ಬೆಂಗಳೂರು.ಜು4:- ಇಂಡಿಯಾಸ್ ಗಾಟ್ ಟ್ಯಾಲೆಂಟ್ ಖ್ಯಾತಿಯ ಖ್ಯಾತ ಜಾದೂಗಾರ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ವಿಕ್ಕಿ ಕ್ರಿಷ್ ಅದ್ಭುತ ಮ್ಯಾಜಿಕ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು.ಜು.4,5,11,12 ವಿಕ್ಕಿ ನಗರದಲ್ಲಿ ತಮ್ಮ ಜಾದೂ ಕೈಚಳಕ ಮುಂದುವರೆಸಲಿದ್ದಾರೆ.
ಪತ್ರಕರ್ತರು, ಛಾಯಾಗ್ರಾಹಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ವಿಕ್ಕಿ ಕೃಷ್ ತಮ್ಮಅಂತರರಾಷ್ಟ್ರೀಯ ಮಟ್ಟದ ಕೆಲವು ವಿಶಿಷ್ಟ ಮತ್ತು ಅಚ್ಚರಿಯ ಮ್ಯಾಜಿಕ್ ಪ್ರದರ್ಶನಗಳನ್ನು ಪ್ರೆಸ್ ಕ್ಲಬ್‍ನಲ್ಲಿ ನೀಡುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು.
ಭಾರತದ ಜಾದೂಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ವಿಕ್ಕಿ ಕ್ರಿಶ್ , ಮ್ಯಾಜಿಕ್, ಮೈಂಡ್ ರೀಡಿಂಗ್, ಮನೋವಿಜ್ಞಾನ, ಹಾಸ್ಯ ಹಾಗೂ ಭವ್ಯ ಭ್ರಮಾ ಕಲೆಗಳನ್ನು ಸಮರ್ಥವಾಗಿ ಸಂಯೋಜಿಸಿ ವಿಶಿಷ್ಟ ಮನರಂಜನಾ ಅನುಭವವನ್ನು ನೀಡುವುದಕ್ಕಾಗಿ ದೇಶಾದ್ಯಂತ ಖ್ಯಾತಿ ಗಳಿಸಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ವೃತ್ತಿಪರ ಅನುಭವ ಹೊಂದಿರುವ ಅವರು ಭಾರತ ಸೇರಿದಂತೆ ವಿದೇಶಗಳಲ್ಲಿಯೂ ತಮ್ಮ ನವೀನ ಹಾಗೂ ಪ್ರೇಕ್ಷಕರನ್ನು ನೇರವಾಗಿ ಒಳಗೊಳ್ಳುವ ಪ್ರದರ್ಶನಗಳ ಮೂಲಕ ಅಪಾರ ಮೆಚ್ಚುಗೆ ಪಡೆದಿದ್ದಾರೆ.
ಇಂಡಿಯಾಸ್ ಗಾಟ್ ಟ್ಯಾಲೆಂಟ್ನ ಫೈನಲಿಸ್ಟ್ ಆಗಿದ್ದ ವಿಕ್ಕಿ ಕ್ರಿಷ್, ಸಾಮಾಜಿಕ ಜಾಲತಾಣಗಳಲ್ಲಿಯೂ ಕೋಟ್ಯಾಂತರ ವೀಕ್ಷಣೆಗಳನ್ನು ಗಳಿಸಿರುವ ಜನಪ್ರಿಯ ಕಲಾವಿದರಾಗಿದ್ದಾರೆ. ಸಾಮಾನ್ಯ ಕ್ಷಣಗಳನ್ನು ಅಸಾಮಾನ್ಯ ಅನುಭವಗಳಾಗಿ ಪರಿವರ್ತಿಸುವ ಅವರ ಪ್ರತಿಭೆ ಅವರಿಗೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟಿದೆ. ಆಧುನಿಕ ಮ್ಯಾಜಿಕ್ನ ಅದ್ಭುತ ಕಸರತ್ತುಗಳು, ಅಸಾಧ್ಯವೆನಿಸುವ ಮನೋವೈಜ್ಞಾನಿಕ ಭ್ರಮೆಗಳು ಹಾಗೂ ಪ್ರೇಕ್ಷಕರ ಸಕ್ರಿಯ ಭಾಗವಹಿಸುವಿಕೆ ಅವರ ಪ್ರದರ್ಶನಗಳ ಪ್ರಮುಖ ಆಕರ್ಷಣೆಗಳಾಗಿವೆ.
ಬೆಂಗಳೂರು ಪ್ರವೇಶದ ಬಗ್ಗೆ ಮಾತನಾಡಿದ ಅವರು, ಈ ಶೋ ಬುದ್ಧಿವಂತಿಕೆ, ಹಾಸ್ಯ, ರಹಸ್ಯ ಹಾಗೂ ವಿಸ್ಮಯಗಳ ಪರಿಪೂರ್ಣ ಸಂಯೋಜನೆಯಾಗಿದ್ದು, ಕುಟುಂಬಗಳು, ಯುವಕರು ಹಾಗೂ ಮ್ಯಾಜಿಕ್ ಪ್ರೇಮಿಗಳಿಗೆ ಮರೆಯಲಾಗದ ಅನುಭವವನ್ನು ನೀಡಲಿದೆ ಎಂದು ಹೇಳಿದರು.
































