Home ಜಿಲ್ಲೆ ನಗರದ ಕಲ್ಯಾಣ ಸ್ವಾಮಿ ಮಠದಲ್ಲಿ  ದಸರಾ ನಾಳೆಯಿಂದ  ದೇವಿ ಮಹಾತ್ಮೆ ಪುರಾಣ

ನಗರದ ಕಲ್ಯಾಣ ಸ್ವಾಮಿ ಮಠದಲ್ಲಿ  ದಸರಾ ನಾಳೆಯಿಂದ  ದೇವಿ ಮಹಾತ್ಮೆ ಪುರಾಣ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಅ.10: ನಗರದ ಕಲ್ಯಾಣ ಸ್ವಾಮಿ ಮಠದಲ್ಲಿ ನಾಳೆ ಅ.11 ರಿಂದ 21 ರ ವರೆಗೆ ದಸರಾ ಹಬ್ಬದ ಅಂಗವಾಗಿ ಪ್ರತಿದಿನ ಸಂಜೆ 6 ರಿಂದ  ದೇವಿ ಮಹಾತ್ಮೆ ಪುರಾಣ ಪ್ರವಚನ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಹಾಗು ವಿವಿಧ ಮಠಾಧೀಶರಿಂದ ಆಶಿರ್ವಚನ, ಗಣ್ಯರಿಂದ ನುಡಿ ನಮನ ಇರಲಿದೆಂದು ಮಠದ ಶ್ರೀಗಳು ತಿಳಿಸಿದ್ದಾರೆ.

ಶಿಡಗಿನಮೊಳೆಯ ಚನ್ನವೀರಯ್ಯ ಸಾರಂಗ ಮಠ ಇವರಿಂದ ಪುರಾಣದ ವಾಚನೆ, ಡಾ.ಯು.ಶ್ರೀನಿವಾಸಮೂರ್ತಿ ಅವರಿಂದ ಪ್ರವಚನ ನೀಡಲಿದ್ದು. ರಾಘವೇಂದ್ರ ಅವರು ತಬಲಾ ವಾದನ ಮಾಡಲಿದ್ದಾರೆ.

ಅ.16 ರಂದು ಸಂಜೆ 5 ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಅ.19 ರಂದು ಬೆಳಿಗ್ಗೆ 7 ರಿಂದ ರುದ್ರಹೋಮ ನಡೆಯಲಿದೆ. ಅ.20 ರಂದು ಪುರಣ ಮಂಗಲ ನಡೆಯಲಿದೆ. ಅ.21 ರಂದು ಸಂಜೆ 6 ಕ್ಕೆ ನಗರದ ವಿವಿಧ ದೇವಸ್ಥಾನಗಳ ಪಲ್ಲಕ್ಕಿ ಮೆರವಣಿಗೆ ಬಂದ ಮೇಲೆ ಮಠದ ಆವರಣದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಶ್ರೀಗಳ ಸಾನಿದ್ಯದಲ್ಲಿ ನಡೆಯಲಿದೆ.