Home ಜಿಲ್ಲೆ ಬೆಂಗಳೂರು ವಿಕಲಚೇತನರು, ಹಿರಿಯ ನಾಗರಿಕರಿಗೆ ಸುಧಾರಿತ ಚಲನವಲನ ಪುನರ್ವಸತಿ ಸೌಲಭ್ಯ

ವಿಕಲಚೇತನರು, ಹಿರಿಯ ನಾಗರಿಕರಿಗೆ ಸುಧಾರಿತ ಚಲನವಲನ ಪುನರ್ವಸತಿ ಸೌಲಭ್ಯ

ಬೆಂಗಳೂರು.ಅ.15: ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ಪುನರ್ವಸತಿ ಅಗತ್ಯವಿರುವವರಿಗೆ ಅತ್ಯಾಧುನಿಕ ಚಲನವಲನ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ, ಬೆಂಗಳೂರಿನ ಆಸ್ಟ್ರಿಚ್ ಮೊಬಿಲಿಟಿ ಇನ್‍ಸ್ಟ್ರುಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅಮೆರಿಕದ ಪ್ರೈಡ್ ಮೊಬಿಲಿಟಿ ಪ್ರಾಡಕ್ಟ್ಸ್ ಕಾಪೆರ್Çರೇಷನ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿವೆ.


ಬೆಂಗಳೂರಿನ ಪೆÇೀಸ್ಪೋಲ್ ಎಕೋಸಿಸ್ಟಮ್‍ನಲ್ಲಿ ಈ ಮಹತ್ವದ ಪಾಲುದಾರಿಕೆಯನ್ನು ಘೋಷಿಸಲಾಗಿದ್ದು, ಭಾರತದಲ್ಲಿ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಬಹುದಾದ ಸುಧಾರಿತ ಚಲನವಲನ ಸಾಧನಗಳನ್ನು ಹೆಚ್ಚು ಜನರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.
ಈ ಪಾಲುದಾರಿಕೆಯ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿದ್ಯುತ್ ಚಾಲಿತ ಗಾಲಿಕುರ್ಚಿಗಳು, ವಿಶೇಷ ಆಸನ ವ್ಯವಸ್ಥೆಗಳು ಹಾಗೂ ದೇಹದ ಭಂಗಿಯನ್ನು ಸರಿಯಾಗಿ ಕಾಪಾಡಿಕೊಳ್ಳಲು ನೆರವಾಗುವ ಪುನರ್ವಸತಿ ಪರಿಹಾರಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಈ ಸೌಲಭ್ಯಗಳು ಆಸ್ಪತ್ರೆಗಳು, ಪುನರ್ವಸತಿ ಕೇಂದ್ರಗಳು ಹಾಗೂ ವಿಶೇಷ ಚಲನವಲನ ನೆರವು ಅಗತ್ಯವಿರುವವರಿಗೆ ಪ್ರಯೋಜನಕಾರಿಯಾಗಲಿವೆ.


ಆಸ್ಟ್ರಿಚ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಣುಕೃಷ್ಣನ್ ಉನ್ನಿಕೃಷ್ಣನ್ ಮಾತನಾಡಿ, ಕಳೆದ 19 ವರ್ಷಗಳಿಂದ ಭಾರತೀಯ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಚಲನವಲನ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಪ್ರೈಡ್ ಮೊಬಿಲಿಟಿಯ ಜಾಗತಿಕ ತಂತ್ರಜ್ಞಾನ ಮತ್ತು ನಮ್ಮ ಸ್ಥಳೀಯ ಪರಿಣತಿಯ ಸಂಯೋಜನೆಯಿಂದ ಬಳಕೆದಾರರಿಗೆ ಸುಧಾರಿತ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಲಿದೆ. ಇದರಿಂದ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸ್ವಾವಲಂಬನೆಯಿಂದ, ಆರಾಮವಾಗಿ ಹಾಗೂ ಗೌರವಯುತವಾಗಿ ಬದುಕಲು ನೆರವಾಗಲಿದೆ'' ಎಂದರು. ಪ್ರೈಡ್ ಮೊಬಿಲಿಟಿ ಪ್ರಾಡಕ್ಟ್ಸ್ ಕಾಪೆರ್Çರೇಷನ್‍ನ ಅಂತರರಾಷ್ಟ್ರೀಯ ಮಾರಾಟ ವಿಭಾಗದ ನಿರ್ದೇಶಕ ಸೆಬಾಸ್ಟಿಯನ್ ಲಾಕೋಸ್ಟ್ ಮಾತನಾಡಿ, ಚಲನವಲನವು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವುದಕ್ಕೆ ಸೀಮಿತವಲ್ಲ.


ಅದು ಸ್ವಾತಂತ್ರ್ಯ, ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ಮತ್ತು ಗೌರವಯುತ ಜೀವನಕ್ಕೆ ಸಂಬಂಧಿಸಿದೆ. ಆಸ್ಟ್ರಿಚ್ ಮೊಬಿಲಿಟಿಯ ಸಹಯೋಗದೊಂದಿಗೆ ಸುಧಾರಿತ ಪುನರ್ವಸತಿ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಲು ಸಂತೋಷವಾಗುತ್ತಿದೆ” ಎಂದು ತಿಳಿಸಿದರು.
ಹೆಲ್ತ್‍ಕೇರ್ ಗ್ಲೋಬಲ್ ಎಂಟರ್‍ಪ್ರೈಸಸ್ ಲಿಮಿಟೆಡ್‍ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಬಿ.ಎಸ್. ಅಜೈಕುಮಾರ್ ಅವರು, ವಿಶೇಷ ಅಗತ್ಯಗಳಿರುವವರು ಮತ್ತು ಹಿರಿಯ ನಾಗರಿಕರು ಸ್ವಾವಲಂಬನೆಯಿಂದ ಬದುಕಲು ಜಾಗತಿಕ ತಂತ್ರಜ್ಞಾನ ಹಾಗೂ ಸ್ಥಳೀಯ ಸೇವೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.