Home ಜಿಲ್ಲೆ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಸಚಿವ ಸಂಪುಟ ಅನುಮತಿ

ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಸಚಿವ ಸಂಪುಟ ಅನುಮತಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಸೆ.04: ನಗರದ  ಎಸ್ಪಿ ಬಂಗಲೆ ಬಳಿಯ ಮಗರ್ಷಿ ವಾಲ್ಮೀಕಿ ವೃತ್ತದ ಮಧ್ಯದಲ್ಲಿ  ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ನಿನ್ನೆ ನಡೆದ

ರಾಜ್ಯ ಸಚಿವ ಸಂಪುಟದಲ್ಲಿ ಅನುನತಿ ನೀಡಿದೆ,

ಕಳೆದ ಜನವರಿ 3 ರಂದೇ ಈ ಪುತ್ಥಳಿ ಅನಾವರಣಕ್ಜೆ ಸಮಾರಂಭ ನಿಗಧಿಯಾಗಿತ್ತು. ಆದರೆ ಬ್೬ಅನರ್ ಕಟ್ಟುವ ವಿಚಾರದಲ್ಲಿ ಗಲಾಟೆ ಯಾಗಿ ನಡೆದ ಪೈರಿಂಗ್ ನಲ್ಲಿ ಓರ್ವ ಸಾವನ್ನಪ್ಪಿದ್ದರಿಂದ ಸಮಾರಂಭ ಮುಂದೂಡಲಾಗಿತ್ತು.

ಅಂದು ಸಂಪುಟದ ಅನುಮತಿಇಲ್ಲದೇ ಅನಾವರಣಕ್ಕೆ ಮುಂದಾಗಿದ್ದರ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದರಿಂದ ಈಗ ಅನುಮತಿ ನೀಡಲಾಗಿದೆ.

ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ರಾಜ್ಯ ಸರ್ಕಾರ ಬರ ನಿರ್ವಯಣೆಯಲ್ಲಿನ ವಿಪಂಲತೆ ಸೇರಿದಂತೆ ರಾಜ್ಯ ಸರಗಕಾರದ ವಿರುದ್  ಬಿಜೆಪಿ ಕೈಗೊಂಡಿರುವ ಪಾದಯಾತ್ರೆ ಸೆ.10 ರಂದು ಬಳ್ಳಾರಿಗೆ  ಬಂದು ತಲುಪಿ ಬೃಹತ್ ಸನಾರಂಭ ನಡೆಯಲಿದೆ.

ಈ ಹಿನ್ನಲೆಯಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಪುತ್ಥಳಿ ಅನಾವರಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಗಣಿನಾಡಿನ ರಾಜಕೀಯ ಬೆಳವಣಿಗೆಗೆ ಹೊಸ ರೂಪ ನೀಡಲುವ ಸಾಧ್ಯತೆ ಇದೆ.

ವಾಲ್ಮೀಕಿ ಪುತ್ಥಳಿ ಅನಾವರಣ, ಗಡಗಿ ಚೆನ್ನಪ್ಪ ಸರ್ಕಲ್ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಸಿಎಂ ಡಿಕೆಶಿಯನ್ನು ಈ ತಿಂಗಳ ಅಂತ್ಯಕ್ಕೆ ಕರೆದು ಅದ್ದೂರಿ ಕಾರ್ಯಕ್ರಮವನದ ಮೂಲಕ

ಬಿಜೆಪಿಯ ಪಾದಯಾತ್ರೆಗೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜಾಗಲಿದೆಯಂತೆ.