Home ಜಿಲ್ಲೆ ಬೆಂಗಳೂರು ಚಿನ್ನ ಆಮದು ಕಠಿಣ ನಿಯಮ: ಶರವಣ ಸ್ವಾಗತ

ಚಿನ್ನ ಆಮದು ಕಠಿಣ ನಿಯಮ: ಶರವಣ ಸ್ವಾಗತ

ಬೆಂಗಳೂರು:ಮೇ.೧೬-ತೆರಿಗೆ ರಹಿತ ಚಿನ್ನದ ಆಮದು ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ, ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ರಾಜ್ಯದ್ಯಕ್ಷರಾದ ಟಿ.ಎ.ಶರವಣ ಸ್ವಾಗತಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಯುದ್ಧಗಳ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಡೆಯಲು ಕೇಂದ್ರವು ಹಲವು ನಿಯಮಗಳನ್ನು ಘೋಷಿಸಿದೆ ಇದರಿಂದ ದೇಶದ ಆರ್ಥಿಕತೆಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಒಂದು ಲೈಸೆನ್ಸ್‌ಗೆ ಗರಿಷ್ಠ ೧೦೦ ಕೆ.ಜಿ ಚಿನ್ನ ಮಾತ್ರ ಆಮದು ಮಾಡಲು ಅನುಮತಿ ನೀಡಲಾಗುವುದು. ಆಭರಣ ರಫ್ತು ಮಾಡುವ ಕಂಪನಿಗಳಿಗೆ ಹೊಸ ನಿಯಮ ಅನ್ವಯವಾಗಲಿದೆ.

ಲೈಸೆನ್ಸ್ ಪಡೆಯುವ ಕಂಪನಿಗಳ ಕಾರ್ಖಾನೆಗಳನ್ನು ಅಧಿಕಾರಿಗಳು ಭೌತಿಕವಾಗಿ ಪರಿಶೀಲಿಸಲಿಸಿ, ಉತ್ಪಾದನಾ ಸಾಮರ್ಥ್ಯ ಮತ್ತು ನಿಜವಾದ ಕಾರ್ಯಾಚರಣೆ ಖಚಿತಪಡಿಸಿಕೊಂಡ ಬಳಿಕವಷ್ಟೆ ಅನುಮತಿ ನೀಡಲಾಗುವುದು.
ಲೈಸೆನ್ಸ್ ಪಡೆದ ಕಂಪನಿಗಳು ಪ್ರತೀ ೧೫ ದಿನಕ್ಕೊಮ್ಮೆ ಚಿನ್ನ ಆಮದು ಮತ್ತು ರಫ್ತು ವಿವರಗಳ ವರದಿ ಸಲ್ಲಿಸಲು ಸೂಚನೆ ನೀಡಲಾಗುವುದು.
ಹಿಂದಿನ ರಫ್ತು ಗುರಿಯ ಕನಿಷ್ಠ ಶೇ. ೫೦ ಮಾರಾಟ ಪೂರ್ಣಗೊಳಿಸಿದ ಕಂಪನಿಗಳಿಗೆ ಮಾತ್ರ ಹೊಸ ಖರೀದಿಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ಹೇಳಿದೆ ಎಂದು ತಿಳಿಸಿದ್ದಾರೆ.