
ಬೆಂಗಳೂರು: ನಗರದ ಪ್ರಸಿದ್ದ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ, ‘ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್’ಗೆ ತುರ್ತು ಚಿಕಿತ್ಸಾ (ಕ್ರಿಟಿಕಲ್ ಕೇರ್) ವೈದ್ಯಕೀಯ ಉಪಕರಣಗಳನ್ನು ಸಂಸದರಾದ ತೇಜಸ್ವಿ ಸೂರ್ಯ ಅವರು ಹಸ್ತಾಂತರಿಸಿದ್ದಾರೆ.
ಸಂಸದರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ (MPLADS) ಅನುದಾನದ ಮೂಲಕ ಒದಗಿಸಲಾದ ಈ ಉಪಕರಣಗಳಲ್ಲಿ ಅತ್ಯಾಧುನಿಕ ‘ಮಲ್ಟಿ-ಪ್ಯಾರಾಮೀಟರ್ ಪೇಷೆಂಟ್ ಮಾನಿಟರ್‌ಗಳು’ ಮತ್ತು ಹದಿನಾರು ‘ಸಿರಿಂಜ್ ಇನ್ಫ್ಯೂಷನ್ ಪಂಪ್‌ಗಳು’ ಸೇರಿವೆ. ಇವು ಆಸ್ಪತ್ರೆಯಲ್ಲಿರುವ ಗಂಭೀರ ಸ್ಥಿತಿಯಲ್ಲಿರುವ ಕ್ಯಾನ್ಸರ್ ರೋಗಿಗಳ ಆರೋಗ್ಯ ಮೇಲ್ವಿಚಾರಣೆ ಮತ್ತು ನಿಖರವಾದ ಔಷಧ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಲಿವೆ. ಕಾರ್ಯಕ್ರಮದಲ್ಲಿ ಶಂಕರ ಕ್ಯಾನ್ಸರ್ ಫೌಂಡೇಶನ್‌ನ ಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ. ಬಿ. ಎಸ್. ಶ್ರೀನಾಥ್ ಅವರು ಉಪಸ್ಥಿತರಿದ್ದರು.


























