ್ಲಿ ಬಾಂಧವ ಕಪ್-೨೦೨೬ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದ್ದರು.

ಜಯನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎನ್.ನಾಗರಾಜುರವರು, ಡಿ.ಸಿ.ಪಿ.ವಂಶಿಕೃಷ್ಣರವರು , ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕಷರಾದ ಹರ್ಷ ಮತ್ತು ಭರತ್, ಉಮೇಶ್ ರವರು ಉದ್ಘಾಟನೆ ಮಾಡಿದರು.
ಎನ್.ನಾಗರಾಜು ಅವರು ಮಾತನಾಡಿ ವಾಲಿಬಾಲ್ ಪಂದ್ಯಾವಳಿ ಪುರುಷ ಮತ್ತು ಮಹಿಳೆಯರ ೧೫ತಂಡಗಳು ಮೂರು ದಿನಗಳ ಸೆಣಸಲಿದೆ ಅಂತಿಮ ಪಂದ್ಯವನ್ನು ಭಾನುವಾರ ನಡೆಯಲಿದೆ.ಬಾಂಧವ ಸಾಮಾಜಿಕ ಸೇವ ಸಂಘಟನೆ ಶಿಕ್ಷಣ, ಆರೋಗ್ಯ ಮತ್ತು ಕ್ರೀಡೆ, ಪರಿಸರ ಕುರಿತು ಪ್ರೋತ್ಸಾಹ ಸಹಕಾರ ನೀಡುತ್ತಿದೆ.

ಕ್ರೀಡೆಗಳು ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕು ನಮ್ಮ ಕ್ರೀಡಾ ಪ್ರತಿಭೆಗಳು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು ಎಂಬ ಉದ್ದೇಶ ನಮ್ಮದು ಎಂದು ಹೇಳಿದರು.