
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.28: ನಗರದ ಜಿಲ್ಲಾ ಹಾಕಿ ಕ್ರೀಡಾಂಗಣದಲ್ಲಿ ಕಳೆದ ಐದು ದಿನಗಳಿಂದ ನಡೆದ ರಾಜ್ಯ ಮಟ್ಟದ 16 ವರ್ಷದೊಳಗಿನ ಪುರುಷರ ಸಬ್ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಧಾರವಾಡ ತಂಡ ಚಾಂಪಿಯನ್ನಾಗಿದೆ.
ಇಂದು ಬೆಳಿಗ್ಗೆ ನಡೆದ ಪೈನಲ್ ಪಂದ್ಯಾದಲ್ಲಿ ಎದುರಾಳಿ ಹಾವೇರಿ ತಂಡವನ್ನು ಧಾರವಾಡ ತಂಡ 4-2 ಗೋಲ್ ಗಳ ಅಂತರದಿಂದ ಸೋಲಿಸಿತು.
ಕರ್ನಾಟಕ ಹಾಕಿ ಅಸೋಸಿಯೇಷನ್ ಸಹಕಾರದಿಂದ ಬಳ್ಳಾರಿ ಜಿಲ್ಲಾ ಹಾಕಿ ಅಸೋಸಿಯೇಷನ್ ಈ ಟೂರ್ನಮೆಂಟ್ ಆಯೋಜಿಸಿತ್ತು.
ಲೀಗ್ ಹಂತದಿಂದಲೇ ತಾನು ಆಡಿದ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸುತ್ತ ಬಂದಿದ್ದ ಧಾರವಾಡ ಪೈನಲ್ ನಲ್ಲಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ನಾಗಿದೆ.
ಫಲಿತಾಂಶ:
ಪಂದ್ಯ ಆರಂಭಗೊಂಡ ಮೊದಲ ಕ್ವಾರ್ಟರ್ ನ 7 ನೇ ನಿಮಿಷದಲ್ಲಿ ಧಾರವಾಡ ತಂಡದ ಪ್ರತೀಕ್ ಮೊದಲ ಗೋಲ್ ಬಾರಿಸಿ ತಂಡದ ಗೆಲುವಿನಹಾದಿ ಹಾಕಿಕೊಟ್ಟರು. ಎದುರಾಳಿ ತಂಡ ಹಾವೇರಿ ಈ ಅವಧಿಯಲ್ಲಿ ನಡೆಸಿದ ಗೋಲ್ ಹೊಡೆಯುವ ಪ್ರಯತ್ನಗಳೆಲ್ಲ ವಿಫಲವಾದವು.
ಎರಡನೇ ಕ್ವಾರ್ಟರ್ ನ ಆರಂಭದಲ್ಲಿ ಅಂದರೆ 17 ನೇ ನಿಮಿಷದಲ್ಲಿ ಹಾವೇರಿ ತಂಡದ ಅಭಯ್ ಗೋಲು ಬಾರಿಸುವ ಮೂಲಕ ತಂಡದಲ್ಲಿ ಉತ್ಸಾಹವನ್ನು ಹೆಚ್ಚಿಸಿದರು.
ಮೂರನೇ ಕ್ವಾರ್ಟರ್ ನಲ್ಲಿ ಎರೆಡೂ ತಂಡಗಳು ಸಮಬಲವಾಗಿ ಆಡಿದರು ಧಾರವಾಡದ ತಂಡದ ಯಾವುದೇ ಗೋಲ್ ಬರಲಿಲ್ಲ. ಸಮಬಲದಲ್ಲಿದ್ದ ಆದರ್ಶ 38 ನೇ ನಿಮಿಷದಲ್ಲಿ
ಗೋಲ್ ಬಾರಿಸಿ ತಂಡವನ್ನು 2-1 ಗೋಲ್ ಗಳಿಂದ ಮುಂದೆ ಸಾಗುವಂತೆ ಮಾಡಿದ್ದರು.
ನಾಲ್ಕನೇ ಕ್ವಾರ್ಟರ್ ನಿರ್ಣಾಯಕವಾಗಿತ್ತು. 48 ನೇ ನಿಮಿಷದಲ್ಲಿ ಮಹದೇವಪ್ಪ ಮತ್ತು 49 ನೇ ನಿಮಿಷದಲ್ಲಿ ಹರ್ಷ ಅವರು ಧಾರವಾಡದ ಪರ ಗೋಲ್ ಹೊಡೆದರು ಇದರಿಂದಾಗಿ ನಾಲ್ಕು ಗೋಲುಗಳ ಮೂಲಕ ಧಾರವಾಡ ತಂಡದಲ್ಲಿ ಗೆಲುವಿನನಗೆ ಮೂಡಿತ್ತು.
ಆದರೂ ಎದೆಗುಂದದೆ ಹಾವೇರಿ ತಂಡ ಆಟದ ಕೃತನ್ 51 ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡವನ್ನು ಗೆಲುವಿನ ಆಸೆ ಮೂಡಿಸಿದರಾದರೂ. ಆಟ ಮುಗಿಯುವ ವೇಳೆಗೆ ಯಾವುದೇ ಗೋಲ್ ಬಾರದೆ ಅಂತಿಮವಾಗಿ ಧಾರವಾಡ ತಂಡ 4- 2 ಗೋಲ್ ಗಳಿಂದ 2026 ರ ಚಾಂಪಿಯನ್ ಆಯ್ತು.
ರಾಜ್ಯದ ಗದಗ, ಕಲ್ಬುರ್ಗಿ, ಬಳ್ಳಾರಿ, ಹಾವೇರಿ, ದಾವಣಗೇರಿ, ಬಾಗಲಕೋಟೆ, ಧಾರವಾಡ, ರಾಯಚೂರು, ಮೈಸೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಸೇರಿದಂತೆ ಒಟ್ಟು 12 ತಂಡಗಳು ಭಾಗವಹಿಸಿದ್ದವು.



























